
ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ಕರ್ನಾಟಕ ಸರ್ಕಾರದ ಮುಜರಾಯಿ ಮತ್ತು ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ಅವರನ್ನು ಸ್ವತಃ ಭೇಟಿ ಮಾಡಿ ಗೌರವವಿಧಾನದಿಂದ ಸಸಿ ಹಸ್ತಾಂತರ ನಡೆಸಿದರು.

ಈ ಭೇಟಿಯಲ್ಲಿ ಉಡುಪಿ ಜಿಲ್ಲೆಯ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಇದು ದಿವಂಗತ ಪತ್ರಿಕೋದ್ಯಮಿ ಭೀಷ್ಮ ರಘುರಾಮ ಶೆಟ್ಟಿಯವರ ಸ್ವಗ್ರಾಮದಲ್ಲಿದೆ ಎಂಬ ಕಾರಣದಿಂದಲೂ, ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ದೇವಸ್ಥಾನದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವ ಕುರಿತು ಮನವಿ ಸಲ್ಲಿಸಲಾಯಿತು.
ಇದೇ ವೇಳೆ, ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಓಡಾಡುತ್ತಿರುವ ಕೋಟ ವಿವೇಕ ಜೂನಿಯರ್ ಕಾಲೇಜ್– ಕೊಕ್ಕರ್ಣೆ –ಮಂದಾರ್ತಿ ಮಾರ್ಗದ ಬಸ್ ಸಂಪರ್ಕವು ತುಂಬಾ ಅವಶ್ಯಕವಾಗಿದೆ ಎಂಬುದನ್ನು ಮನಗಂಡು, ತಕ್ಷಣ ಸರಕಾರಿ ಬಸ್ ಸೇವೆ ಪ್ರಾರಂಭಿಸುವಂತೆ ಸಹ ಮನವಿ ಮಾಡಲಾಯಿತು.

ಯುವ ನಾಯಕರ ವಿಷಯಗಳಿಗೆ ಸದಾ ಸ್ಪಂದಿಸುವ, ಶಿಸ್ತಿನಿಂದ ಕೂಡಿದ ರಾಜಕೀಯ ನಾಯಕತ್ವದ ಮಾದರಿಯಾಗಿರುವ ಶ್ರೀ ರಾಮಲಿಂಗ ರೆಡ್ಡಿರವರು, ಈ ಎಲ್ಲ ಮನವಿಗೆ ಉದಾರತೆ ಹಾಗೂ ಮಾನವೀಯತೆ- ಗಳೊಂದಿಗೆ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚನೆ ಮಾಡಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಚೈತ್ರ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಕ್ಷ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸುತ್ತಿರುವ ಸಚಿವರಿಗೆ ಅಜಿತ್ ಕುಮಾರ್ ಶೆಟ್ಟಿ ಧನ್ಯತೆಯನ್ನು ವ್ಯಕ್ತಪಡಿಸಿದರು.
Leave a Reply