Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿಶ್ವ ಸ್ತನ್ಯಪಾನ ಸಪ್ತಾಹ 2025;  ಈ ವರ್ಷದ ಧೈಯ : ಸ್ತನ್ಯಪಾನಕ್ಕೆ ಆದ್ಯತೆ ನೀಡಿ ಸುಸ್ಥಿರ ಬೆಂಬಲ ಬಲ ನೀಡುವುದು.

ವಿಶ್ವ ಸ್ತನ್ಯಪಾನ ಸಪ್ತಾಹ (WBW) ಪ್ರತಿವರ್ಷವೂ ಆಗಸ್ಟ್ 1ರಿಂದ 7ರವರೆಗೆ ನಡೆಯುವ ಜಾಗತಿಕ ಅಭಿಯಾನವಾಗಿದ್ದು, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಸಹಭಾಗಿತ್ವದಲ್ಲಿ “World Alliance for Breast Feeding’ ಸಂಯೋಜಿಸಲಾಗುತ್ತಿದೆ.1991ರಲ್ಲಿ ಪ್ರಾರಂಭವಾದಾಗಿನಿಂದ, WBW ಪ್ರಪಂಚದಾದ್ಯಂತ ಸ್ತನ್ಯಪಾನವನ್ನು ಉತ್ತೇಜಿಸುವ ಮತ್ತು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದು ಸ್ತನ್ಯಪಾನದ ಆರೋಗ್ಯ. ಭಾವನಾತ್ಮಕ ಮತ್ತು ಬೆಳವಣಿಗೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ತಾಯಂದಿರು ಯಶಸ್ವಿಯಾಗಿ ಸ್ತನ್ಯಪಾನ ಮಾಡಿಸಲು ಸಹಾಯ ಮಾಡುವ ಪರಿಸರಕ್ಕೆ ಕರೆ ನೀಡುತ್ತದೆ.

1991ರಲ್ಲಿ ಪ್ರಾರಂಭವಾದಾಗಿನಿಂದ, WBW ಪ್ರಪಂಚದಾದ್ಯಂತ ಸ್ತನ್ಯಪಾನವನ್ನು ಉತ್ತೇಜಿಸುವ ಮತ್ತು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದು ಸ್ತನ್ಯಪಾನದ ಆರೋಗ್ಯ. ಭಾವನಾತ್ಮಕ ಮತ್ತು ಬೆಳವಣಿಗೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ತಾಯಂದಿರು ಯಶಸ್ವಿಯಾಗಿ ಸ್ತನ್ಯಪಾನ ಮಾಡಿಸಲು ಸಹಾಯ ಮಾಡುವ ಪರಿಸರಕ್ಕೆ ಕರೆ ನೀಡುತ್ತದೆ.ಮುಖ್ಯವಾಗಿ ಸ್ತನ್ಯಪಾನವು ಮಗುವಿನ ಬದುಕುಳಿಯುವಿಕೆ. ಪೋಷಣೆ, ರೋಗ ನಿರೋಧಕ ಶಕ್ತಿಯ ಬೆಳವಣಿಗೆಗೆ ಅಗತ್ಯ. ಇದು ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಬಲಪಡಿಸುತ್ತದೆ. ತಾಯಂದಿರಿಗೆ, ಇದು ಪ್ರಸವಾನಂತರದ ಚೇತರಿಕೆಗೆ ಬೆಂಬಲಿಸುತ್ತದೆ.

ಮುಖ್ಯವಾಗಿ ಸ್ತನ್ಯಪಾನವು ಮಗುವಿನ ಬದುಕುಳಿಯುವಿಕೆ. ಪೋಷಣೆ, ರೋಗ ನಿರೋಧಕ ಶಕ್ತಿಯ ಬೆಳವಣಿಗೆಗೆ ಅಗತ್ಯ. ಇದು ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಬಲಪಡಿಸುತ್ತದೆ. ತಾಯಂದಿರಿಗೆ, ಇದು ಪ್ರಸವಾನಂತರದ ಚೇತರಿಕೆಗೆ ಬೆಂಬಲಿಸುತ್ತದೆ.ನಮ್ಮ ಸಮುದಾಯದಲ್ಲಿ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ತಿಳಿಸುವುದು ಹಾಗೆಯೇ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರು ಕೆಲಸದ ಸ್ಥಳಗಳು, ಸಾರ್ವಜನಿಕ ಸ್ಥಳಗಳಲ್ಲಿ ತಾಯಂದಿರು ಸ್ತನ್ಯಪಾನ ಮಾಡಿಸಲು ಸ್ನೇಹಮಯ ಹಾಗೂ ಸೂಕ್ತ ವ್ಯವಸ್ಥೆ ಮಾಡಬೇಕು ಮತ್ತು ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಪ್ರೋತ್ಸಾಹ ಮತ್ತು ಅದಕ್ಕೆ ಅವಶ್ಯಕವಾದ ಸಹಾಯವನ್ನು ಮಾಡಬೇಕು.

ನಮ್ಮ ಸಮುದಾಯದಲ್ಲಿ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ತಿಳಿಸುವುದು ಹಾಗೆಯೇ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರು ಕೆಲಸದ ಸ್ಥಳಗಳು, ಸಾರ್ವಜನಿಕ ಸ್ಥಳಗಳಲ್ಲಿ ತಾಯಂದಿರು ಸ್ತನ್ಯಪಾನ ಮಾಡಿಸಲು ಸ್ನೇಹಮಯ ಹಾಗೂ ಸೂಕ್ತ ವ್ಯವಸ್ಥೆ ಮಾಡಬೇಕು ಮತ್ತು ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಪ್ರೋತ್ಸಾಹ ಮತ್ತು ಅದಕ್ಕೆ ಅವಶ್ಯಕವಾದ ಸಹಾಯವನ್ನು ಮಾಡಬೇಕು.ಇದರ ಬಗ್ಗೆ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸ್ತನ್ಯಪಾನದ ಮಹತ್ವನ್ನು ತಿಳಿಸಲು ಸುಲಭವಾಗುತ್ತದೆ. ವಿಶ್ವ ಸ್ತನ್ಯಪಾನ ಸಪ್ತಾಹ 2025 ತಾಯಂದಿರು ಮತ್ತು ಮಕ್ಕಳನ್ನು ಉನ್ನತೀಕರಿಸುವ ಶಾಶ್ವತ ವ್ಯವಸ್ಥೆಗೆ ಕರೆ ನೀಡುತ್ತದೆ. ಇದು ಕೇವಲ ಅಭಿಯಾನವಲ್ಲ ಪ್ರತಿ ಮಗುವಿಗೆ ಆರೋಗ್ಯಕರ ಆರಂಭವನ್ನು ಹೊಂದಿದೆ, ಮತ್ತು ಪ್ರತಿ ತಾಯಿಗೆ ಅರ್ಹವಾದ ಬೆಂಬಲ ಪಡೆಯುವುದು ಖಚಿತ ಪಡಿಸುವ ಜಾಗತಿಕ ಚಳುವಳಿಯಾಗಿದೆ.

ಇದರ ಬಗ್ಗೆ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸ್ತನ್ಯಪಾನದ ಮಹತ್ವನ್ನು ತಿಳಿಸಲು ಸುಲಭವಾಗುತ್ತದೆ. ವಿಶ್ವ ಸ್ತನ್ಯಪಾನ ಸಪ್ತಾಹ 2025 ತಾಯಂದಿರು ಮತ್ತು ಮಕ್ಕಳನ್ನು ಉನ್ನತೀಕರಿಸುವ ಶಾಶ್ವತ ವ್ಯವಸ್ಥೆಗೆ ಕರೆ ನೀಡುತ್ತದೆ. ಇದು ಕೇವಲ ಅಭಿಯಾನವಲ್ಲ ಪ್ರತಿ ಮಗುವಿಗೆ ಆರೋಗ್ಯಕರ ಆರಂಭವನ್ನು ಹೊಂದಿದೆ, ಮತ್ತು ಪ್ರತಿ ತಾಯಿಗೆ ಅರ್ಹವಾದ ಬೆಂಬಲ ಪಡೆಯುವುದು ಖಚಿತ ಪಡಿಸುವ ಜಾಗತಿಕ ಚಳುವಳಿಯಾಗಿದೆ.ಈ ಸಪ್ತಾಹವನ್ನು 120ಕ್ಕೂ ದೇಶಗಳಲ್ಲಿ ಹಾಗೂ ಪ್ರತಿ ವರ್ಷ ಹೊಸ ವಿಷಯಕ್ಕೆ ಸಂಬಂಧಿಸಿದಂತೆ ಗಮನವನ್ನು ಕೇಂದ್ರೀಕರಿಸಿದೆ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಸ್ತನ್ಯಪಾನದ ಬಗ್ಗೆ ಅರಿವನ್ನು ಮೂಡಿಸುತ್ತದೆ

ಈ ಸಪ್ತಾಹವನ್ನು 120ಕ್ಕೂ ದೇಶಗಳಲ್ಲಿ ಹಾಗೂ ಪ್ರತಿ ವರ್ಷ ಹೊಸ ವಿಷಯಕ್ಕೆ ಸಂಬಂಧಿಸಿದಂತೆ ಗಮನವನ್ನು ಕೇಂದ್ರೀಕರಿಸಿದೆ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಸ್ತನ್ಯಪಾನದ ಬಗ್ಗೆ ಅರಿವನ್ನು ಮೂಡಿಸುತ್ತದೆ.

ಸ್ತನ್ಯಪಾನದಿಂದ ಮಗುವಿಗೆ ಆಗುವ ಲಾಭಗಳು.
ತಾಯಿಯ ಮೊದಲ ಹಾಲಾದ ಕೊಲೋಸ್ಟೋಮ್ ನಲ್ಲಿ ತಾಯಿಯ ಪ್ರತಿಕಾಯಗಳಿದ್ದು. ಮಗುವಿನ ಪ್ರತಿರಕ್ಷಣಾ ಮತ್ತು ವ್ಯಾದಿ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಮಗುವಿನ ಮಲ, ಮೂತ್ರ ವಿಸರ್ಜನೆ ಸರಾಗವಾಗುವಂತೆ ಮಾಡಿ, ಆರಂಭಿಕ ದಿನಗಳಲ್ಲಿ ಕಾಮಾಲೆ ಹರಡದಂತೆ ಕಾಪಾಡುವುದಲ್ಲದೆ. ಮಗುವಿನ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಾಂತಿ, ಅಲರ್ಜಿ ಮತ್ತು ಸೋಂಕುಗಳು ತಗಲುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಸ್ತನ್ಯಪಾನ ಮಾಡಿಸುವುದರಿಂದ ತಾಯಿಗೆ ಆಗುವ ಲಾಭಗಳು
ಹಾಲು ಉತ್ಪತ್ತಿ ಹೆಚ್ಚುವುದು. ಗರ್ಭಕೋಶ ರಕ್ತಸ್ರಾವ ತಡೆಯುವುದು ಮತ್ತು ಸ್ತನ ಮತ್ತು ಗರ್ಭಕೋಶದ ಅರ್ಬುದ ರೋಗ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದೊಂದು ನೈಸರ್ಗಿಕ ಗರ್ಭ ನಿರೋಧಕವಾಗಿದೆ.

ಸ್ತನ್ಯಪಾನ ಪ್ರಾರಂಭಿಸುವ ವಿಧಾನ
ಮೊದಲಿಗೆ ತಾಯಿ ಮತ್ತು ಮಗುವಿನ ಬಾಂಧವ್ಯಕ್ಕೆ ಸಿದ್ಧತೆ ಮಾಡುವುದು. ನಂತರ ಕಾಂಗರೂ ರೀತಿ ತಾಯಿಯ ಆರೈಕೆ ಮಾಡುವುದು. ಆನಂತರ ಸ್ತಾನೀಕರಣ. ನಂತರ ಮಗುವನ್ನು ಸ್ತನದ ಹತ್ತಿರಕ್ಕೆ ತರುವುದು. ಹಾಲು ಕುಡಿಸುವುದು. ಆನಂತರ ತಾಯಿಯಿಂದ ಮಗುವನ್ನು ಬೇರ್ಪಡಿಸುವುದು. ಕೊನೆಯದಾಗಿ ತೇಗಿಸುವುದು. ನಂತರ ಮಗುವನ್ನು ಮಲಗಿಸುವುದು.

ಕಾಂಗರೂ ರೀತಿಯ ತಾಯಿಯ ಆರೈಕೆಯ ಪ್ರಯೋಜನಗಳು.
ಕಾಂಗರೂ ರೀತಿಯ ಆರೈಕೆಯಲ್ಲಿ ತಾಯಿ ಮತ್ತು ಮಗುವಿನ ಚರ್ಮ ಸಂಪರ್ಕಿಸುತ್ತದೆ. ಇದರಿಂದ ತಾಯಿ ಮತ್ತು ಮಗುವಿಗೆ ಭಾವನಾತ್ಮಕವಾಗಿ ಸಹಾಯವಾಗುತ್ತದೆ. ಎದೆ ಹಾಲಣಿಸುವಾಗ ಸ್ಥಿತಿಯ ಬಗ್ಗೆ ಗಮನಹರಿಸಬೇಕು. ಯಾಕೆಂದರೆ ಇದು ಮಗುವಿಗೆ ಎಷ್ಟು ಹಾಲು ದೊರೆಯುತ್ತದೆ ಎನ್ನುವುದನ್ನು ತೀರ್ಮಾನಿಸುತ್ತದೆ.

ಸ್ತನ್ಯಪಾನ ಮಾಡಿಸಲು ಹಲವರು ವಿಧಾನಗಳಿದ್ದು, ಅವುಗಳಲ್ಲಿ ತೊಟ್ಟಿಲಿನ ಸ್ಥಿತಿ. ಅಡ್ಡ ತೊಟ್ಟಿಲಿನ ಸ್ಥಿತಿ, ಫುಟ್‌ಬಾಲ್ ಸ್ಥಿತಿ ಹಾಗು ಅವಳಿ ಫುಟ್‌ಬಾಲ್ ಸ್ಥಿತಿಗಳು ಪ್ರಮುಖ ಸ್ಥಿತಿಗಳಾಗಿವೆ. ಪ್ರತಿ ತಾಯಿ ತನ್ನ ಮಗುವಿಗೆ ಹಾಲುಣಿಸಲು ಅನುಕೂಲವಾಗುವಂತಾ ಸ್ಥಿತಿಯನ್ನು ಆಯ್ಕೆ ಮಾಡಬಹುದು.

ಮಗುವನ್ನು ಸ್ತನಕ್ಕೆ ಹತ್ತಿರವಾಗಿಸುವ ವಿಧಾನ:
ಮೊದಲಿಗೆ ಮಗುವಿನ ಮೇಲಿನ ತುಟಿ ಅಥವಾ ಗಲ್ಲವನ್ನು ತಾಯಿಯ ಸ್ತನದ ತೊಟ್ಟಿಗೆ ತಾಗಿಸಬೇಕು ಇದರಿಂದ ಮಗುವು ತನ್ನ ಬಾಯಿಯನ್ನು ತೆರೆಯುತ್ತದೆ.

ಸ್ತನ್ಯಪಾನದಿಂದ ಮಗುವಿಗೆ ಆಗುವ ಲಾಭಗಳು.
ತಾಯಿಯ ಮೊದಲ ಹಾಲಾದ ಕೊಲೋಸ್ಟೋಮ್ ನಲ್ಲಿ ತಾಯಿಯ ಪ್ರತಿಕಾಯಗಳಿದ್ದು. ಮಗುವಿನ ಪ್ರತಿರಕ್ಷಣಾ ಮತ್ತು ವ್ಯಾದಿ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಮಗುವಿನ ಮಲ, ಮೂತ್ರ ವಿಸರ್ಜನೆ ಸರಾಗವಾಗುವಂತೆ ಮಾಡಿ, ಆರಂಭಿಕ ದಿನಗಳಲ್ಲಿ ಕಾಮಾಲೆ ಹರಡದಂತೆ ಕಾಪಾಡುವುದಲ್ಲದೆ. ಮಗುವಿನ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಾಂತಿ, ಅಲರ್ಜಿ ಮತ್ತು ಸೋಂಕುಗಳು ತಗಲುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಸ್ತನ್ಯಪಾನ ಮಾಡಿಸುವುದರಿಂದ ತಾಯಿಗೆ ಆಗುವ ಲಾಭಗಳು
ಹಾಲು ಉತ್ಪತ್ತಿ ಹೆಚ್ಚುವುದು. ಗರ್ಭಕೋಶ ರಕ್ತಸ್ರಾವ ತಡೆಯುವುದು ಮತ್ತು ಸ್ತನ ಮತ್ತು ಗರ್ಭಕೋಶದ ಅರ್ಬುದ ರೋಗ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದೊಂದು ನೈಸರ್ಗಿಕ ಗರ್ಭ ನಿರೋಧಕವಾಗಿದೆ.

ಸ್ತನ್ಯಪಾನ ಪ್ರಾರಂಭಿಸುವ ವಿಧಾನ
ಮೊದಲಿಗೆ ತಾಯಿ ಮತ್ತು ಮಗುವಿನ ಬಾಂಧವ್ಯಕ್ಕೆ ಸಿದ್ಧತೆ ಮಾಡುವುದು. ನಂತರ ಕಾಂಗರೂ ರೀತಿ ತಾಯಿಯ ಆರೈಕೆ ಮಾಡುವುದು. ಆನಂತರ ಸ್ತಾನೀಕರಣ. ನಂತರ ಮಗುವನ್ನು ಸ್ತನದ ಹತ್ತಿರಕ್ಕೆ ತರುವುದು. ಹಾಲು ಕುಡಿಸುವುದು. ಆನಂತರ ತಾಯಿಯಿಂದ ಮಗುವನ್ನು ಬೇರ್ಪಡಿಸುವುದು. ಕೊನೆಯದಾಗಿ ತೇಗಿಸುವುದು. ನಂತರ ಮಗುವನ್ನು ಮಲಗಿಸುವುದು.

ಕಾಂಗರೂ ರೀತಿಯ ತಾಯಿಯ ಆರೈಕೆಯ ಪ್ರಯೋಜನಗಳು.
ಕಾಂಗರೂ ರೀತಿಯ ಆರೈಕೆಯಲ್ಲಿ ತಾಯಿ ಮತ್ತು ಮಗುವಿನ ಚರ್ಮ ಸಂಪರ್ಕಿಸುತ್ತದೆ. ಇದರಿಂದ ತಾಯಿ ಮತ್ತು ಮಗುವಿಗೆ ಭಾವನಾತ್ಮಕವಾಗಿ ಸಹಾಯವಾಗುತ್ತದೆ. ಎದೆ ಹಾಲಣಿಸುವಾಗ ಸ್ಥಿತಿಯ ಬಗ್ಗೆ ಗಮನಹರಿಸಬೇಕು. ಯಾಕೆಂದರೆ ಇದು ಮಗುವಿಗೆ ಎಷ್ಟು ಹಾಲು ದೊರೆಯುತ್ತದೆ ಎನ್ನುವುದನ್ನು ತೀರ್ಮಾನಿಸುತ್ತದೆ.

ಸ್ತನ್ಯಪಾನ ಮಾಡಿಸಲು ಹಲವರು ವಿಧಾನಗಳಿದ್ದು, ಅವುಗಳಲ್ಲಿ ತೊಟ್ಟಿಲಿನ ಸ್ಥಿತಿ. ಅಡ್ಡ ತೊಟ್ಟಿಲಿನ ಸ್ಥಿತಿ, ಫುಟ್‌ಬಾಲ್ ಸ್ಥಿತಿ ಹಾಗು ಅವಳಿ ಫುಟ್‌ಬಾಲ್ ಸ್ಥಿತಿಗಳು ಪ್ರಮುಖ ಸ್ಥಿತಿಗಳಾಗಿವೆ. ಪ್ರತಿ ತಾಯಿ ತನ್ನ ಮಗುವಿಗೆ ಹಾಲುಣಿಸಲು ಅನುಕೂಲವಾಗುವಂತಾ ಸ್ಥಿತಿಯನ್ನು ಆಯ್ಕೆ ಮಾಡಬಹುದು.

ಮಗುವನ್ನು ಸ್ತನಕ್ಕೆ ಹತ್ತಿರವಾಗಿಸುವ ವಿಧಾನ:
ಮೊದಲಿಗೆ ಮಗುವಿನ ಮೇಲಿನ ತುಟಿ ಅಥವಾ ಗಲ್ಲವನ್ನು ತಾಯಿಯ ಸ್ತನದ ತೊಟ್ಟಿಗೆ ತಾಗಿಸಬೇಕು ಇದರಿಂದ ಮಗುವು ತನ್ನ ಬಾಯಿಯನ್ನು ತೆರೆಯುತ್ತದೆ.

ಎರಡನೆಯದಾಗಿ ಮಗುವನ್ನು ಸ್ತನದ ಹತ್ತಿರ ತೆಗೆದುಕೊಂಡು ಕಪ್ಪು ವರ್ತುಲದ ಕೆಳಗಿನ 2/3 ಭಾಗವನ್ನು ಮಗುವಿನ ಬಾಯಿಯ ಒಳಗೆ ಇರಿಸಬೇಕು. ಇದಾದ ನಂತರ ಮಗು ಸ್ತನಕ್ಕೆ ಸರಿಯಾಗಿ ತಾಗಿದೆಯೇ ಎಂದು ತಾಯಿ ಖಚಿತಪಡಿಸಬೇಕು. ಮಗುವು ಸ್ತನಕ್ಕೆ ಸರಿಯಾಗಿ ತಾಗಿದ್ದರೆ ಮಗುವು ತನ್ನ ತುಟಿಗಳನ್ನು ಚಾಚುತ್ತದೆ ಹಾಗೆಯೇ ಬಾಯಿಯನ್ನು ಅಗಲ ಮಾಡುತ್ತದೆ.

ತಾಯಿ ಮಗುವಿನ ಗಲ್ಲವನ್ನು ಸ್ತನಕ್ಕೆ ವಿರುದ್ಧವಾಗಿ ತಗುಲಿಸಬೇಕು ಹಾಗೆಯೇ ಮೂಗು ಸ್ತನವನ್ನು ಸ್ಪರ್ಶಿಸುವಂತೆ ನೋಡಿಕೊಳ್ಳಬೇಕು. ಈ ಸಮಯದಲ್ಲಿ ಮುಗುವಿಗೆ ಯಾವುದೇ ರೀತಿಯ ಉಸಿರಾಟದ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

ಕೊನೆಯದಾಗಿ ಕಪ್ಪುವರ್ತುಲದ ಕೆಳಗಿನ 2/3 ಭಾಗವು ಮಗುವಿನ ಬಾಯಿಯ ಒಳಗೆ ಇರಿಸಬೇಕು.

ಆರಂಭಿಕ ದಿನಗಳಲ್ಲಿ ಮಗುವಿಗೆ ಕುಡಿಸಲು ಸಾಕಷ್ಟು ಎದೆಹಾಲು ಇರುವುದಿಲ್ಲ ಮೊದಲೆರಡು ದಿನಗಳಲ್ಲಿ ತಾಯಿಯ ಸ್ತನಗಳಲ್ಲಿ ಕಡಿಮೆ ಪ್ರಮಾಣದಲ್ಲಿರುವ ಕೇವಲ ಬಿಳಿ ಹಳದಿ ಮಿಶ್ರಿತ ಕೊಲೊಸ್ಟ್ರಮ್ ಮಾತ್ರ ಉತ್ಪತ್ತಿಯಾಗುತ್ತದೆ. ಆದ್ದರಿಂದ ಮಗುವಿಗೆ ಹೆಚ್ಚುಬಾರಿ ಎದೆಹಾಲುಕುಡಿಸಬೇಕಾಗುತ್ತದೆ. ಸಾಕಷ್ಟು ಹಾಲು ಉತ್ಪತ್ತಿಯಾಗಲು ಸುಮಾರು 3 ರಿಂದ 5 ದಿನಗಳು ಬೇಕಾಗುತ್ತದೆ.

ಎದೆಹಾಲು ಉತ್ಪಾದನೆ ಮತ್ತು ಸ್ರವಿಸುವಿಕೆ ಹೆಚ್ಚಾಗಲು ತಾಯಿಯು ಮಗುವಿನ ಜನನದ ನಂತರ ಎದೆ ಹಾಲುಣಿಸಲು ಪ್ರಾರಂಭಿಸಬೇಕು. ತಾಯಿ ಮತ್ತು ಮಗುವಿನ ದೇಹದ ಸಂರ್ಪ ಬೇಗ ಆಗುವಂತೆ ಮಾಡಬೇಕು.

ಯತೇಚ್ಚವಾಗಿ ಸುಮಾರು 2.5 ಲೀಟರ್ ನಿಂದ 3 ಲೀಟರ್ನಷ್ಟು ಹೆಚ್ಚಿನ ದ್ರವ ಪದಾರ್ಥಗಳು ಮತ್ತು ಪೌಷ್ಠಿಕ ಆಹಾರ ಸೇವಿಸುವುದರಿಂದ ಎದೆ ಹಾಲಿನ ಉತ್ಪತ್ತಿಯು ಹೆಚ್ಚುತ್ತದೆ. ಇದಲ್ಲದೆ ಸಾಕಷ್ಟು ನಿದ್ದೆ ಮತ್ತು ವಿಶ್ರಾಂತಿ, ಸಕಾರಾತ್ಮಕವಾಗಿ ಯೋಚಿಸುವುದರಿಂದ ಎದೆ ಹಾಲಿನ ಉತ್ಪತ್ತಿಯು ಹೆಚ್ಚಳವಾಗುತ್ತದೆ. ಹಾಗೆಯೇ ಕುಟುಂಬದವರು ತಾಯಿಯು ಮಗುವಿಗೆ ಎದೆ ಹಾಲುಣಿಸುವುದನ್ನು ಪ್ರೋತ್ಸಾಹಿಸಬೇಕು.

ತಾಯಿತು ಮಗುವಿನ ಬೇಡಿಕೆಗೆ ಅನುಗುಣವಾಗಿ ಎದೆಹಾಲು ಉಣಿಸಬೇಕು. ಅಂದರೆ ಮಗುವಿಗೆ ಹಸಿವಾದಾಗ ಮಾತ್ರ. ಮಗುವು ಬೇಡಿಗೆ ಇಡದಿದ್ದಲ್ಲಿ, ಪ್ರತಿ ಎರಡು ಗಂಟೆಗೊಮ್ಮೆ ರಾತ್ರಿ ಮತ್ತು ಹಗಲು ಹಾಲುಣಿಸಬೇಕು.

ಮಗುವಿಗೆ ಪೂರ್ತಿ ಆಹಾರ ಸಿಗಲು ಪ್ರತಿ ಸ್ತನದಲ್ಲೂ ಒಮ್ಮೆಗೆ ಸುಮಾರು 20 ರಿಂದ 30 ನಿಮಿಷಗಳ ಕಾಲ ಕುಡಿಸಿ. ನಂತರ ಸ್ತನ ಬದಲಾಯಿಸುತ್ತಾ ಮತ್ತೆ ಕೊಡಬೇಕು.

ತಡವಾಗಿ ಮಗು ತನ್ನ ಹಸಿವನ್ನು ಸೂಚಿಸಿದ್ದಲ್ಲಿ ಮಗುವನ್ನು ಸಮಾಧಾನ ಮಾಡಿ ನಂತರ ಹಾಲು ಕುಡಿಸುವುದು ಉತ್ತಮ.

ಸ್ತನ್ಯಪಾನವನ್ನು ಸಮರ್ಪಕ ಜೋಡಣೆಯಿಂದ ಮಾಡಬೇಕಾಗುತ್ತದೆ. ಅಸಮರ್ಪಕ ಜೋಡಣೆಯಿಂದ ಮೊಲೆತೊಟ್ಟು ಬಿರುಕು ಬಿಡಬಹುದು ಅಥವಾ ನೋವು ಉಂಟಾಗಬಹುದು.

ಮೃದುವಾದ ಬಿರುಕುಗಳು ಇದ್ದರೆ ಮಗುವಿಗೆ ಹಾಲು ಕುಡಿಸಬಹುದು, ಆದರೆ ತೀವ್ರತರವಾದ ಬಿರುಕುಗಳಿದ್ದರೆ ಮಗುವನ್ನು ಸ್ತನದಿಂದ ತಾತ್ಕಾಲಿಕವಾಗಿ ಬೇರ್ಪಡಿಸಿ ಮೊಲೆತೊಟ್ಟು ವಾಸಿಯಾಗಲು ಅನುಕೂಲ ಮಾಡಿಕೊಡಬೇಕು.

ಎದೆಹಾಲು ಕುಡಿಸಿದ ನಂತರ ಬರುವಂತಹ ಗಟ್ಟಿಯಾದ ಹಾಲನ್ನು ಬಿರುಕು ಬಿಟ್ಟ ಜಾಗಕ್ಕೆ ಹಚ್ಚುವುದರಿಂದ ಗಾಯವು ವಾಸಿಯಾಗುತ್ತದೆ.

ಸ್ತನದಲ್ಲಿ ಹಾಲು 3 ರಿಂದ 4 ಗಂಟೆಯ ನಂತರ ಇರಲು ಬಿಡಬಾರದು, ಕೈಯಿಂದ ತೆಗೆದು ಶೇಖರಿಸಬೇಕು. ಶೇಖರಿಸಿದ ಎದೆ ಹಾಲನ್ನು ಮಗುವಿಗೆ ಒಳಲೆಯಲ್ಲಿ ಕುಡಿಸಿ ನಂತರ ಮೊದಲಿನಂತೆ ಸ್ತನದಿಂದ ಕುಡಿಸಬೇಕು. ಆಗಲೂ ಗುಣವಾಗದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಹಾಲು ಕುಡಿದ ನಂತರ ಮಗುವಿಗೆ ತೇಗಿಸಬೇಕು. ತೇಗಿಸುವುದು ಅಂದರೆ ಮಗುವಿನ ಹೊಟ್ಟೆಯಲ್ಲಿ ಇರುವ ಗಾಳಿಯನ್ನು ಅದರ ಬೆನ್ನಿನ ಮೇಲೆ ಮೃದುವಾಗಿ ತಟ್ಟುವುದರ ಮೂಲಕ ಹೊರತೆಗೆಯುವುದು. ಪ್ರತಿಬಾರಿ ಮೊಲೆಯುಣಿಸಿದ ನಂತರ ಬೀರ್ಣಿಸುವ ಪ್ರಕ್ರಿಯೆ ಮಾಡಬೇಕು. ಜೀರ್ಣಿಸಿದ ನಂತರ ವಾಂತಿಯಾಗುವುದನ್ನು ತಡೆಯಲು ಮಗುವನ್ನು ಒಂದು ಬದಿಯಲ್ಲಿ ಮಲಗಿಸಬೇಕು.

ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಹಾಲು ದೊರೆಯುತ್ತಿದ್ದಲ್ಲಿ, ಮಗುವು ಪ್ರತಿದಿನ 6 ರಿಂದ 8 ಬಾರಿ ಲಘುವಾಗಿ ಮೂತ್ರ ವಿಸರ್ಜನೆ ಅಥವಾ 3 ರಿಂದ 5 ಬಾರಿ ಜಾಸ್ತಿ ಮೂತ್ರ ವಿಸರ್ಜನೆ ಮಾಡಬಹುದು. ಮಗು ಚುರುಕಾಗಿರುವುದಲ್ಲದೆ ಸಕ್ರಿಯ ಮತ್ತು ಖುಷಿಯಾಗಿರುವುದನ್ನು ಕಾಣಬಹುದು. ಹಾಗಯೇ ಮಗು ತನ್ನ ಜನನ ತೂಕವನ್ನು ಸುಮಾರು 10 ದಿನಗಳಲ್ಲಿ ಹೆಚ್ಚಿಸುವುದನ್ನು ಕಾಣಬಹುದು.

ಮಗು ಅತ್ತಾಗ ತಾಯಿಯು ಗಾಬರಿಯಾಗದೇ, ಮಗುವಿನ ಹಸಿವನ್ನು ನೀಗಿಸಬೇಕು. ಮಗುವನ್ನು ಸರಿಯಾಗಿ ಬಟ್ಟೆಯಲ್ಲಿ ಸುತ್ತಿ ಬೆಚ್ಚಗಿಡಬೇಕು. ಮಗುವಿನ ನ್ಯಾಪಿಯು ಒದ್ದೆಯಾದಲ್ಲಿ, ಅದನ್ನು ಬದಲಾಯಿಸಬೇಕು. ಸರಿಯಾದ ಕ್ರಮದಲ್ಲಿ ಮಗುವನ್ನು ತೇಗಿಸಬೇಕು ಇದರಿಂದ ಹೊಟ್ಟೆಯ ಕಿರಿಕಿರಿಯನ್ನು ತಪ್ಪಿಸಬಹುದು. ಅತಿ ಪ್ರಮುಖವಾಗಿ ಮಗು ಅತ್ತಾಗ ಅದನ್ನು ಮುದ್ದಿಸಬೇಕು.

ಮಗು ಹಾಲು ಕುಡಿಯುವುದನ್ನು ನಿರಾಕರಿಸಿದಾಗ ವಾಂತಿ, ಬೇದಿಯಾದಾಗ, ಜ್ವರ, ಉಸಿರಾಡಲು ಕಷ್ಟಪಡುವಾಗ. ವಿಪರೀತ ಅಳು ಅಥವಾ ದೇಹದ ಬಣ್ಣದಲ್ಲಿ ಬದಲಾವಣೆ
(ತೆಳುಬಣ್ಣಕ್ಕೆ ಬಿಳಿಚಿಕೊಳ್ಳುವುದು) ಆದರೆ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.

ಸ್ತನ್ಯಪಾನ ಮಗುವಿಗೆ ಮೊದಲ ಲಸಿಕೆ ಮತ್ತು ಇದು ಪರಿಪೂರ್ಣ ಪೋಷಕಾಂಶವಾಗಿದೆ. ಸತತವಾಗಿ ಎರಡು ವರ್ಷಗಳ ಕಾಲ ಸ್ತನ್ಯಪಾನ ಮಾಡುವುದರಿಂದ ಜೀವನ ಶೈಲಿಯ ರೋಗಗಳನ್ನು ತಡೆಗಟ್ಟ ಬಹುದು. ಸ್ತನ್ಯಪಾನವನ್ನು ಪ್ರೋತ್ಸಾಹಿಸಿ ಮತ್ತು ಅದರ ಮಹತ್ವಗಳ ಬಗ್ಗೆ ಅರಿವು ಮೂಡಿಸಿ.

ಡಾ. ಎ ಆರ್ ಸೋಮಶೇಖರ್
ಹಿರಿಯ ಪ್ರಾಧ್ಯಾಪಕರು, ಮಕ್ಕಳ ಚಿಕಿತ್ಸಾ ವಿಭಾಗ, ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು

Leave a Reply

Your email address will not be published. Required fields are marked *