
ಕೋಟ: ನಿರಂತರವಾದ ಅಭ್ಯಾಸದಿಂದ ಯಶಸ್ಸನ್ನು ಪಡೆಯಬಹುದು, ವಿದ್ಯಾರ್ಥಿಗಳಾದ ತಾವು ಶಿಸ್ತು, ದೇಶಪ್ರೇಮ ಅಳವಡಿಸಿಕೊಳ್ಳುವುದು ತೀರಾ ಅಗತ್ಯ. ಜೊತೆಗೆ ನಾಗರಿಕ ಪ್ರಜ್ಞೆ ಮತ್ತು ನಾಗರಿಕ ಶಿಷ್ಠಾಚಾರ ಅರಿಯಲು ‘ಶಾಲಾ ನೆರವಿ’ ಉತ್ತೇಜಕ ಎಂದು ವಿಶ್ರಾಂತ ಉಪನ್ಯಾಸಕರಾದ ಮಂಜುನಾಥ ಉಪಾಧ್ಯ ನುಡಿದರು.
ಅವರು ವಿವೇಕ ಬಾಲಕಿಯರ ಪ್ರೌಢಶಾಲೆಯ ಶಾಲಾ ನೆರವಿ ಕಾರ್ಯಕ್ರಮದಲ್ಲಿ ಶಾಲೆಗೆ ಕೊಡುಗೆಯಾಗಿ ಪೋರ್ಟೆಬಲ್ ಧ್ವನಿವರ್ಧಕ ನೀಡಿ ಮಾತನಾಡಿದರು. ತಮ್ಮ ಬಾಲ್ಯದ ಜೀವವನ್ನು ನೆನಪಿಸಿಕೊಳ್ಳುತ್ತಾ ತಮ್ಮ ಕಷ್ಟದ ಹಾದಿಯನ್ನು ಮಕ್ಕಳಿಗೆ ಉದಾಹರಣೆ ಸಹಿತ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪ ಸ್ವಾಗತಿಸಿ , ಧ್ವನಿವರ್ಧಕವನ್ನು ಸ್ವೀಕರಿಸಿದರು. ಶಾಲಾ ನಾಯಕಿ ಇಂಪನಾ ಕಾರ್ಯಕ್ರಮ ನಿರೂಪಿಸಿದರೆ ಹಿರಿಯ ಶಿಕ್ಷಕರಾದ ನರೇಂದ್ರ ಕುಮಾರ್ ವಂದಿಸಿದರು.
ವಿವೇಕ ಬಾಲಕಿಯರ ಪ್ರೌಢಶಾಲೆಯ ಶಾಲಾ ನೆರವಿ ಕಾರ್ಯಕ್ರಮದಲ್ಲಿ ಶಾಲೆಗೆ ಕೊಡುಗೆಯಾಗಿ ಪೋರ್ಟೆಬಲ್ ಧ್ವನಿವರ್ಧಕವನ್ನು ವಿಶ್ರಾಂತ ಉಪನ್ಯಾಸಕರಾದ ಮಂಜುನಾಥ ಉಪಾಧ್ಯ ನೀಡಿದರು. ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪ, ಶಾಲಾ ನಾಯಕಿ ಇಂಪನಾ ಇದ್ದರು.
Leave a Reply