Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬನ್ನಂಜೆ 90 ಉಡುಪಿ ನಮನ~ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ :- ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಪೂರ್ವವಾದ ವಿಧ್ವತ್ ನಿಂದ ಹೆಸರು   ಮಾಡಿದ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಉಡುಪಿ ಅಭಿಮಾನಿಗಳ ವತಿಯಿಂದ ಅಗಸ್ಟ್ 3ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿರುವ “ಬನ್ನಂಜೆ 90 ಉಡುಪಿ ನಮನ ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಶ್ರೀ  ಸುಗುಣೇಂದ್ರ ತೀರ್ಥ ಶ್ರೀಪಾದರು ಭಾನುವಾರ ಬಿಡುಗಡೆಗೊಳಿಸಿದರು.

ಈ ಸಂದಭ೯ದಲ್ಲಿ ಆಶೀರ್ವಚನ ನೀಡಿ, ನಮ್ಮ ಪರ್ಯಾಯದ ಅವಧಿಯಲ್ಲಿ ನಡೆಯುತ್ತಿರುವ ಮಂಡಲೋತ್ಸವ ಸಂದರ್ಭದಲ್ಲಿ  ಬನ್ನಂಜೆ ಉಡುಪಿ ನಮನ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಅಭಿನಂದನೀಯ.   ಬನ್ನಂಜೆಯವರು ತನ್ನ ಅಪಾರ ವಾದ ಜ್ಞಾನದಿಂದ ಎಲ್ಲರ ಮನಸ್ಸನ್ನು ಆಕಷಿ೯ಸಿದವರು. ಅವರ ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ,   ಬನ್ನಂಜೆ ಉಡುಪಿ ನಮನ ಕಾರ್ಯ ಕ್ರಮದ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಸ್ಟ್ರೋ ಮೋಹನ್,  ಸಂಚಾಲಕರಾದ  ಜನಾದ೯ನ ಕೊಡವೂರು ,ರವಿರಾಜ್ ಹೆಚ್.ಪಿ, ಕೋಶಾಧಿಕಾರಿ ಪ್ರೊ. ಸದಾಶಿವ್ ರಾವ್ ಉಪಾಧ್ಯಕ್ಷರಾದ ಪ್ರೊಫೆಸರ್ ಶಂಕರ್, ನಾರಾಯಣ ಮಡಿ, ಡಾ. ಭಾರ್ಗವಿ ಐತಾಳ್, ಡಾ ರಾಮಚಂದ್ರ ಐತಾಳ್ , ಕಾರ್ಯದರ್ಶಿಗಳಾದ ರಾಜೇಶ್ ಭಟ್ ಪಣಿಯಾಡಿ, ಪೂರ್ಣಿಮಾ ಜನಾರ್ದನ್ , ಪ್ರಭಾಕರ ತುಮರಿ, ಹಿರಿಯರಾದ ಪ್ರಭಾವತಿ ವಿಶ್ವನಾಥ್ ಶೆಣೈ, ಭಾಸ್ಕರ್ ರಾವ್ ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಭು ಕರ್ವಾಲು, ಸುಶಾಂತ್ ಕೆರೆಮಠ, ಮಹೇಶ್ ಠಾಕೂರ್,  ಸತೀಶ್ ಕೊಡವೂರು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜಯಶ್ರೀ ಉಡುಪಿ.  ಸುಮಿತ್ರ ಕೆರೆಮಠ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಡಾ.ಗಣೇಶ್ ಪ್ರಸಾದ್ ನಾಯಕ್, ರಾಮಾಂಜಿ, ಉಪಸ್ಥಿತರಿದ್ದರು

Leave a Reply

Your email address will not be published. Required fields are marked *