
ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಕಸ ಎಸೆಯುವ ಸ್ಥಳಗಳಲ್ಲಿ ಹೊಸ ಕಾಯಕಲ್ಪ ನೀಡಲಾಗುತ್ತಿದೆ ಇದರ ಭಾಗವಾಗಿ ಹಲವು ಭಾಗಗಳಲ್ಲಿ ಈಗಾಗಲೇ ಬ್ಲ್ಯಾಕ್ ಸ್ಪಾಟ್ ಸ್ಥಳಗಳಾಗಿ ಗುರುತಿಸಲಾಗಿದ್ದು ಅಲ್ಲಿ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಕಸದಿಂದ ರಸ ಎನ್ನವಂತೆ ಪೌರಕಾರ್ಮಿಕರು ಬ್ಲ್ಯಾಕ್ ಸ್ಪಾಟ್9ನಲ್ಲಿ ಸಿಕ್ಕ ವಸ್ತುಗಳಿಗೆ ನವ ವಿನ್ಯಾಸ ನೀಡಿ ಸಾರ್ವಜನಿಕರಿಗೆ ವಿಶೇಷ ವೀಕ್ಷಣಾ ಸ್ಥಳವಾಗಿ ಮಾರ್ಪಾಡುಗೊಳಿಸಲಾಗಿದೆ ಎಂದು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಹೇಳಿದರು.
ಶುಕ್ರವಾರ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಗುಂಡ್ಮಿ ರಾಷ್ಟ್ರೀಯ ಹೆದ್ದಾರಿ 66ರ ಪರಿಸರದಲ್ಲಿ ತ್ಯಾಜ್ಯ ಎಸೆಯುವ ಸ್ಥಳಕ್ಕೆ ಹೊಸ ರೂಪ ನೀಡಿ ಅದನ್ನು ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರು ಕಸಗಳನ್ನು ಎಸೆಯದೆ ಪಟ್ಟಣಪಂಚಾಯತ್ ಗೆ ನೀಡಲು ಸಲಹೆ ನೀಡಿದರಲ್ಲದೆ ಒಂದೊಮ್ಮೆ ಎಸೆದರೆ ಬಾರಿ ದಂಡ ವಿಧಿಸುವುದಾಗಿ ಎಚ್ಚರಿಸಿದರು.
ಪರಿಶೀಲನೆಗೆ ಆಗಮಿಸಿದ ಗದಗ ಜಿಲ್ಲಾ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣಪಂಚಾಯತ್ ಸ್ವಚ್ಚ ಭಾರತ ಮಿಷನ್ (ನ)2.0 ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐ.ಇ.ಸಿ) ಮತ್ತು ಸಾಮರ್ಥಾ್ಯಭಿವೃಧ್ದಿ (ಸಿ.ಬಿ) ಅನುಷ್ಟಾನಕ್ಕಾಗಿ ತ್ಯಾಜ್ಯ ನಿರ್ವಹಣೆಯ ಸಂಬAಧ ಅಧ್ಯಯನ ಪ್ರವಾಸ ಕುರಿತು ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ರಾಜ್ಯದ ಗದಗ ಜಿಲ್ಲಾ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣಪಂಚಾಯತ್ ಅಧ್ಯಕ್ಷ , ಸದಸ್ಯರ ತಂಡ ಭೇಟಿ ನೀಡಿ ಪರಿಶೀಲಿಸಿ ಇಲ್ಲಿನ ಕಾರ್ಯವೈಕರಿಗೆ ಹರ್ಷ ವ್ಯಕ್ತಪಡಿಸಿ ಸಂವಹನ ನಡೆಸಿತು.
ಗದಗ ಜಿಲ್ಲಾ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣಪಂಚಾಯತ್ ಅಧ್ಯಕ್ಷ ಫಕೀಪ್ಪ ಮಲ್ಲಿ,ಉಪಾಧ್ಯಕ್ಷ ಕುಮಾರ ಸ್ವಾಮೀ ,ಹದಿನೇಳು ಸದಸ್ಯರು,ಪ್ರಭಾರ ಕಿರಿಯ ಆರೋಗ್ಯ ನೀರಿಕ್ಷಕ ರಕ್ಷತ್ ಎಂ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಸ್ಥಾಯೀ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ,ಉಪಾಧ್ಯಕ್ಷೆ ಗಿರಿಜಾ ಪೂಜಾರಿ,ಸದಸ್ಯರಾದ ಸಂಜೀವ ದೇವಾಡಿಗ, ಬಿಲ್ ಕಲೆಕ್ಟರ್ ಚಂದ್ರಶೇಖರ್ ಸೋಮಯಾಜಿ, ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಮತ್ತಿತರರು ಉಪಸ್ಥಿತರಿದ್ದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಗುಂಡ್ಮಿ ರಾಷ್ಟ್ರೀಯ ಹೆದ್ದಾರಿ 66ರ ಪರಿಸರದಲ್ಲಿ ತ್ಯಾಜ್ಯ ಎಸೆಯುವ ಸ್ಥಳಕ್ಕೆ ಹೊಸ ರೂಪ ನೀಡಿ ಅದನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಉದ್ಘಾಟಿಸಿದರು.ಗದಗ ಜಿಲ್ಲಾ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣಪಂಚಾಯತ್ ಅಧ್ಯಕ್ಷ ಫಕೀಪ್ಪ ಮಲ್ಲಿ,ಉಪಾಧ್ಯಕ್ಷ ಕುಮಾರ ಸ್ವಾಮೀ ,ಹದಿನೇಳು ಸದಸ್ಯರು,ಪ್ರಭಾರ ಕಿರಿಯ ಆರೋಗ್ಯ ನೀರಿಕ್ಷಕ ರಕ್ಷತ್ ಎಂ, ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಸ್ಥಾಯೀ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ ಇದ್ದರು.
Leave a Reply