
ಸಾವಳಗಿ: ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 2002-03ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳಿಂದ ನೂತನ ಕೊಡುಗೆಯಾಗಿ ನಾಮಫಲಕ ನೀಡಿದರು.
ಈ ವೇಳೆ ಹಳೆ ವಿದ್ಯಾರ್ಥಿ ಶಂಕರಗೌಡ ಚಿಕ್ಕನಗೌಡ ಮಾತನಾಡಿ – ನಮ್ಮದು ಬಹಳ ದಿನದ ಕನಸು ನಾವು ಕಲಿತ ಶಾಲೆಗೆ ಏನಾದರೂ ನೀಡಬೇಕೆಂದು – ಅದಕ್ಕೆ ನಾವು ಸ್ನೇಹ, ಪ್ರೀತಿಯ ಸೂಚಕವಾಗಿ ನಾಮಫಲಕ ನೀಡಿದ್ದೇವೆ ನಾಮಫಲಕಕ್ಕೆ ಅವಕಾಶ ಮಾಡಿಕೊಟ್ಟ ಶಾಲೆ ಗುರುಗಳಿಗೆ ಧನ್ಯವಾದ ತಿಳಿಸುತ್ತೇವೆ ಎಂದರು.
ಶಿಕ್ಷಕ ಸಂತೋಷ ತಳಕೇರಿ ಮಾತನಾಡಿ, ಬಹಳ ವರ್ಷ ಕಳೆದು ಹೋಗಿರುವ ಶಾಲೆ 1964 ರಲ್ಲಿ ಉದ್ಘಾಟನೆ ಆಗಿದೆ ಸುಮಾರು 60 ವರ್ಷಗಳ ನಂತರ ಪ್ರೌಢ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನಾಮಫಲಕ ನೀಡಿದ್ದು ಹೆಮ್ಮೆಯ ಸಂಗತಿ, ಕಲಿತಿರುವ ವಿದ್ಯಾರ್ಥಿಗಳು ಇವಾಗ ಉನ್ನತ ಹುದ್ದೆಯಲ್ಲಿದ್ದಾರೆ. ಈಗಿನ ವಿದ್ಯಾರ್ಥಿಗಳು ಕೂಡಾ ಶಾಲೆಯಲ್ಲಿ ಪ್ರಮುಖ ವಿದ್ಯೆ ಸಂಸ್ಕಾರ ಜೀವನ ಮಾರ್ಗಕ್ಕೆ ಬೇಕಾಗುವ ಎಲ್ಲವನ್ನು ಕಲಿಯಬೇಕು ಹಾಗೂ ಉನ್ನತ ಸ್ಥಾನದಲ್ಲಿ ಇರಲು ಪ್ರಯತ್ನಿಸಬೇಕು ಎಂದರು.
ಹುನ್ನೂರ ಹೈಸ್ಕೂಲ್ ಎಸ್ ಡಿ ಎಮ್ ಸಿ ಅಧ್ಯಕ್ಷ ರಮೇಶ ಹಳಮನಿ, ಶಿಕ್ಷಕ ಕಳ್ಳಿಮಠ, ಶಿಕ್ಷಕ ಜೇಡಿ ಮಠ, ಶಿಕ್ಷಕ ಹೂಗಾರ, ಶಿವಶಂಕರ ಮಠ, ಮಲ್ಲಪ್ಪ ಭುಜರುಖ, ಮುತ್ತಪ್ಪ ತೇಲಿ, ಉಮೇಶ ತೇಲಿ, ಶ್ರೀಶೈಲ್ ತೇಲಿ, ಮಂಜುನಾಥ್ ತೇಲಿ, ಆರ್ಮಿ ವಿನಾಯಕ ಚಿಂಚಖಂಡಿ, ಬಸವರಾಜ ಕೋರಿ, ಬಸವರಾಜ ಗುಳೇದ, ಶಾಂತು ರೂದಳಬಂಡಿ, ಶಂಕರ ಚಿಕ್ಕನಗೌಡರ, ಶಿವಾನಂದ ಸಾವಳಗಿ, ಪ್ರವೀಣ ಕೆರಕಲಮಟ್ಟಿ, ಧರೆಪ್ಪ ತೇಲಿ ಇತರರು ಇದ್ದರು.
Leave a Reply