
ಮಂಗಳೂರು: ಯುವ ನ್ಯಾಯವಾದಿ ರಾಜಶ್ರೀ ಪೂಜಾರಿ ಅನಾರೋಗ್ಯದ ಕಾರಣದಿಂದ ಇಂದು ಮೃತಪಟ್ಟಿದ್ದಾರೆ. ರಾಜಶ್ರೀ ಮಂಗಳೂರಿನ ಎಸ್ .ಡಿ. ಎಂ ಕಾನೂನು ಕಾಲೇಜಿನಲ್ಲಿ ಪದವಿ ಓದಿದ್ದರು. ವಕೀಲರಾಗಿ ವೃತ್ತಿ ಆರಂಭಿಸಿದ್ದ ಇವರು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಪ್ರತಿಭಾವಂತೆ ಕೂಡ.
ಕೋವಿಡ್ ಬಳಿಕ ದಿಢೀರ್ ಆಗಿ ಅನಾರೋಗ್ಯಕ್ಕೆ ಒಳಗಾದರು. ಬಡ ಮಧ್ಯಮ ವರ್ಗದ ರಾಜಶ್ರೀ ಅವರ ಮನೆಗೆ, ಚಿಕಿತ್ಸೆಗೆ ಅನೇಕ ಮಾನವೀಯ ಕಾಳಜಿಯ ವ್ಯಕ್ತಿಗಳು, ಸಂಘಗಳು ಆಸರೆಯಾಗಿ ನಿಂತಿದ್ದವು. ಇತ್ತೀಚೆಗೆ ಸ್ವಲ್ಪ ಚೇತರಿಸಿಕೊಂಡು ಮತ್ತೆ ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮೂವತ್ತರ ಆಸುಪಾಸಿನಲ್ಲೇ ದಿಢೀರ್ ಕಾಡಿದ ಅನಾರೋಗ್ಯದ ಕಾರಣದಿಂದ ಅಪಾರ ನೋವು ಅನುಭವಿಸಿ ನೋವನ್ನು ಕೂಡ ಧೃತಿಗೆಡದೆ ಎದುರಿಸಿ ನಿಂತಿದ್ದರು.
ರಾಜಶ್ರೀ Bilateral Joint Hip AVN ಎನ್ನುವ ವೈದ್ಯಕೀಯ ತೊಂದರೆ 2d Bilateral Core Decompression 2 ಶಸ್ತ್ರಚಿಕಿತ್ಸೆಯನ್ನು ಮಾಡಬೇಕು ಎನ್ನುವ ವೈದ್ಯರ ಸಲಹೆಯಂತೆ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾಗಿದ್ದಾರೆ.
Leave a Reply