
ಕೋಟ: ಬದುಕಿನ ಸಾರ್ಥಕತೆಯಲ್ಲಿ ನಮ್ಮ ಪ್ರಯತ್ನ ಅವಿರತವಾದಂತಹ ಛಲ, ಧನಾತ್ಮಕವಾದ ಹಠ ನಮ್ಮನ್ನು ಗುಲುವಿನೆಡೆಗೆ ಕೊಂಡೊಯ್ಯಬಲ್ಲದು. ಯಾವುದೇ ಸಾಧನೆ ಮಾಡಬೇಕಾದರೂ ಮೊದಲು ಒಂದು ಕನಸು ಕಾಣಬೇಕು. ಕನಸಿನ ನಿಜವಾದ ಅರ್ಥವೆಂದ್ಲರೆ ನಮ್ಮನ್ನು ನಿದ್ರೆ ಬಾರದಂತೆ ಮಾಡುವುದು ಕನಸು. ಆ ಕನಸ್ಸಿನ ಸಾಕ್ಷಾತ್ಕಾರಕ್ಕಾಗಿ ನಾವು ಚಿಕ್ಕ ಚಿಕ್ಕ ಕನಸುಗಳ ಮೂಲಕ ದೊಡ್ಡ ಯಶಸ್ಸಿನ ಕನಸುಗಳನ್ನು ಕಾಣಬೇಕು ಎಂದು ಆದರ್ಶ ಆಸ್ಪತ್ರೆ ಕುಂದಾಪುರ ವೈದ್ಯರಾದ ಡಾ. ವಿಷ್ಣುಮೂರ್ತಿ ಐತಾಳ ನುಡಿದರು.
ಇತ್ತೀಚಿಗೆ ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಾಗೂ ವಿವೇಕ ಬಾಲಕಿಯರ ಪ್ರೌಢಶಾಲೆಯ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉತ್ಕöÈಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಅರಳಿಸುವಂತಹ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಮಹತ್ತರವಾದದ್ದು, ಇಂತಹ ಪ್ರೇರಣೆಯಿಂದಲೇ ನಾನು ಇಂದು ಈ ಹಂತಕ್ಕೆ ಬರಲು ಸಾಧ್ಯವಾಯಿತು.
ಇಂತಹ ಕಾರ್ಯಕ್ರಮಗಳಿಂದ ಇನ್ನಷ್ಟು ಪ್ರೇರಣೆ ಸಿಕ್ಕುವುದು ಖಂಡಿತ. ಆ ದಿಸೆಯಲ್ಲಿ ಕೋಟ ವಿದ್ಯಾ ಸಂಘದ ಕಾರ್ಯ ಬಹಳ ಶ್ಲಾಘನೀಯವಾದದ್ದು ಎಚಿದರು
ವೇದಿಕೆಯಲ್ಲಿ ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಸಿ.ಎ ಪಿ. ಪ್ರಭಾಕರ ಮಯ್ಯ, ಕಾರ್ಯದರ್ಶಿ ಎಂ. ರಾಮದೇವ ಐತಾಳ ಹಾಗೂ ಜೊತೆ ಕಾರ್ಯದರ್ಶಿ ಮಂಜುನಾಥ ಉಪಾಧ್ಯ , ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚೆಂಪಿ ರಮಾನಂದ ಭಟ್ ಉಪಸ್ಥಿತರಿದ್ದು ಶುಭಹಾರೈಕೆಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ವಿವೇಕ ಬಾಲಕರ ಪ್ರೌಡಶಾಲಾ ವಿಭಾಗದ ಮುಖ್ಯಸ್ಥರಾದ ಪ್ರೇಮಾನಂದ , ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ರೇಖಾ , ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಸ್ಥರಾದ ವೆಂಕಟೇಶ ಉಡುಪ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್ ಶೆಟ್ಟಿ ವಂದಿಸಿದರು. ಹಿರಿಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಅತಿಥಿಗಳು ಉತ್ಕಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಿದರು.
ಇತ್ತೀಚಿಗೆ ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಾಗೂ ವಿವೇಕ ಬಾಲಕಿಯರ ಪ್ರೌಢಶಾಲೆಯ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉತ್ಕಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನಿಸಲಾಯಿತು. ಆದರ್ಶ ಆಸ್ಪತ್ರೆ ಕುಂದಾಪುರ ವೈದ್ಯರಾದ ಡಾ. ವಿಷ್ಣುಮೂರ್ತಿ ಐತಾಳ, ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಸಿ.ಎ ಪಿ. ಪ್ರಭಾಕರ ಮಯ್ಯ, ಕಾರ್ಯದರ್ಶಿ ಎಂ. ರಾಮದೇವ ಐತಾಳ ಹಾಗೂ ಜೊತೆ ಕಾರ್ಯದರ್ಶಿ ಮಂಜುನಾಥ ಉಪಾಧ್ಯ ಇದ್ದರು.
Leave a Reply