
ಕೋಟ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಸಿದ್ಧಿಯಿಂದ ಬಿಜೆಪಿ ಕಂಗೆಟ್ಟು ಅಪಪ್ರಚಾರಗೈಯುತ್ತಿದೆ ಇದು ಫಲಿಸದು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ಎಂ ಎ ಗಫೂರ್ ಹೇಳಿದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ಮುಂಭಾಗ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಸತ್ಯ ದರ್ಶನ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರದ ಬಿಜೆಪಿ ಅದಾನಿ ಮತ್ತು ಅಂಬಾನಿ ಸರಕಾರವಾಗಿದೆ ಬಡವರ ಬಗ್ಗೆ ಕಾಳಜಿ ವಹಿಸದೆ ಶ್ರೀಮಂತರ ಪರ ಕಾರ್ಯನಿರ್ವಹಿಸುತ್ತಿದೆ.
ಭಾರತ ದೇಶದಲ್ಲಿ ಬಡವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಉಲ್ಲೇಖಿಸಿದ್ದಾರೆ ಅವರದ್ದೆ ಪಕ್ಷದ ಮುಖಂಡ ಹೇಳಿದ ಮೇಲೆ ಇನ್ನೆನಿದೆ ,ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಬಡವರ ಬಗ್ಗೆ ಕಾಳಜಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಜನಮನದಲ್ಲಿ ಸಿದ್ಧರಾಮಯ್ಯ ಆಡಳಿತ ಪ್ರಸಿದ್ಧಿ ಪಡೆದಿದೆ.ಕೇಂದ್ರದ ಬಿಜೆಪಿ ಬಡವರ ಬದುಕಿಗೆ ಕೊಡಲಿ ಇಟ್ಟು ಆಡಳಿತ ನಡೆಸುತ್ತಿದೆ,ಬಿಜೆಪಿ ಗ್ರಾಮಪಂಚಾಯತ್ ಎದುರು ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೆಡಿನ ವಿಚಾರವಾಗಿದೆ ಎಂದು ಗುಡುಗಿದ ಅವರ ಮನಸ್ಸನ್ನು ಪರಿಶುದ್ಧಗೊಳಿಸಲಿ ಎಂದು ರಾಜ್ಯದ ಬಿಜೆಪಿ ಹಾಗೂ ಕೇಂದ್ರ. ಸರಕಾರದ ವಿರುದ್ಧ ಹರಿಹಾಯ್ದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಜಿ.ತಿಮ್ಮ ಪೂಜಾರಿ ಹಾಗೂ ಯುವ ಮುಖಂಡ ನೆಲ್ಲಿಬೆಟ್ಟು ಗಣೇಶ್ ಸ್ಥಳೀಯ ಬಿಜೆಪಿ ನಾಯಕರ ಹಾಗೂ ಗ್ರಾಮಪಂಚಾಯತ್ ಆಡಳಿತದ ಕಾರ್ಯವೈಕರಿಯ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್,ಕಾರ್ಯದರ್ಶಿ ಗೋಪಾಲ ಬಂಗೇರ, ಮುಖoಡರುಗಳಾದ ರವೀಂದ್ರ ಕಾಮತ್, ಅಚ್ಯುತ್ ಪೂಜಾರಿ, ಬಸವ ಪೂಜಾರಿ,ದಿನೇಶ್ ಬಂಗೇರ,ಪ್ರೇಮ ಮೆಂಡನ್, ವಸoತಿ ಪೂಜಾರಿ,ಶೇಖರ್ ಮರಕಾಲ, ಮಹಾಬಲ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ಮುಂಭಾಗ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಸತ್ಯ ದರ್ಶನ ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ಎಂ ಎ ಗಫೂರ್ ಭಾಗವಹಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್,ಕಾರ್ಯದರ್ಶಿ ಗೋಪಾಲ ಬಂಗೇರ,ಮುಖoಡರುಗಳಾದ ರವೀಂದ್ರ ಕಾಮತ್,ಅಚ್ಯುತ್ ಪೂಜಾರಿ ಮತ್ತಿತರರು ಇದ್ದರು.
Leave a Reply