
ಕೋಟ: ಮಾನವನ ದೈನಂದಿನ ಒತ್ತಡಗಳ ನಿರ್ವಹಣೆಗೆ ಯೋಗ ಬಹು ಉಪಯೋಗಿ.ಎಳವೆಯಲ್ಲಿಯೇ ಬದುಕನ್ನು ಯೋಗದ ಶಿಸ್ತಿಗೆ ಒಳಪಡಿಸಿದರೆ ಕಲಿಕೆಯ ಏಕಾಗ್ರತೆಗೆ ಯೋಗ ಪೂರಕವಾಗುತ್ತದೆ ಮತ್ತು ಶೈಕ್ಷಣಿಕ ಉನ್ನತೀಕರಣಕ್ಕೆ ಹೇತುವಾಗುತ್ತದೆ ಎಂದು ಪ್ರಜ್ಞಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಪ್ರಕಾಶ್ ಭಟ್ ಅವರು ನುಡಿದರು.
ಅವರು ಇತ್ತೀಚಿಗೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಆರೋಗ್ಯ ಸಂಘದ ಆಶ್ರಯದಲ್ಲಿ ನಡೆದ ವಿಶ್ವಯೋಗ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಗತ್ ಫಾರ್ಮದ ವೈದ್ಯಕೀಯ ಪ್ರತಿನಿಧಿ ವೆಂಕಟೇಶ ಭಟ್ ಚೇಂಪಿ ಯೋಗದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪರು ಸ್ವಾಗತಿಸಿದರೆ ಆರೋಗ್ಯ ಸಂಘದ ಸಹಕಾರ್ಯದರ್ಶಿ ಕುಮಾರಿ ಪೂಜ್ಯಶ್ರೀ ವಂದಿಸಿದರು. ಕುಮಾರಿ ಅನಘಾ ಕಾರ್ಯಕ್ರಮವನ್ನು ನಿರೂಪಿಸಿದ್ದರು. ಬಳಿಕ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ನೆರವೇರಿಸಲಾಯಿತು.
ಇತ್ತೀಚಿಗೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಆರೋಗ್ಯ ಸಂಘದ ಆಶ್ರಯದಲ್ಲಿ ನಡೆದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಜ್ಞಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಪ್ರಕಾಶ್ ಭಟ್ ಭಾಗಿಯಾದರು. ಜಗತ್ ಫಾರ್ಮದ ವೈದ್ಯಕೀಯ ಪ್ರತಿನಿಧಿ ವೆಂಕಟೇಶ ಭಟ್ ಚೇಂಪಿ, ವೇದಿಕೆಯಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಉಪಸ್ಥಿತರಿದ್ದರು.
Leave a Reply