ಆಫ್ರಿಕಾ ರಾಷ್ಟ್ರದ ಪ್ರವಾಸದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಡಾ.ಪ್ರಣವಾನಂದ ಸ್ವಾಮೀಜಿಯವರು ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ – ಉಗಾಂಡಾ ರಾಜ್ಯದ ಕಂಪಾಲಾದಲ್ಲಿ ಭಾರತದ ರಾಯಭಾರಿ ಕಚೇರಿಯು ಆಯೋಜಿಸಿದ್ದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದಿಂದ 2014ರಿಂದ ವಿಶ್ವಸಂಸ್ಥೆ ಮೂಲಕ ಜಗತ್ತಿನೆಲ್ಲೆಡೆ ಯೋಗ ದಿನಾಚರಣೆ ನಡೆಯುತ್ತಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಯೋಗವು ಅತ್ಯಂತ ಸಹಕಾರಿಯಾಗಿದೆ. ಯೋಗವುಜೀವನದ ಅವಿಭಾಜ್ಯ ಅಂಗವಾಗಬೇಕು. ಈ ಮೂಲಕ ಆರೋಗ್ಯಪೂರ್ಣ ಬದುಕು ನಡೆಸಲು ಸಾಧ್ಯ. ಹಾಗಾಗಿ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸೋಣ ಎಂದು ಸಲಹೆ ನೀಡಿದರು. ಜೀವನದ ಅವಿಭಾಜ್ಯ ಅಂಗವಾಗಬೇಕು. ಈ ಮೂಲಕ ಆರೋಗ್ಯಪೂರ್ಣ ಬದುಕು ನಡೆಸಲು ಸಾಧ್ಯ. ಹಾಗಾಗಿ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸೋಣ ಎಂದು ಸಲಹೆ ನೀಡಿದರು.
ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಇಂಡಿಯನ್ ಹೈ ಕಮಿಷನರ್ ಜಿತೇಂದ್ರ ನೇಗಿ, ಇಂಡಿಯನ್ ಅಸೋಸಿಯೇಷನ್ ಪ್ರೆಸಿಡೆಂಟ್ ಪರೇಶ್ ಮೆಹ್ರಾ, ಕನ್ನಡ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಂತೋಷ ರಾಠೋಡ, ಆಫ್ರಿಕನ್ ಸ್ಟಡಿ ಸೆಂಟರ್ ಜನರಲ್ ಸೆಕ್ರೆಟರಿ ಕೆನ್ನೆತ್ ಕಿಯಾಗ, ಈಸ್ಟ್ ಇಂಡಿಯಾ ಅಸೋಸಿಯೇಷನ್ ಪ್ರೆಸಿಡೆಂಟ್ ವಿಜಯ ರಘುನಾಥ ಕಿಶೋರಿ ಸೇರಿದಂತೆ ಭಾರತಿಯ ಸಂಸ್ಥೆಯವರು, ಭಕ್ತಾಧಿಗಳು ಭಾಗವಹಿಸಿದ್ದರು.











Leave a Reply