
ಕೋಟ: ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಾತೃಸಂಸ್ಥೆ ಕೋಟ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಇದೇ ಜು..19ರಂದು ಸಾಮಾಜಿಕ ಕಾರ್ಯಕ್ರಮ ಪ್ರಸ್ತುತ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳ ಸ್ಥಿತಿಗತಿ ಕುರಿತಂತೆ ಮಾರ್ಗದರ್ಶನ ಕಾರ್ಯಕ್ರಮ.12ನೇ ಮಾಲಿಕೆ ಅರಿವು ನಿಮಗಿರಲಿ ನೆರವು ಶೀರ್ಷಿಕೆಯಡಿ ಹಂದಟ್ಟು ಮಹಿಳಾ ಬಳಗ ಕೋಟ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಹಂದಟ್ಟು ಇವರ ಸಂಯೋಜನೆಯೊಂದಿಗೆ ಇಲ್ಲಿನ ಹಂದಟ್ಟು ಹಾಲು ಉತ್ಪಾದಕರ ಸಭಾಂಗಣದಲ್ಲಿ ಸಭಾಂಗಣದಲ್ಲಿ ಪೂರ್ವಾಹ್ನ 11- 30ಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಅಂತಾರಾಷ್ಟ್ರೀಯ ಜೆಸಿ ಸಂಸ್ಥೆಯ ತರಬೇತುದಾರರಾದ ಅಕ್ಷತಾ ಗಿರೀಶ್ ಭಾಗವಹಿಸಲಿದ್ದಾರೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಗಿಳಿಯಾರು ತಿಳಿಸಿದ್ದಾರೆ.
Leave a Reply