
ಕೋಟ: ಕೋಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊoದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ ಸಂಘ ಕೋಡಿತಲೆ ಇವರ ಸಹಕಾರದೊಂದಿಗೆ ಮೂರು ತಿಂಗಳ ಪರಿಸರಸ್ನೇಹಿ ಹಸಿರು ಜೀವ 2ನೇ ವರ್ಷದ ಭಾನುವಾರದ ಅಭಿಯಾನವನ್ನು ಕೋಡಿ
ಗ್ರಾಮಪಂಚಾಯತ್‌ನ ಅಧ್ಯಕ್ಷರಾದ ಗೀತಾ ಖಾರ್ವಿ ಯವರ ಅಧ್ಯಕ್ಷತೆಯಲ್ಲಿ ಕೋಡಿತಲೆ ತಾರಾಪುರುಷ ಖಾರ್ವಿಯವರ ಮನೆಯಿಂದ ಮನೆಗೊಂದು ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ್ ಮೆಂಡನ್ ರವರು ಪರಿಸರ ಹಾಗೂ ಹಸಿರು ಜೀವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ, ಸಂಜೀವಿನಿ ಸಂಘದ ಅಧ್ಯಕ್ಷರಾದ ಪೂರ್ಣಿಮ, ಎಲ್.ಸಿ.ಆರ್.ಪಿ. ಆಶಾದೇವಿ, ಪಶುಸಖಿ ಮಾಲತಿ , ಕೋಡಿಕನ್ಯಾನ ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಎಸ್, ಕೋಡಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಪಿ. ಸ್ಥಳೀಯರಾದ ಭರತ್ ಖಾರ್ವಿ, ಪ್ರೀತ, ಜ್ಯೋತಿ, ಶಕುಂತಲಾ ಮತ್ತಿತರರು ಉಪಸ್ಥಿತರಿದ್ದರು. ಪಂಚಶಕ್ತಿ ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಅತಿಥಿಗಳನ್ನು ಸ್ವಾಗತಿಸಿದರು, ಕೋಡಿತಲೆ ಅಂಗನವಾಡಿ ಕಾರ್ಯಕರ್ತೆ ಕುಮಾರಿ ನಿರೋಶ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಕೋಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊoದಿಗೆ, ಪಂಚಶಕ್ತಿ ಸಂಘ ಕೋಡಿತಲೆ ಇವರ ಸಹಕಾರದೊಂದಿಗೆ ಮೂರು ತಿಂಗಳ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕೋಡಿತಲೆ ತಾರಾಪುರುಷ ಖಾರ್ವಿಯವರ ಮನೆಯಿಂದ ಮನೆಗೊಂದು ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು.
Leave a Reply