
ಸರೋಜಿನಿ ಮಧುಸೂಧನ ಕುಶೆ ಸರಕಾರಿ ಪ್ರೌಢಶಾಲೆ, ವಡೇರ ಹೋಬಳಿ ಕುಂದಾಪುರ ಇಲ್ಲಿ ದಿನಾಂಕ 28-6-2025 ರಂದು ಪೋಷಕರ ಸಭೆ, ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ಶ್ಯಾನುಭಾಗ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ಪ್ರಭಾಕರ ಮಿತ್ಯಾಂತ ಇವರು ನೆರವೇರಿಸಿ ಶುಭಹಾರೈಸಿದರು. 2024 25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಎಲ್ಲಾ ಪೋಷಕರ ಸಮ್ಮುಖದಲ್ಲಿ ಎಸ್ ಡಿ ಎಂ ಸಿ ಗೆ ನೂತನ ಪೋಷಕ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಶಾಲಾ ವಿದ್ಯಾರ್ಥಿ ಸಂಸತ್ತಿನ ಪ್ರತಿನಿಧಿಗಳಿಗೆ ಪ್ರಮಾಣ ವಚನವನ್ನು ಬೋಧಿಸಲಾಯಿತು, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಚಂದ್ರ ಹೆಬ್ಬಾರ ಅವರು ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾದ ನಾರಾಯಣ ರಾಜು ದೇವಾಡಿಗ ಇವರು ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಶಿಕ್ಷಕರಾದ ಶ್ರೀ ವಿಠಲ ಇವರು ವಂದನಾರ್ಪಣೆಗೈದರು.
.
Leave a Reply