Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರಚೋದನೆ, ಪ್ರಚಾರದ ನಡುವೆ ನಿಜವಾದ ಸುದ್ದಿ ಉಳಿಸಿಕೊಳ್ಳಲು ಮಾಧ್ಯಮ ಕಾರ್‍ಯಕರ್ತರ ಸಂಕಟದ ಪಯಣ….

ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ. ಜು.೧ ಈ ಪತ್ರಿಕೆ ಪ್ರಕಪ್ರಕಟ ಗೊಂಡ ದಿನವಾಗಿದ್ದು ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲಕ್ಕೆ ತಕ್ಕಂತೆ ಅದು ಬದಲಾದ ವೈಖರಿ ಬಗ್ಗೆ ಜನಸಾಮಾನ್ಯ ರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈ ದಿನ ಕರ್ನಾಟದಲ್ಲಿ ‘ಪತ್ರಿಕಾ ದಿನಾಚರಣೆ’ ಆಚರಿಸಲಾಗುತ್ತದೆ.

ಕನ್ನಡ ಪತ್ರಿಕಾ ದಿನವನ್ನು ಪತ್ರಕರ್ತರು ಮತ್ತು ಓದುಗರು ಒಟ್ಟಾಗಿ ಸಂಭ್ರಮಿಸುವ ದಿನ. ಆದರೆ ಇಂದು ಪತ್ರಿಕಾ ದಿನಾಚರಣೆಯು ಪತ್ರಿಕೋದ್ಯಮದ ಶ್ರದ್ಧಾಂಜಲಿಯ ದಿನವಾಗಿ ಆಚರಿಸುವ ಅನಿವಾರ್ಯ ಸ್ಥಿತಿ ಬಂದಿರುವುದು ವಿಪರ್ಯಾಸ.

ಕಡಲಷ್ಟು ಸುಳ್ಳಿನ ನಡುವಲ್ಲೂ ಹನಿ ನಿಜವನ್ನೇ ಬೆಂಬಲಿಸಿ ಬೆಳೆಯುವ ಪತ್ರಿಕೋದ್ಯ ಮವೇ ಪತ್ರಿಕಾ ದಿನದ ಆಶಯ. ಪತ್ರಿಕಾ ದಿನಾಚರಣೆಯು ಅಭಿವ್ಯಕ್ತಿಯ ಸ್ವಾತಂತ್ರ್ಯ, ಸಾರ್ವಜನಿಕ ಚಿಂತನೆಗೆ ವೇದಿಕೆ ಮತ್ತು ಸತ್ಯಶೋಧನೆಗೆ ಸಮರ್ಪಿತವಾಗಿರುವ ವೃತ್ತಿಗೆ ಗೌರವ ಸಲ್ಲಿಸುವ ಸಮಯ. ಆದರೆ ಇಂದಿನ ವಾಸ್ತವತೆ ನೋಡುವಾಗ, ನಿಜವಾದ ಪತ್ರಿಕೋ ದ್ಯಮದ ಆದರ್ಶಗಳು ಜಾಹೀರಾತುಗಳ ಹೊಡೆತಕೆ ಸಿಲುಕಿ ನಲುಗಿ ಹೋಗಿರುವುದು ಕಳವಳಕಾರಿ ವಿಷಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಹುತಕ ಪತ್ರಿಕೆಗಳು ತಾವು ಸೇವೆ ಸಲ್ಲಿಸಬೇಕಾದ ಸಾರ್ವಜನಿಕರಿಗಿಂತ ಜಾಹೀರಾತುದಾರರಿಗೆ ಬದ್ಧರಾಗಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಸುದ್ದಿ ಎಂಬ ಹೆಸರಿನಲ್ಲಿ ವ್ಯಾಪಾರ, ಸರಕಾರ, ಮತ್ತು ಖಾಸಗಿ ಉದ್ಯಮಗಳ ನೀತಿ ಪ್ರಚಾರಕ್ಕೆ ವೇದಿಕೆಯಾಗುತ್ತಿರುವ ಪತ್ರಿಕೆಗಳ ಸಂಖ್ಯೆ ಹೆಚ್ಚಿವೆ ಎಂದರೆ ತಪ್ಪಾಗಲಾರದು.

ಪತ್ರಿಕೆಯ ಮುಖಪುಟದಿಂದ ಹಿಡಿದು ಕೊನೆಯ ಪುಟವರೆಗೆ ಸುದ್ದಿಯಂತೆಯೇ ಇರುವ ಜಾಹೀರಾತುಗಳು ಮುಗ್ದ ಓದುಗರನ್ನು ಮರುಳು ಗೊಳಿಸುತ್ತವೆ. ಈ ಬೆಳವಣಿಗೆಯು ಪತ್ರಿಕೋದ್ಯಮದ ನೈತಿಕತೆಗೆ ಪೆಟ್ಟು ನೀಡಿದ್ದು, ಈ ಮೂಲ ಜನಸಾಮಾನ್ಯರು ಪತ್ರಿಕೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿzರೆ.
ಜಾಹೀರಾತುಗಳ ಬೆನ್ನು ಬಿದ್ದ ಪತ್ರಿಕೆಗಳು, ನ್ಯಾಯ, ಸತ್ಯ ಮತ್ತು ಜನಪರತೆ ಎನ್ನುವ ಅಕ್ಷರ ಹಾದಿಯ ದಿಕ್ಕನ್ನು ಮರೆಯುತ್ತಿವೆ. ಅನೇಕ ವಿಷಯಗಳು, ಸಾರ್ವಜನಿಕರ ಹಿತಾಸಕ್ತಿ, ದುರ್ಬಲರ ಕಣ್ಣೀರು, ನ್ಯಾಯಕ್ಕಾಗಿ ಕಾತರಿಸುತ್ತಿರುವವರ ಧ್ವನಿ all sidelined for the sake of “commercial viability”.

ಇಂದು ಎಲ್ಲರೂ ಒಟ್ಟಾಗಿ ಪತ್ರಿಕೋದ್ಯ ಮದ ನೈತಿಕ ಬಲವನ್ನು ಪುನಶ್ಚೇತನಗೊಳಿಸ ಬೇಕಿದೆ. ಪತ್ರಿಕೆಗಳು ವಾಣಿಜ್ಯ ತತ್ವಗಳನ್ನು ಆಚೆಗಿಟ್ಟು ಮತ್ತೆ ಸಾರ್ವಜನಿಕ ಹಿತಾಸಕ್ತಿಗೆ ಸೇವೆ ಸಲ್ಲಿಸುವಂತಹ ನಿಷ್ಠುರ ನಿರ್ಧಾರ ಕೈಗೊಳ್ಳ ಬೇಕಿದೆ. ಪತ್ರಿಕೋದ್ಯಮ ವ್ಯಾಪಾರವಲ್ಲ, ಇದು ಧರ್ಮ. ಇದು ವೃತ್ತಿ ಅಲ್ಲ, ಇದು ಹೊಣೆಗಾರಿಕೆ- ಸಮಾಜಿಕ ಜವಾಬ್ದಾರಿ.

ಈ ಪತ್ರಿಕಾ ದಿನಾಚರಣೆಯು ಕೇವಲ ಆಚರಣೆ ಅಲ್ಲ, ಚಿಂತನೆಯ ಸಮಯ. ಪತ್ರಿಕೆಗಳು, ಪತ್ರಕರ್ತರು ಮತ್ತು ಓದುಗರು ಎಲ್ಲರೂ ಸೇರಿ ಒಂದು ಪ್ರಶ್ನೆ ಕೇಳಬೇಕಾಗಿದೆ. ನಾವು ಯಾರಿಗಾಗಿ ಬರೆಯುತ್ತಿವೆ?.

ಕೇವಲ ಫಾರ್ವರ್ಡ್ ನ್ಯೂಸ್ ಗಳಿಂದಾಗಿ ಬಹುಪಾಲು ಮಾಧ್ಯಮ ಓದುಗರಿಗೆ ಸತ್ಯ- ಸುಳ್ಳನ್ನು ವಿಭಜಿಸುವ ಶಕ್ತಿ ಕೊನೆಯಾಗುವಂತೆ ಮಾಡುತ್ತಿದೆ. ಇದರ ಮಧ್ಯೆ ನೈಜ ಸುದ್ದಿ ಕುರಿತು ಅಲ್ಲಲ್ಲಿ ಅನುಮಾನಗಳು ಮೂಡತೊಡಗಿದೆ.
ಮಾಹಿತಿ ಯುಗವು ಇಂದು ಮಾಹಿತಿ ಹೆಸರಿನಲ್ಲಿ ಹರಡುತ್ತಿರುವ ವದಂತಿಗಳು, ನಕಲಿ ಸುದ್ದಿಗಳು, ಉzಶಪೂರಿತ ನ್ಯೂಸ್ ಪೋರ್ಟಲ್‌ಗಳು, ಫೇಕ್ಸ್ ನ್ಯಾರೇಟಿವ್‌ಗಳು ಜನಮನವನ್ನು ಹೈಜಾಕ್ ಮಾಡುತ್ತಿರುವ ಯುಗ. ಇಂತಹ ಸಂದರ್ಭದಲ್ಲಿ ನೈಜ ಸುದ್ದಿಗಾಗಿ ಹೋರಾಟ ನಡೆಸುವ ಪತ್ರಕರ್ತರ ಜೀವನವೇ ಒಂದು ಸಮರವಾಗಿಬಿಟ್ಟಿದೆ.

ಒಂದು ಕಾಲದಲ್ಲಿ ಮಾಹಿತಿಗೆ ಮಲ್ಯ ವಿತ್ತು. ಇದೀಗ, ಅದು ವ್ಯವಹಾರದ ಪಣವಾ ಗುತ್ತಿದೆ. ನ್ಯೂಸ್ ಚಾನೆಲ್‌ಗಳು ಟಿಆರ್‌ಪಿ ಪೈಪೋಟಿಗೆ ಜಾರಿ ಬಿದ್ದು, ನಿಜ ಎಂಬ ಪರಿಕಲ್ಪನೆಯೇ ಕುಸಿಯುತ್ತಿವೆ. ಸಮಾಜದ ಮೂಲ ಸಮಸ್ಯೆಗಳನ್ನು ಬೆಳಕಿಗೆ ತರುವ, ನೆಲದ ನೆನಪಿನಲ್ಲಿ ಕಾಲಿಡುವ ಪತ್ರಕರ್ತರು ಮತ್ತು ಸ್ಥಳೀಯ ಮಾಧ್ಯಮಗಳು ನಿಜವಾದ ಸುದ್ದಿಗೆ ಜೀವಾಳವಾಗಿzರೆ. ಆದರೆ ಅಂತವರಿಗೆ ನಿರಂತರ ಬೆದರಿಕೆ, ಸೆನ್ಸಾರ್, ಇಲಾಖೆಯಿಂದ ಕಿರಿಕಿರಿ, ಆರ್ಥಿಕ ಬಿಕ್ಕಟ್ಟು ಮುಂತಾದ ಅಡೆತಡೆಗಳನ್ನು ಅಲ್ಲಗಳೆಯುವಂತಿಲ್ಲ.

ಸಾಮಾಜಿಕ ಮಾಧ್ಯಮದ ದುರ್ಬಳಕೆ: ಫೇಸ್‌ಬುಕ್, ವಾಟ್ಸಪ್, ಟ್ವಿಟ್ಟರ್‌ನಲ್ಲಿ ಹರಡುವ ತಾತ್ಕಾಲಿಕ ಸುದ್ದಿ ಗೀಳುಗಳು ನಿಜ ಸುದ್ದಿ ತಲುಪುವ ಮಾರ್ಗವನ್ನೇ ಮುಚ್ಚುತ್ತಿವೆ. ಫಾರ್ವರ್ಡ್ ಸಂಸ್ಕೃತಿಯ ಜಾಹಿರಾತು ವ್ಯವಸ್ಥೆ ನಂಬಿಕೆಯನ್ನು ನಶಿಸುತ್ತಿದೆ. ಜಹೀರಾತು ದಾರರು ಅನುಕೂಲಕರ ಸುದ್ದಿ ಬೇಕೆಂದು ಒತ್ತಡ ಹಾಕುವ ಕಾಲದಲ್ಲೂ ನಿಜವನ್ನು ಹೇಳುವ ಸಾಹಸವೇ ಪತ್ರಿಕೋದ್ಯಮದ ನೈತಿಕ ಸಮರ. ಪ್ರಚೋದನೆ, ಧರ್ಮ, ಜಾತಿ, ರಾಜಕೀಯ ಲಾಭಕ್ಕಾಗಿ ಸುದ್ದಿಯನ್ನು ಬಳಸಿ ಸಮಾಜದಲ್ಲಿ ವಿಭಜನೆ ಮಾಡುವ ತಂತ್ರಕ್ಕೆ ವಿರುದ್ಧವಾಗಿ ನಿಲ್ಲುವುದು, ನಿಜ ಸುದ್ದಿಗೆ ಕವಚದಂತೆ. ನಿಜ ಸುದ್ದಿ ಎಂಬುದು ಅಸಾಧಾರಣ ಸಾಹಸ ವಲ್ಲ.

ಅದು ನಮ್ಮ ಸಮಾಜವನ್ನು ಕಟ್ಟಿ ಹಿಡಿ ಯುವ ಅಸ್ತ್ರ. ಈ ಅಸ್ತ್ರವನ್ನು ಉಳಿಸಿ ಕೊಳ್ಳುವುದು ಪತ್ರಕರ್ತರಷ್ಟೇ ಅಲ್ಲ, ಓದುಗರೂ ಕೂಡ ಅದರ ಹೊಣೆ ಹೊತ್ತ ವರಾಗಬೇಕು. ನಿಜವನ್ನು ಕೇಳಿ, ಪರಿಶೀಲಿಸಿ, ಹಂಚಿಕೊಳ್ಳಿ ಇದು ನಿಜ ಸುದ್ದಿಗೆ ನಿಜ ಸಮರ. ವೃತ್ತಿಪರತೆ ಎಂದರೆ ನಿಜವನ್ನು ಮುಚ್ಚಿ, ಬೆನ್ನಟ್ಟಿ ಹೋಗುವುದು ಅಲ್ಲ, ಅದನ್ನು ಮಳೆಯಲ್ಲೂ, ಬಿರುಗಾಳಿಯಲ್ಲೂ ಹಿಡಿದು ತಂದು ಓದುಗರಿಗೆ ತಲುಪಿಸುವ ಧೈರ್ಯ. ಇದು ನಿಜ ಸುದ್ದಿಗಾಗಿ ಸಮರ ನಡೆಸುವ ಪತ್ರಕರ್ತನ ಆತ್ಮವಾಚೆ. ಇಂದು ಮಾಧ್ಯಮ ಕ್ಷೇತ್ರವು ನೈತಿಕತೆಯ ಒತ್ತಡಕ್ಕೆ ಒಳಗಾಗಿದ್ದು, ಪತ್ರಿಕೋದ್ಯಮ ಒಂದು ಜಾಹೀರಾತು ವ್ಯಾಪಾರವಾಗುತ್ತಾ ಹೋಗು ತ್ತಿದೆಯಾ? ಎಂಬ ಪ್ರಶ್ನೆ ಮೂಡುತ್ತಿದೆ. ನಿಜವನ್ನು ಹೇಳುವವರನ್ನು ಅಡಗಿಸುವ, ಬೆದರಿಸುವ, ದಿಕ್ಕು ತಪ್ಪಿಸುವ ಇಲ್ಲವೇ ಹಿಯಾಳಿಸುವ ಯತ್ನಗಳು ಮಾಧ್ಯಮ ಕ್ಷೇತ್ರವನ್ನು ತಲ್ಲಣಗೊಳಿಸುತ್ತಿವೆ.

ನಕಲಿ ಸುದ್ದಿ ಜಾಲ ನಿಜದ ನೆರಳಲ್ಲಿ ಸುಳ್ಳು ರಾಜಕಾರಣ: ಮಾತಿಗೆ ಮಲ್ಯ ಇದ್ದ ಕಾಲ ಅದು, ಅಕ್ಷರಕ್ಕೆ ಅರ್ಥವಿತ್ತು, ಸುದ್ದಿಗೆ ನಿಷ್ಠೆ ಇತ್ತು. ಈ ಇತ್ಯರ್ಥತೆ ಕಳೆದು ಹೋಗುತ್ತಿದೆ ಎಂಬ ಆತಂಕದ ಮಧ್ಯೆ, ಇನ್ನೂ ಕೆಲವರು ನಿಜ ಸುದ್ದಿಗಾಗಿ ನಿತ್ಯವೂ ಸಮರ ಸನ್ನದ್ಧರಾಗಿ zರೆ. ನಿಜವನ್ನೇ ಧ್ಯೇಯವಾಗಿ ಇಟ್ಟ ಪತ್ರಿಕೋದ್ಯಮದ ಪರಿಕಲ್ಪನೆಗೆ. ಭಾರತೀಯ ಪತ್ರಿಕೋದ್ಯಮದ ನಿಜವಾದ ತಾತ್ವಿಕ ದಾರ್ಶನಿಕತೆ: ಪತ್ರಿಕೋದ್ಯಮ ಎಂಬುದು ಕೇವಲ ಸುದ್ದಿ ಹರಡುವ ವ್ಯವಸ್ಥೆ ಅಲ್ಲ. ಅದು ಸಾರ್ವಜನಿಕ ಜವಾಬ್ದಾರಿಯ ಕಣ್ತೆರೆಸುವ ಒಂದು ಸಾಧನ. ಸಮಾಜದ ಬದಲಾವಣೆಗೆ ಒತ್ತಾಯಿಸುವ ಧ್ವನಿ, ದಬ್ಬಾಳಿಕೆಯ ವಿರುದ್ಧ ಜನರ ಸಂಕೇತ, ಪ್ರಜಪ್ರಭುತ್ವದ ನಾಲ್ಕನೇ ಅಸ್ತಿಭಾರ.
ಕನ್ನಡದಲ್ಲಿ ಪತ್ರಿಕೋದ್ಯಮದ ಆರಂಭ: ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ ೧೮೪೩ರ ಜುಲೈ ೧ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು. ಜರ್ಮನ್‌ನ ಮತ ಪ್ರಚಾರಕರಾದ ಮೋಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.

ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಕನ್ನಡ ಪತ್ರಿಕೆ ಮೂಲಕ ಅಕ್ಷರ ಉಳುಮೆ ಮಾಡಿದ ನಮ್ಮ ಪತ್ರಿಕಾ ಸಂಸ್ಕೃತಿಯ ಮೊಟ್ಟಮೊದಲ ಶಕ್ತಿ. ಈ ಹಾದಿಯು ನಿನ್ನೆಯೂ ಕಠಿಣ ವಾಗಿತ್ತು, ಇಂದೂ ಕೂಡ ಕಠಿಣವಾಗಿದೆ.
ಈಗಿನ ಪತ್ರಿಕೋದ್ಯಮದ ಬಿಕ್ಕಟ್ಟು ನಿಜ ಮತ್ತು ನಾಟಕದ ನಡುವೆ ತ್ರಿಶಂಕು ಸ್ಥಿತಿಯಂತಾಗಿದೆ. ಇಲ್ಲಿ ನೈಜ ಸುದ್ದಿಗಳು ಕಡಿಮೆಯಾಗಿ ಮತಾಭಿಪ್ರಾಯ ಹೆಚ್ಚಾಗು ತ್ತಿದೆ. ವಿಶ್ಲೇಷಣೆಗೆ ಬದಲು ವಕಾಲತ್ತು ನಡೆಯುತ್ತಿದೆ. ಅಷ್ಟೇ ಅಲ್ಲ ಕ್ರೋಢೀಕರಣೆ / ರಿಪೋರ್ಟ್‌ನ ಬದಲು ಕ್ಲಿಕ್‌ಬೈಟ್ ಬಿತ್ತರಣೆ ವ್ಯಾಪಕವಾಗಿದೆ.

ಉದಾಹರಣೆ: ಹೊಸದಾಗಿ ಉದಯಿಸುತ್ತಿರುವ ಪೇಯ್ಡ್ ನ್ಯೂಸ್ ಪೋರ್ಟಲ್ ಗಳು ಜಹೀರಾತಿನ ಕನ್ನಡಿಯಾಗಿದ್ದು, ದತ್ತಾಂಶಗಳ ಬದಲು ಭಾವನೆಗಳ ಆಧಾರದ ಮೇಲೆ ಸುದ್ದಿ ಪ್ರಕಟಿಸುತ್ತಿವೆ.

ನೈಜ ಪತ್ರಿಕೋದ್ಯಮದ ಆಶಯ ದೊಂದಿಗೆ ಪತ್ರಿಕೆಯಲ್ಲಿ ಯಾವುದೇ ಬಲಿಷ್ಠ ವ್ಯಕ್ತಿ ಅಥವಾ ಸಂಘಟನೆಯ ಭ್ರಷ್ಟತೆ ಕುರಿತು ಸುದ್ದಿ ಮಾಡಿದರೆ ಸದರಿ ಪತ್ರಿಕೆಗೆ ಜಹೀರಾತು ಸಿಗುವುದಿಲ್ಲ. ಅಂತಹ ಪತ್ರಿಕೆಯ ವಿರುದ್ಧ ಸಹದ್ಯೋಗಿ ಪತ್ರಕರ್ತ ಮಿತ್ರರೇ ಮಸಲತ್ತು ಮಾಡುತ್ತಾರೆ. ಪತ್ರಿಕೆ ಮನ್ನಣೆ ನೀಡುವುದಿಲ್ಲ. ವಿವಿಧ ಇಲಾಖೆಗಳಿಂದ ಕಾನೂನು ಸಮರ, ನೈತಿಕ ಬೆಂಬಲಕ್ಕೆ ಬದಲಾಗಿ ನ್ಯಾಯಾಲಯದ ನೋಟಿಸ್! ಅಷ್ಟೇ ಅಲ್ಲದೆ ಪತ್ರಿಕೋದ್ಯಮದಲ್ಲೂ ಕೂಡ ಇಂದು ಧರ್ಮದ ಅಂಧಕಾರ ಇಣುಕತೊಡಗಿಟದೆ.

ಪತ್ರಿಕಾ ದಿನದ ಸಂದೇಶ: ನಿಜ ಸುದ್ದಿಗೆ ಬೆಂಬಲ ನೀಡಿ (ಜಹೀರಾತಿಗೆ ಅಲ್ಲ!), ಪುನರ್ ಪರಿಶೀಲಿಸಿ, ವಿವೇಚಿಸಿ, ಕೇಳಿ, ಪ್ರಶ್ನಿಸಿ, ಜಾತಿ-ಧರ್ಮದ ಹಂಗಿಲ್ಲದೇ ನೈಜ ಸುದ್ದಿ ನೀಡುವ ಸ್ಥಳೀಯ ಪತ್ರಿಕೋದ್ಯಮ ಬೆಳೆಸುವ ಬದ್ಧತೆ ತೋರಿ. ಇದು ಪತ್ರಕರ್ತನ ಹಕ್ಕಿಗೆ ಓದುಗರು ನೀಡುವ ನೈತಿಕ ಬಲವಾಗಿದೆ.

ಪತ್ರಿಕೋದ್ಯಮ ಎಂಬುದು ಪ್ರಜಪ್ರಭುತ್ವದ ಜೀವಾಳವಾಗಿದೆ. ಯಾವುದೇ ವಿಚಾರ ಕುರಿತು ನಿಜ ಹೇಳುವುದು ಅಷ್ಟು ಸುಲಭವಲ್ಲ, ಅದರ ಬೆಲೆ ಭಾರೀ. ಆದರೆ ನಿಜವಿಲ್ಲದ ಸಮಾಜ ಅಸ್ತಿತ್ವವಿಲ್ಲದ ಸಮಾಜವಿದ್ದಂತೆ. ಈ ಪತ್ರಿಕಾ ದಿನದಂದು ಓದುಗರು, ಪತ್ರಕರ್ತರು, ಸಂಪಾದಕರು ಎಲ್ಲರೂ ನಿಜ ಪತ್ರಿಕೋದ್ಯಮದ ಪಥದ ಸಾಗೋಣ. ಅಕ್ಷರ ಪ್ರಾಮಾಣಿಕವಾದಾಗಲೆ ಅರ್ಥ ಪ್ರಬುದ್ಧವಾಗುತ್ತದೆ. ನಿಜವಾದಾಗಲೆ ಸಮಾಜ ಸುಧಾರಣೆಯತ್ತ ಸಾಗುತ್ತದೆ.

ಸಂಗ್ರಹ

Leave a Reply

Your email address will not be published. Required fields are marked *