Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಂಕರಪುರ ಸೈಂಟ್ ಜಾನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ ರೇಂಜರ್ ಘಟಕ ಪ್ರಾರಂಭ

ಶಂಕರಪುರ ಸೈಂಟ್ ಜಾನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್   ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕಾಪು ನೇತೃತ್ವದಲ್ಲಿ  ರೋವರ್ ರೇಂಜರ್ ಘಟಕವನ್ನು ಪ್ರಾರಂಭಿಸಲಾಯಿತು.

ಅತಿಥಿಯಾಗಿ ಆಗಮಿಸಿದ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ಮಾತನಾಡಿ ಜಿಲ್ಲೆಯಲ್ಲಿ ಸುಮಾರು 45 ಸಾವಿರ ವಿದ್ಯಾರ್ಥಿಗಳು ಈ ಸ್ಕೌಟಿಂಗ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾರವರ ಆದೇಶದಂತೆ 10 ಸಾವಿರ ಹೊಸ ವಿದ್ಯಾರ್ಥಿಗಳನ್ನು  ಸೇರಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ತಾವೆಲ್ಲರು ಜಿಲ್ಲಾ ಸಂಸ್ಥೆಯೊಂದಿಗೆ ಕೈಜೋಡಿಸಬೇಕೆಂದು ಕರೆ ಇತ್ತರು.

ಈ ಸಂದರ್ಭದಲ್ಲಿ ಶಂಕರಪುರ ಇಗರ್ಜಿಯ ಧರ್ಮ ಗುರು ವಂದನೀಯ ಫಾದರ್ ಜೇಸಿಲ್ ಕುಟಿನ್ಹೊ,  ಶಾಲಾ ಆಡಳಿತಾಧಿಕಾರಿ ರೋಲ್ವಿನ್ ಫೆರ್ನಾಂಡಿಸ್, ಜಾನ್ ಮಾರ್ಟಿನ್ಸ್,  ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಸುಮನ್ ಶೇಖರ್, ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ಪ್ರಾಂಶುಪಾಲೆ ಪ್ರಿಯ ಕೆ. ಡೇಸಾ, ಕಾಪು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಮರಿಯ ಅನಿತಾ ಮೆಂಡೋನ್ಸ, ರೋವರ್  ಲೀಡರ್ ವಿನಯ್ ಶೆಟ್ಟಿ ಹಾಗೂ ರೇಂಜರ್ ಲೀಡರ್ ಯಕ್ಷಿತ ಮೇಡಂ ಹಾಗೂ ಶಾಲಾ ಉಪನ್ಯಾಸಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರೇಂಜರ್ಸ್ ಜೀನ್ ರವರು ಆಗಮಿಸಿದ ಸರ್ವರಿಗೂ ಸ್ವಾಗತಿಸಿ, ಮೆಲ್ರೀನ್ ರವರು ವಂದಿಸಿದರು.  ಗೌತಮಿಯವರು ನಿರೂಪಿಸಿದರು.

Leave a Reply

Your email address will not be published. Required fields are marked *