News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ- ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆಯ ಅಂಗವಾಗಿ ಏಕ್ ಪೇಡ್ ಮಾ ಕೆ ನಾಮ್ ಕಾರ್ಯಕ್ರಮ
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಪರಿಸರ ಜಾಗೃತಿ ಮೂಡಿಸಬೇಕು

ಕೋಟ:ಪರಿಸರದ ಮೇಲೆ ಮನುಕುಲ ನಿರಂತರ ದರ್ಪ ತೊರಿಸುತ್ತಿದ್ದಾರೆ ಇದರ ದುಷ್ಪರಿಣಾಮ  ಈಗಾಗಲೇ ನಾವುಗಳು ಅನುಭವಿಸುತ್ತಿದ್ದೇವೆ ಈ ನಿಟ್ಟಿನಲ್ಲಿ ಮುಂದಿನ ಜನಾಂಗಕ್ಕಾಗಿ ಈಗಾಗಲೇ ನಾವುಗಳು ಗಿಡಮರಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.

ಸೋಮವಾರ ಸರಕಾರಿ ಹಿ.ಪ್ರಾ. ಶಾಲೆ, ಕೋಟ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಉಡುಪಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ.ಕೋಟ,ಎಸ್ ಸಿಐ ಉಡುಪಿ ಟೆಂಪಲ್  ಸಿಟಿ,ಕೋಟ ಲಿಜನ್,ಜೆಸಿಐ ಕಲ್ಯಾಣಪುರ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ  ಸಹಕಾರ ವರ್ಷಾಚರಣೆಯ ಅಂಗವಾಗಿ ಏಕ್ ಪೇಡ್ ಮಾ ಕೆ ನಾಮ್ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಎಂಬ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ನಾವಿದ್ದೇವೆ ವೈಭೋಗದ ಜೀವನಕ್ಕಾ ಕಾಂಕ್ರೀಟ್ ಕಾಡನ್ನು ನಿರ್ಮಿಸುತ್ತಿದ್ದೇವೆ ಇದರಿಂದ ಮಳೆಗಾಲದಲ್ಲೂ ತಾಪಮಾನ  ಅನುಭವಿಸುವಂತ್ತಾಗಿದೆ.

ಪ್ಲಾಸ್ಟಿಕ್ ಜಗತ್ತನ್ನು ಆವರಿಸಿಕೊಂಡಿದೆ ಈ ಹಿನ್ನಲ್ಲೆಯಲ್ಲಿ ಪ್ರಕೃತಿಯಲ್ಲಿ ಆಕ್ಸಿಜನ್ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಗ್ಗಿದೆ ಇದರಿಂದ ದಿನಕ್ಕೊಂದು ವಿವಿಧ ಖಾಯಿಲೆಗಳು ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬರುತ್ತಿದೆ ಇಷ್ಟಾಗಿಯೂ ಮನುಷ್ಯ ಜಾಗೃತ ವಹಿಸದಿರುವ ಬಗ್ಗೆ ಬೇಸರ ಹೊರಹಾಕಿ ಮಕ್ಕಳ ಮನೆ ಮನೆಯಲ್ಲೂ ಪ್ರತಿವರ್ಷ ಗಿಡ ನಟ್ಟು ಪೋಷಿಸುವ ಕಾರ್ಯ ಆಗಲಿ ಪ್ಲಾಸ್ಟಿಕ್ ಮುಕ್ತ ಪರಿಸಕ್ಕಾಗಿ ಶ್ರಮಿಸೋಣ ,ಸಹಕಾರ ಸಂಘ ಸೇರಿದಂತೆ ವಿವಿಧ ಸಂಘಸoಸ್ಥೆಗಳು ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು.

ಸಭೆಯ ಅಧ್ಯಕ್ಷತೆಯನ್ನು ಮೂರ್ತೆದಾರರ ಸೇವಾ ಸಹಕಾರಿ ಸಂಘ , ಕೋಟ ಇದರ ಅಧ್ಯಕ್ಷ  ಕೆ. ಕೊರಗ ಪೂಜಾರಿ ವಹಿಸಿ ಮಕ್ಕಳಿಗೆ ಗಿಡವನ್ನು ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರ ಯುನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ
ಅನುಷಾ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಚ್ ಹೊಳ್ಳ,  ಸೀನಿಯರ್ ಚೆಂಬರ್ ಇಂಟರ್‌ನ್ಯಾಷನಲ್  ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಚಿತ್ರ ಕುಮಾರ್, ಉಡುಪಿ ಟೆಂಪಲ್ ಸಿಟಿ ಲೀಜನ್ ಅಧ್ಯಕ್ಷ ಶಿವಾನಂದ ಶೆಟ್ಟಿಗಾರ್, ಜೇಸಿಐ ಕಲ್ಯಾಣಪುರ ಅಧ್ಯಕ್ಷೆ ಎವಿಟಾ ಡಿ’ಸೋಜ, ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷ ಆಯಸ್ಟೀನ್ ರಿಯೋನ್ಸ ವಾಜ್, ಜೆಸಿ ಸೀನಿಯರ್ ಚೆಂಬರ್ ಕೋಟ ಲೀಜನ್ ಅಧ್ಯಕ್ಷ ಕೇಶವ ಆಚಾರ್, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಾಜು ಪೂಜಾರಿ,ನಿರ್ದೇಶಕರಾದ ಮಂಜುನಾಥ ಪೂಜಾರಿ,ಕೃಷ್ಣ ಪೂಜಾರಿ ಪಿ,ಜಿ.ಸಂಜೀವ ಪೂಜಾರಿ, ಭಾರತಿ ಎಸ್ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಘದ ಸಿಬ್ಬಂದಿ ರಾಘವೇಂದ್ರ ಪೂಜಾರಿ ನಿರೂಪಿಸಿದರು. ಮೂರ್ತೆದಾರರ ಸೇವಾ ಸಹಕಾರಿ ಸಂಘ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ಮಕ್ಕಳಿಗೆ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿ ಭೋದಿಸಿ ಸ್ವಾಗತಿಸಿ ವಂದಿಸಿದರು.

ಸರಕಾರಿ ಹಿ.ಪ್ರಾ. ಶಾಲೆ, ಕೋಟ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಉಡುಪಿ
ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ.ಕೋಟ,ಎಸ್ ಸಿಐ ಉಡುಪಿ ಟೆಂಪಲ್  ಸಿಟಿ,ಕೋಟ ಲಿಜನ್,ಜೆಸಿಐ ಕಲ್ಯಾಣಪುರ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ  ಸಹಕಾರ ವರ್ಷಾಚರಣೆಯ ಅಂಗವಾಗಿ ಏಕ್ ಪೇಡ್ ಮಾ ಕೆ ನಾಮ್ ಕಾರ್ಯಕ್ರಮದಲ್ಲಿ ಪತ್ರಕರ್ತ ರವೀಂದ್ರ ಕೋಟ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರ ಯುನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ
ಅನುಷಾ ಕೋಟ್ಯಾನ್, ಮೂರ್ತೆದಾರರ ಸೇವಾ ಸಹಕಾರಿ ಸಂಘ , ಕೋಟ ಇದರ ಅಧ್ಯಕ್ಷ  ಕೆ. ಕೊರಗ ಪೂಜಾರಿ , ಮೂರ್ತೆದಾರರ ಸೇವಾ ಸಹಕಾರಿ ಸಂಘ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್  ಕೆಮ್ಮಣ್ಣು, ಸೀನಿಯರ್ ಚೆಂಬರ್ ಇಂಟರ್‌ನ್ಯಾಷನಲ್  ನಿಕಟಪೂರ್ವ ರಾಷ್ಟ್ರೀಯ  ಅಧ್ಯಕ್ಷ ಚಿತ್ರ ಕುಮಾರ್ ಇದ್ದರು.

Leave a Reply

Your email address will not be published. Required fields are marked *