Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸುಶಾಂತ್ ಕೆರೆಮಠ ~ ಸಾರ್ಥಕತೆಯ 25ರ ಹುಟ್ಟುಹಬ್ಬ

ಯುವ ಪೀಳಿಗೆ ಎತ್ತಲೋ ಸಾಗುವ ಈ ಕಾಲಘಟ್ಟದಲ್ಲಿ ಪಿ ಎಚ್ ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸುಶಾಂತ್ ಕೆರೆಮಠ ತನ್ನ ಇಪ್ಪತೈದರ ಹುಟ್ಟು ಹಬ್ಬವನ್ನು ಗೋಮಾತೆಯೊಂದಿಗೆ ಆಚರಿಸಿದ ಸಂಭ್ರಮ.

ಕೊಡವೂರು ಲಕ್ಷ್ಮಿ ನಗರದಲ್ಲಿರುವ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ನಡೆಸುತ್ತಿರುವ ಗೋಶಾಲೆಯಲ್ಲಿ  ಸುಮಾರು ೮೦ ದನಗಳನ್ನು ಸಲಹು ತ್ತಿರುವರು . ಪ್ರತಿ ನಿತ್ಯ ಸುಮಾರು 13,000 ಕ್ಕಿಂತಲೂ ಅಧಿಕ ವೆಚ್ಚ  ಗೋಶಾಲೆಯ  ನಿರ್ವಹಣೆಗೆ ಬೇಕಾಗಿದೆ. ಅಲ್ಲಿರುವ 80% ದನಗಳು ಹಾಲು ಕೊಡುವುದಿಲ್ಲ. ಅವುಗಳ ಲಾಲನೆ ಪಾಲನೆ ಒಂದು ಸಾಹಸದ  ಕೆಲಸ.

ಅದಲ್ಲದೆ ಪೇಜಾವರ ಮಠ ನಡೆಸುತ್ತಿರುವ ನೀಲಾವರ ಗೋಶಾಲೆಯಲ್ಲಿ ಸುಮಾರು 1800 ಗೋವುಗಳ ನಿರ್ವಹಣೆ ಕೂಡ ಒಂದು ಸವಾಲು. ಗೋ ಸೇವಾ ಪುಣ್ಯದ  ಕೆಲಸವನ್ನು ಕೈಗೆತ್ತಿಕೊಳ್ಳಲು  ಹುಟ್ಟಿಕೊಂಡ ಸಮಾನ ಮನಸ್ಕರ ತಂಡವೇ ನೀಲಾವರ ಗೋಸೇವಾ ತಂಡ. ತನ್ನ ನಿರಂತರ ಗೋ ಗ್ರಾಸ ಸೇವೆಯಿಂದ ಸಾರ್ವಜನಿಕರು ಕೂಡಾ  ಈ ಪುಣ್ಯದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಾರಂಭ ಮಾಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಇತ್ತೀಚಿಗಿನ ದಿನಗಳಲ್ಲಿ ಪೂಜ್ಯ ಸ್ವಾಮಿಜಿಗಳ ನೇತೃತ್ವದಲ್ಲಿ  ಗೋ ಸೇವಾ ತಂಡದ ಕಾರ್ಯಕರ್ತರ ಸಹಾಭಾಗೀತ್ವ ದಲ್ಲಿ ಬದುಕಿನ ವಿಶೇಷ ದಿನಗಳನ್ನು ಗೊ ಸೇವೆ ಮಾಡುವುದರ ಮೂಲಕ ಸಂಭ್ರಮಿಸುವುದರೊಂದಿಗೆ ಒಂದಷ್ಟು ಪುಣ್ಯ ಕಾರ್ಯ ಮಾಡಲು ಕಾರಣರಾದ ಪೂಜ್ಯ ಪೇಜಾವರ ಶ್ರೀ ಗಳಿಗೆ ಹಾಗೂ ಅವರ ಗೋಸೇವಾ  ತಂಡಕ್ಕೆ ನಮೋ ನಮ್ಹ..

Leave a Reply

Your email address will not be published. Required fields are marked *