
ಬೆಂಗಳೂರಿನ ಫೋರ್ಸ್ 1 ಸ್ಕೇಟಿಂಗ್ ರಿಂಕ್ ನಲ್ಲಿ ಜುಲೈ 25 ರಿಂದ 27 ರವರೆಗೆ ನಡೆದ ಗೋಲ್ಡನ್ ಮಂಕಾನ್ ಅಮೆಚೂರ್ ನ್ಯಾಷನಲ್ ಮುವ್- ಥಾಯಿ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಅದ್ವಯ್ ನಿಮಿತ್ ಪೂಜಾರಿ ಅವರು 54 ಕೆಜಿ ತೂಕ ವಿಭಾಗದಲ್ಲಿ ಜಯಗಳಿಸಿ ಚಿನ್ನದ ಪದಕವನ್ನು ತಮ್ಮ ಮುಡಿಗೀರಿಸಿಕೊಂಡಿದ್ದಾರೆ.
ಇವರು ಪ್ರಸ್ತುತ ಗ್ರೌಂಡ್ ಬೋರ್ನ್ ಫೈಟ್ ಕ್ಲಬ್ ಆ್ಯಂಡ್ ಫಿಟ್ನೆಸ್ ಸೆಂಟರ್ ನ ತರಬೇತುದಾರರಾದ ಶಿಶಿರ್ ಪೂಜಾರಿ ಬಳಿ ತರಬೇತಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಮುವ್ ಥಾಯಿ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಅದ್ವಯ್ ಫೈನಲ್ ಹಣಾಹಣಿಯ ಎರಡನೇ ಸುತ್ತಿನಲ್ಲಿ ಎದುರಾಳಿಯನ್ನು ಟೆಕ್ನಿಕಲ್ ನಾಕೌಟ್ ಮೂಲಕ ಸೋಲಿಸಿ, ನೂತನ ರಾಷ್ಟ್ರೀಯ ಚಾಂಪಿಯನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇದು ಇವರ ಮೂರನೆಯ ರಾಷ್ಟ್ರ ಮಟ್ಟದ ಶ್ರೇಷ್ಠ ಸಾಧನೆಯಾಗಿದ್ದು, ಮುವ್ ಥಾಯಿ ಕ್ರೀಡೆಗೆ ಕರ್ನಾಟಕದಿಂದ ಮತ್ತೊಂದು ರತ್ನ ಸಿಕ್ಕಂತಾಗಿದೆ.
Leave a Reply