Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಿಲ್ಲೆಯಾದ್ಯಂತ ಇಂದು ಇ-ಖಾತಾ ಅಭಿಯಾನ

ಬಾಗಲಕೋಟೆ:  ಜುಲೈ 12 (ಹೊಸಕಿರಣ. Com) : ಜಿಲ್ಲೆಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜುಲೈ 13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಇ-ಖಾತಾ (ಕಂಪ್ಯೂಟರ ಉತಾರ) ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.

ಈ ಅಭಿಯಾನದಲ್ಲಿ ಎ ಖಾತಾ ಅಧಿಕೃತ ಸ್ವತ್ತುಗಳಾದ ನೋಂದಣಿ ಪ್ರಮಾಣ ಪತ್ರ, ತಕ್ಷಣ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ, ಬಾಕಿ ಸಾಲಿನಿಂದ ಚಾಲ್ತಿ ಸಾಲಿನವರೆಗೆ ತೆರಿಗೆ ಭರಣ ಮಾಡಿದರೆ ಪಾವತಿ ಮತ್ತು ನೀರಿನ ಶುಲ್ಕ ಪಾವತಿ, ಮಾಲೀಕರ ಪೋಟೋ ಮತ್ತು ಸ್ವತ್ತಿನ ಭಾವಚಿತ್ರ, ಗುರುತಿನ ಚೀಟಿ ನೀಡಲಾಗುತ್ತಿದೆ. ಬಿ-ಖಾತಾ ಅನಧಿಕೃತ ಸ್ವತ್ತುಗಳಾದ ನೋಂದಣಿ ಪ್ರಮಾಣ ಪತ್ರ, ಬಾಕಿ ಸಾಲಿನಿಂದ ಚಾಲ್ತಿ ಸಾಲಿನವರೆಗೆ ತೆರಿಗೆ ಭರಣ ಮಾಡಿದರೆ ಪಾವತಿ ಮತ್ತು ನೀರಿನ ಶುಲ್ಕ ಪಾವತಿ, ಮಾಲೀಕರಣ ಪೋಟೋ ಮತ್ತು ಸ್ವತ್ತಿನ ಭಾವಚಿತ್ರ ಹಾಗೂ ಗುರುಚಿನ ಚೀಟಿ ನೀಡಲಾಗುತ್ತದೆ.

ಅಭಿಯಾನ ಎಲ್ಲೆಲ್ಲಿ: ಬಾಗಲಕೋಟೆ ನಗರಸಭೆಯಿಂದ ವಿದ್ಯಾಗಿರಿ ಕಾಲೇಜ ಸರ್ಕಲ್ ಹತ್ತಿರ, ರಬಕವಿ-ಬನಹಟ್ಟಿ ನಗರಸಭೆಯಿಂದ ಬನಹಟ್ಟಿ ಈಶ್ವರಲಿಂಗ ಮೈದಾನ, ರಾಮಪೂರ ನೀಲಕಂಠೇಶ್ವರ ಮಠ, ಜಮಖಂಡಿ ನಗರಸಭೆಯಿಂದ ಕೊಂಚನೂರು ರೋಡ ಅಂಬೇಡ್ಕರ ಭವನ, ಮುಧೋಳ ನಗರಸಭೆಯಿಂದ ಉಪ್ಪಾರ ಸಮುದಾಯ ಭವನ ಜನತಾ ಪ್ಲಾಟ್, ಇಳಕಲ್ಲ ನಗರಸಭೆಯಿಂದ ಕೆಇಬಿ ರಸ್ತೆ ಮಾರ್ಖಂಡೇಶ್ವರ ಭವನ, ಟೀಚರ್ಸ ಕಾಲೋನಿ, ಗುಬ್ಬಿ ಪೇಟೆ ಕಂಠಿ ಸರ್ಕಲ್ ಹತ್ತಿರ, ಬಾದಾಮಿ ಪುರಸಭೆಯಿಂದ ಗ್ರಾಮ ಚಾವಡಿ ಹತ್ತಿರ, ಗುಳೇದಗುಡ್ಡ ಪುರಸಭೆಯಿಂದ ಬಾಲಾಜಿ ಹತ್ತಿರ, ಹುನಗುಂದ ಪುರಸಭೆಯಿಂದ ಸಂಗಮೇಶ್ವರ ಗುಡಿ ಹತ್ತಿರ ಅಭಿಯಾನ ನಡೆಯಲಿದೆ.

ಮಹಾಲಿಂಗಪುರ ಪುರಸಭೆಯಿಂದ ಬಸವನಗರದಲ್ಲಿರುವ ಬಸವೇಶ್ವರ ನಗರ, ತೇರದಾಳ ಪುರಸಭೆಯಿಂದ ಸಿದ್ದೇಶ್ವರ ಶಾಲೆ, ಕೆರೂರ ಪಟ್ಟಣ ಪಂಚಾಯತಿಯಿoದ ಗಡೇದ ದುರ್ಗಮ್ಮನ ಗುಡಿ ಹತ್ತಿರ, ಗೈಬುಸಾಬ ದರ್ಗಾ ಹತ್ತಿರ, ಬೀಳಗಿ ಪಟ್ಟಣ ಪಂಚಾಯತಿಯಿoದ ಗ್ರಾಮ ಚಾವಡಿ ಬಸವೇಶ್ವರ ಸರ್ಕಲ್ ಹತ್ತಿರ, ಸರ್ಕಾರಿ ಉರ್ದುಶಾಲೆ ಬಸವೇಶ್ವರ ನಗರ, ಅಮೀನಗಡ ಪಟ್ಟಣ ಪಂಚಾಯತಿಯಿoದ ಮಂಗಳಮ್ಮನ ಗುಡಿಯ ಹತ್ತಿರ ಕಮತಗಿಯಲ್ಲಿ ಗಾಂಧಿ ಚೌಕ ಹತ್ತಿರ, ಬೆಳಗಲಿಯಲ್ಲಿ ವಿವೇಕಾನಂದ ನಗರ, ಶಿರೂರಿನಲ್ಲಿ ಗ್ರಾಮ ಚಾವಡಿ ಹತ್ತಿರ ಹಾಗೂ ಲೋಕಾಪೂರದಲ್ಲಿ ದುರ್ಗಾದೇವಿ ಗುಡಿ ಹತ್ತಿರ ಜನತಾ ಪ್ಲಾಟ್‌ನಲ್ಲಿ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲಾತಿಗಳೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *