Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಳ್ಳರನ್ನು ಬಂಧಿಸಿದ ಸಾವಳಗಿ ಪೊಲೀಸರು

ಸಾವಳಗಿ: ದ್ವಿಚಕ್ರವಾಹನ, ನೀರಿನ ಪಂಪ್ಸೆಟ್ ಹೊತಗಳ ಕಳ್ಳರನ್ನು ಬಂಧಸಿದ ಪೊಲೀಸರು. ಸಾವಳಗಿ ಸಂತೆಗೆ ಬಂದು ಶಿವಾಜಿ ಸರ್ಕಲ ಹತ್ತಿರ ಹಚ್ಚಿ ಸಂತೆಗೆ ಹೋಗಿದ್ದಾರೆ ಇದನ್ನು ಕಂಡ ನಮ್ಮ ಪೊಲೀಸ್ ಸಿಬ್ಬಂದಿಗಳು ಸೇರಿ ಬೈಕ ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿದ ಪೊಲೀಸರು 5,50,000 ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಇನ್ನೊಂದು ಪ್ರಕರಣ ಹೊತಗಳ ಕಳ್ಳತನ ಮಾಡಿದ ಹಾಗೂ ನೀರು ಹಾಯಿಸುವ ಮೋಟರಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.

3 ಹೊತಗಳನ್ನು ಹಾಗೂ 2 ಪಂಪ ಸೆಟ್ ಮೋಟಾರಗಳನ್ನು ಕಳ್ಳತನ ಮಾಡಿದ ಅಥಣಿ ತಾಲೂಕಿನ ಸುತ್ತಟ್ಟಿ ಗ್ರಾಮದವರಾದ ಆರೋಪಿಗಳು ಹನುಮಂತ ಸಿದ್ದಪ್ಪ ಕೋಳಂಬೆ, ಸುನಿಲ್ ಗಾಡಿವಡ್ಡರ್, ಪರಶುರಾಮ್ ಸವದಿ,  ಆರೋಪಿಗಳು 3 ಹೊತಗಳನ್ನು ಮಾರಾಟ ಮಾಡಿ ಖರ್ಚು ಮಾಡಿ ಉಳಿದ ಹಣವು 25,000 ರೂ, ಎರಡು ಪಂಪ್ಸೆಟ್ ಮೋಟಾರುಗಳ ಮೊತ್ತ 35, 000ರೂ, ಹೀಗೆ ಒಟ್ಟು 60,000 ಗಳನ್ನು ಈ ಮೂರು ಬಂದಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಜುಲೈ 9 ರಂದು ಸಾವಳಗಿಯಲ್ಲಿ ಸಂಶಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಹಿಡಿದು ವಿಚಾರಿಸಿದಾಗ ನಾನು ಹಿರೇಪಡಸಲಗಿ ಗ್ರಾಮದ ಪರಸಪ್ಪ ನಾಗಪ್ಪ ಮೋರೆ ಎಂದು ಒಪ್ಪಿಕೊಂಡಿದ್ದು, ಈ ಹಿಂದೆ ಹನ್ನೊಂದು ಬೈಕ್ ಗಳನ್ನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್ಪಿ ಮಹಾಂತೇಶ್ ಜಿದ್ದಿ, ಪ್ರಸನ್ನ ದೇಸಾಯಿ ಇವರ ಮಾರ್ಗದರ್ಶನದಲ್ಲಿ ಜಮಖಂಡಿ ಡಿವೈಎಸ್ಪಿ ಮತ್ತು ಸಿಪಿಐ ಮಲ್ಲಪ್ಪ ಮಡ್ಡಿ ಮಾರ್ಗದರ್ಶನದಲ್ಲಿ ಸಾವಳಗಿ ಪಿಎಸ್ಐ ಅಪ್ಪಣ್ಣ ಐಗಳಿ ನೇತೃತ್ವದಲ್ಲಿ  ಅಪರಾಧ ವಿಭಾಗದ ಪಿಎಸ್ಐ ನಾಗೇಶ್ ವಾಲಿಕಾರ, ಎಎಸ್ಐ ಎಸ್. ಪಿ. ಕೆಂಗಲ್ಗುತ್ತಿ, ಬಿ. ಬಿ ಎಡವೆ, ಸಿಬ್ಬಂದಿಗಳಾದ ಐ. ಎ. ನದಾಫ್, ಶಿವಾನಂದ ಭಜಂತ್ರಿ, ಭೀಮಪ್ಪ ಹೊಸಮನಿ, ಸುರೇಶ್ ಹುಚ್ಚಗೌಡ, ಶ್ರೀಶೈಲ್ ಜಂಬಗಿ, ಮೈಬೂಬ್ ಮುಲ್ಲಾ, ಇನ್ನಿತರ ಸಿಬ್ಬಂದಿಗಳು ಸೇರಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *