
ಥಾಣೆ (ಹೊಸಕಿರಣ. Com): ದಿನಾಂಕ 27/7 2025 ರವಿವಾರ ಮಧ್ಯಾಹ್ನ 3.30 ಗಂಟೆಗೆ ಮಜಿವಾಡಾ ಥಾಣೆ ಪಶ್ಚಿಮ ಶಿಬಿರದಲ್ಲಿ ವನಮಹೋತ್ಸವ ಆಚರಣೆ ಮಾಡಲಾಯಿತು. ಅತಿಥಿಗಳಾಗಿ ನಮ್ಮ ಆದಿಶಕ್ತಿ ಶಾಲೆಯ ಉಪಾಧ್ಯಕ್ಷರಾದ ಯೋಗೀಶ್ ಶೆಟ್ಟಿ, ನಮ್ಮ ಪ್ರದೇಶ ಪ್ರಾದೇಶಿಕ ಸಮಿತಿಯ ಯಾ ಮುಖಸ್ತೇಯಾದ ನೀತಾ ಶೆಟ್ಟಿ, ಕನ್ನಡ ವಲಯ ಮುಖ್ಯಸ್ತೇ ಪದ್ಮಾವತಿ ರಾಗಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳನ್ನುದ್ದೆಶಿಸಿ ಮಾತನಾಡುತ್ತಾ ವನಮಹೋತ್ಸವ ಆಚರಣೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಸದಸ್ಯರಾಗಿರುವ ಕನ್ನಡ ಶಿಕ್ಷಕಿ ಗೀತಾ ಶೆಟ್ಟಿ, ರಶ್ಮಿ, ಭಜನಾ ಶಿಕ್ಷಕಿ ಶೋಭಾ ಕೋಟ್ಯಾನ್,ಶಿಬಿರ ಮುಖ್ಯಸ್ಥೆ ವೀಣಾ ಎಸ್ ಪುತ್ರನ್, ಸಾಂಸ್ಕೃತಿಕ ಮುಖ್ಯಸ್ತೆ ದಿವ್ಯಾ ಶೆಟ್ಟಿ, ಅಶ್ವಿತಾ, ಶೆಟ್ಟಿ ಹಾಗೂ ಜಯಶ್ರೀ ಶೆಟ್ಟಿ, ಶೀಲಾ ಶೆಟ್ಟಿ, ದೀಪಾ ಕುಂದರ್, ಚೇತನಾ ಶೆಟ್ಟಿ, ಪ್ರಿಯಾ ಶೆಟ್ಟಿ ಮತ್ತು ಪಾಲಕರು ಮಕ್ಕಳು ಉಪಸ್ಥಿತರಿದ್ದರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ, ಕಾರ್ಯಕ್ರಮವನ್ನು ವಂದನಾರ್ಪಣೆಗೈದರು.

Leave a Reply