
ಕೋಟ : ಕೋಟ ವಿವೇಕ ವಿದ್ಯಾ ಸಂಸ್ಥೆಗಳ ಕಾಲೇಜಿನ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಇತ್ತೀಚಿಗೆ ಚುನಾವಣೆ ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ಮೊದಲ ದಿನವೇ ಮತದಾನದ ಕುರಿತಾಗಿ ತಿಳಿಯಪಡಿಸಿ ವಿದ್ಯಾರ್ಥಿಗಳಿಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಲಾಯಿತು. ಮೊದಲಿಗೆ ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆವಿಕೆ ಹೀಗೆ ಚುನಾವಣೆ ಪ್ರಕ್ರಿಯೆ ನಡೆದು ಅಭ್ಯರ್ಥಿಗಳು ಪ್ರತಿ ತರಗತಿಗೆ ತೆರಳಿ ಮತ ಯಾಚಿಸಿದರು.
ಕಾಲೇಜು ವಿಭಾಗದಿಂದ ಹತ್ತು ಜನ ಸ್ಪರ್ಧಾಳು, ಹೈಸ್ಕೂಲ್ ವಿಭಾಗದಿಂದ ಮೂರು ಜನ ಅಭ್ಯರ್ಥಿಗಳು ಭಾಗವಹಿಸಿದ್ದರು.
ಚುನಾವಣಾ ಪ್ರಕ್ರಿಯೆ ಮೊಬೈಲ್ ಇವಿಎಂ ಆಪ್ ಮೂಲಕ ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಕಾಲೇಜು ವಿಭಾಗದಿಂದ ದ್ವಿತೀಯ ಪಿಯುಸಿಯ ಸುಶಾನ್ ಶೆಟ್ಟಿ, ಕಾಲೇಜು ವಿದ್ಯಾರ್ಥಿ ಮುಖಂಡನಾಗಿ, ಪ್ರೌಢಶಾಲಾ ವಿಭಾಗದಿಂದ 10ನೇ ತರಗತಿಯ ಸಮೃದ್ಧ ಜೀವನ್ ಉಪಮುಖಂಡನಾಗಿ ಆಯ್ಕೆಯಾದರು.
ಎಲ್ಲಾ ಉಪನ್ಯಾಸಕ ಮತ್ತು ಅಧ್ಯಾಪಕರು ಸಿಬ್ಬಂದಿ ವರ್ಗದವರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದರು.
ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಪ್ರೇಮಾನಂದ ಶುಭ ಹಾರೈಸಿದರು. ಚುನಾವಣಾ ಸಂಯೋಜಕರಾದ ಗಣೇಶ್ ಕುಮಾರ್ ಶೆಟ್ಟಿ, ರತಿ ಮೇಡಂ ಚುನಾವಣಾಸಿದ್ಧತೆಗಳನ್ನು ಮಾಡಿಕೊಟ್ಟರು. ಸಂಜೀವ.ಜಿ ವಂದಿಸಿದರು.
ಕೋಟ ವಿವೇಕ ಕಾಲೇಜು ಮುಖಂಡ ಹಾಗೂ ಉಪಮುಖಂಡ ಸ್ಥಾನಕ್ಕೆ ಸಂಸದೀಯ ಮಾದರಿಯಲ್ಲಿ ಚುನಾವಣೆ ಇತ್ತೀಚಿಗೆ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ, ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಪ್ರೇಮಾನಂದ, ಚುನಾವಣಾ ಸಂಯೋಜಕರಾದ ಗಣೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Leave a Reply