Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಧಿಕಾರ ದುರುಪಯೋಗ ಬಿಜೆಪಿ ಪ್ರತಿಭಟನೆ

ಕೋಟ:ಇತ್ತೀಚಿಗೆ ನಡೆದ ಕೋಟ ಸಿ.ಎ ಬ್ಯಾಂಕ್ ಚುನಾವಣೆಯಲ್ಲಿ  ನಿರ್ದೇಶಕಿಯಾಗಿ ಆಯ್ಕೆಗೊಂಡ ಉಮಾ ಗಾಣಿಗರನ್ನು ಸಹಕಾರಿ ಕಾಯ್ದೆಗೆ ವಿರುದ್ಧವಾಗಿ ನಿರ್ದೇಶಕ ಸ್ಥಾನದಿಂದ ವಜಾಮಾಡಿ, ಅಕ್ರಮ ಆದೇಶ ನೀಡಿದ ಕುಂದಾಪುರದ ಎ.ಆರ್ ಸುಕನ್ಯಾ ರವರ ಅಧಿಕಾರ ದುರುಪಯೋಗ, ರಾಜಕೀಯ ಪ್ರೇರಿತ ನಿಲುವು, ಭ್ರಷ್ಟಾಚಾರ, ಲಂಚಗುಳಿತನದ ಬಗ್ಗೆ ಕ್ರಮ ಜರುಗಿಸ ಬೇಕಾಗಿ ಹಾಗೂ ಅಧಿಕಾರಿಯನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕೆಂದು ಆಗ್ರಹಿಸಿ  ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ  ನೊಂದ ಸಮಸ್ತ ಸಹಕಾರಿಗಳು, ಸಂಘ ಸoಸ್ಥೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜೂ.27ರಂದು ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆ ಕುಂದಾಪುರ ಎ.ಆರ್ ಕಛೇರಿ ಎದುರು ಪ್ರತಿಭಟನೆ ನಡೆಸಲಿದೆ ಎಂದು ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *