Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ- ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರ ಸಂಘ ವನಮಹೋತ್ಸವ ಕಾರ್ಯಕ್ರಮ
ಪರಿಸರದ ಬಗ್ಗೆ ನಿರ್ಲಕ್ಷ್ಯ ಬೇಡ – ಮಲ್ತೇಶ್

ಕೋಟ:ಪರಿಸರದ ಬಗ್ಗೆ ನಿರ್ಲಕ್ಷೀಯ ದೋರಣೆ ಬಿಟ್ಟು ಬಿಡು ಅದರ ಉಳಿವಿಗಾಗಿ ವರ್ಷವಿಡೀ ವನಮಹೋತ್ಸವ ಆಚರಿಸಿ ಎಂದು ಬ್ರಹ್ಮಾವರ ವಲಯ ಅರಣ್ಯ  ಇಲಾಖೆಯ ಅಧಿಕಾರಿ ಮಾಲ್ತೇಶ್ ಅಳಲಗಿರಿ ಹೇಳಿದರು.

ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ ಇವರ ವತಿಯಿಂದ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ಪರಿಸರ ಉಳಿದರೆ ಮನುಕುಲ ಉಳಿದಂತೆ ಇಲ್ಲವಾದಲ್ಲಿ ಅವನತಿ ಕಟ್ಟಿಟ್ಟ ಬುತ್ತಿ ಎಂದರಲ್ಲದೆ ಮನೆ ಮನೆಯಲ್ಲೂ ಪರಿಸರ ಉಳಿವಿಗಾಗಿ ಶ್ರಮಿಸಿ ಎಂದು ಕರೆ ನೀಡಿದರು.

ಇದೇ ವೇಳೆ ಸ್ಥಳೀಯರಿಗೆ  ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ  ಜ್ಯೋತಿ ಉದಯ್ ಕುಮಾರ್ ಗಿಡ ಹಸ್ತಾಂತರಿಸಿದರು. ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ ಇದರ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೋಸೆಸ್ ರೋಡ್ರಿಗಸ್, ಗೋಳಿ ಗರಡಿ ಕ್ಷೇತ್ರದ ಪಾತ್ರಿ ಗಳು ಶಂಕರ್ ಪೂಜಾರಿ, ಶಂಕರ್ ಕುಲಾಲ್, ಹಾಗೂ ಅನ್ಯನ್ಯತಾ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ, ಉಪಾಧ್ಯಕ್ಷ ಸೂರ್ಯ ಪೂಜಾರಿ, ಕಾರ್ಯದರ್ಶಿ ಅನಿಲ್ ಹಾಂಡ, ಗೋಪಾಲ ಐರೋಡಿ, ಸುರೇಶ್ ಪೂಜಾರಿ ಗುಂಡ್ಮಿ, ಟೂರಿಸ್ಟ್ ಅಧ್ಯಕ್ಷರು ರಾಘವೇಂದ್ರ ಓಣಿ ಮನೆ, ಹಾಗೂ ಅನ್ಯೋನ್ಯತ ಗೂಡ್ಸ್ ವಾಹನ ಚಾಲಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದಯ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.



ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ ಇವರ ವತಿಯಿಂದ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿಬ್ರಹ್ಮಾವರ ವಲಯ ಅರಣ್ಯ  ಇಲಾಖೆಯ ಅಧಿಕಾರಿ ಮಾಲ್ತೇಶ್ ಅಳಲಗಿರಿ ಗಿಡ ವಿತರಿಸಿ ಮಾತನಾಡಿದರು. ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೋಸೆಸ್ ರೋಡ್ರಿಗಸ್,ಗೋಳಿ ಗರಡಿ ಕ್ಷೇತ್ರದ ಪಾತ್ರಿ ಗಳು ಶಂಕರ್ ಪೂಜಾರಿ, ಶಂಕರ್ ಕುಲಾಲ್, ಹಾಗೂ ಅನ್ಯನ್ಯತಾ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಇದ್ದರು.

Leave a Reply

Your email address will not be published. Required fields are marked *