
ಕೋಟ : ರೋಟರಿ ಒಂದು ಅಂತಾರಾಷ್ಟಿçÃಯ ಸಂಸ್ಥೆ ಅದರ ಕಾರ್ಯಚಟುವಟಿಕೆಗಳು ಸಮಾಜದ ಪ್ರತಿ ಹಳ್ಳಿ ಹಳ್ಳಿಗಳನ್ನು ತಲುಪುತ್ತಿದೆ ಅವರ ಸಾಮಾಜಿಕ ಕಾರ್ಯಗಳು ಅತ್ಯಮೂಲ್ಯವಾದದ್ದು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು.
ಗುರುವಾರ ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಹಮ್ಮಿಕೊಂಡ ಹಸಿರು ಅಭಿಯಾನದಡಿ ಕೋಟದ ಪಂಚವರ್ಣ ಸಂಘಟನೆಗೆ ಗಿಡ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರೋಟರಿ ಕ್ಲಬ್ ಕೋಟ ಸಿಟಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿದೆ. ಇವರ ಪ್ರಸ್ತುತ ಹಸಿರು ಅಭಿಯಾನ ಪಂಚವರ್ಣದAತಹ ಸಂಸ್ಥೆಗೆ ಗಿಡ ನೀಡಿ ಅರ್ಥಪೂರ್ಣಗೊಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಪಂಚವರ್ಣ ಸಂಘಟನೆಗೆ ನೂರುಕ್ಕೂ ಅಧಿಕ ರಕ್ತಚಂದನ ಗಿಡಗಳನ್ನು ಆನಂದ್ ಸಿ ಕುಂದರ್ ಸಮ್ಮುಖದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಪ್ರಕಾಶ್ ಹಂದಟ್ಟು ಹಸ್ತಾಂತರಿಸಿದರು. ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ 3182 ವಲಯ 2 ರ ಸಹಾಯಕ ಗವರ್ನರ್ ಶ್ಯಾಮಸುಂದರ್ ನಾಯರಿ ಶುಭ ಹಾರೈಸಿದರು.
ಸಭೆಯಲ್ಲಿ ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ,ಪಂಚವರ್ಣ ಸಂಚಾಲಕ ಅಮೃತ್ ಜೋಗಿ, ರೋಟರಿ ಕ್ಲಬ್ ಕೋಟ ಸಿಟಿಯ ಸದಸ್ಯರಾದ ಡಾ.ಗಣೇಶ್ ಉಳ್ತೂರು, ದಯಾನಂದ ಆಚಾರ್, ನಿತ್ಯಾನಂದ ನಾಯರಿ, ಅನಿಲ್ ಸುವರ್ಣ, ಸುನೀಲ್, ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣದ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿದರು. ರೋಟರಿ ಕ್ಲಬ್ ಕೋಟ ಸಿಟಿ ಕಾರ್ಯದರ್ಶಿ ಕೃಷ್ಣ ಪೂಜಾರಿ ವಂದಿಸಿದರು.
ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಹಮ್ಮಿಕೊಂಡ ಹಸಿರುಜೀವ ಅಭಿಯಾನದಡಿ ಪಂಚವರ್ಣ ಸಂಘಟನೆಗೆ ನೂರುಕ್ಕೂ ಅಧಿಕ ರಕ್ತಚಂದನ ಗಿಡಗಳನ್ನು ಆನಂದ್ ಸಿ ಕುಂದರ್ ಸಮ್ಮುಖದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಪ್ರಕಾಶ್ ಹಂದಟ್ಟು ಹಸ್ತಾಂತರಿಸಿದರು. ರೋಟರಿ ಜಿಲ್ಲೆ 3182 ವಲಯ 2 ರ ಸಹಾಯಕ ಗವರ್ನರ್ ಶ್ಯಾಮಸುಂದರ್ ನಾಯರಿ, ರೋಟರಿ ಕ್ಲಬ್ ಕೋಟ ಸಿಟಿಯ ಸದಸ್ಯರಾದ ಡಾ.ಗಣೇಶ್ ಉಳ್ತೂರು, ದಯಾನಂದ ಆಚಾರ್, ನಿತ್ಯಾನಂದ ನಾಯರಿ, ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಇದ್ದರು.
Leave a Reply