
ಕೋಟ: ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಇದರ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಬುಧವಾರ ಶಾಲಾ ಸಭಾಂಗಣದಲ್ಲಿ ಜರಗಿತು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್ ದೀಪ ಬೆಳಗಿಸುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‌ನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಚೇತನಾ ಇಂಟರಾಕ್ಟ್ ಪದಗ್ರಹಣ ಕಾರ್ಯಕ್ರಮವನ್ನು ನೆರವೆರಿಸಿದರು.
ಐರೋಡಿ ಕರ್ಣಾಟಕ ಬ್ಯಾಂಕ್ ಪ್ರಭಂದಕ ಮಂಜುನಾಥ ಶೇಟ್ ಶಾಲಾ ವಿದ್ಯಾರ್ಥಿ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದರು. ಯಕ್ಷ ಗುರು ಪ್ರತೀಶ್ ಕುಮಾರ್ ಹಾಗೂ ವಿದ್ಯಾರ್ಥಿನಿ ಕು.ಭೂಮಿಕಾ ಹಾಗೂ ಕು.ಸುಪ್ರಭಾ ರವರಿಂದ ಯಕ್ಷಗಾನ ಪ್ರಾತ್ಯಕ್ಷಿತೆಯೊಂದಿಗೆ ಯಕ್ಷಗಾನ ತರಬೇತಿ ತರಗತಿಯು ಉದ್ಘಾಟನೆಗೊಂಡಿತು.
ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಶಾಲಾ ಸರಕಾರದ ನೂತನ ಮಂತ್ರಿಮoಡಲಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಬಿ .ಭರತ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಫಾರ್ಚುನ್ ಕಾಲೇಜಿನ ಮುಖ್ಯಸ್ಥ ತಾರಾನಾಥ ಶೆಟ್ಟಿ, ಚೇತಾ ಪ್ರೌಢಶಾಲಾ ಆಡಳಿತ ಮಂಡಳಿಯತ ಸದಸ್ಯ ರಾಮದೇವ ಹಂದೆ, ಇಂಟರಾಕ್ಟ್ ಕೋ ಆರ್ಡಿನೇಟರ್ ಬಾಲಕೃಷ್ಣ ಪೂಜಾರಿ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಕಾರ್ಯದರ್ಶಿ ಮುರಳಿಧರ್ ನಾಯರಿ, ಶಾಲಾ ಮುಖಂಡ ಮನ್ವಿತ್, ಇಂಟರಾಕ್ಟ್ ಅಧ್ಯಕ್ಷೆ ವನಿಶಾ, ಕಾರ್ಯದರ್ಶಿ ಶ್ರಾವ್ಯ ಉಪಸ್ಥಿತರಿದ್ದರು. ಶಿಕ್ಷಕರಾದ ಚಂದ್ರ ಕಾರ್ಯಕ್ರಮ ನಿರೂಪಿಸಿ, ಹರ್ಷವರ್ಧನ ಶೆಟ್ಟಿ ವಂದಿಸಿದರು.
ಚೇತನಾ ಪ್ರೌಢಶಾಲೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನುಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್ ದೀಪ ಬೆಳಗಿಸುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು. ಫಾರ್ಚುನ್ ಕಾಲೇಜಿನ ಮುಖ್ಯಸ್ಥ ತಾರಾನಾಥ ಶೆಟ್ಟಿ, ಚೇತಾ ಪ್ರೌಢಶಾಲಾ ಆಡಳಿತ ಮಂಡಳಿಯತ ಸದಸ್ಯ ರಾಮದೇವ ಹಂದೆ, ಇಂಟರಾಕ್ಟ್ ಕೋ ಆರ್ಡಿನೇಟರ್ ಬಾಲಕೃಷ್ಣ ಪೂಜಾರಿ ಇದ್ದರು.
Leave a Reply