
ದಿನಾಂಕ 27/07/2025ರ ಭಾನುವಾರ ಸಂಜೆ ಗಂಟೆ 5:00ಕ್ಕೆ ಬ್ಲಾಕ್ ಕಾಂಗ್ರೆಸ್ ಕಛೇರಿ “ಇಂದಿರಾ ಭವನದಲ್ಲಿ”
4ನೇ ವಾರದ ಸಾಲಿಗ್ರಾಮ ಸ್ಥಾನೀಯ ಸಮಿತಿಯ ಸಭೆ,
ಸ್ಥಾನೀಯ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಅಮೀನ್
ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಸಭಾ ಸದಸ್ಯರು
ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಮುಖ್ಯ ಭಾಷಣಕಾರರಾಗಿ ಮಾತನಾಡಿ, ತಾವು ತಳ ಮಟ್ಟದಿಂದ ಹೇಗೆ ನಾಯಕನಾಗಿ ಬೆಳೆದೆ, ನಾಯಕನಾಗಬೇಕಾದರೆ ಜನ ಸೇವೆಯನ್ನು ಹೇಗೆ ಮಾಡಬೇಕು, ಪಟ್ಟಣ ಪಂಚಾಯತ್ ಸದಸ್ಯನಾಗಬೇಕೆಂಬ ಆಕಾಂಕ್ಷೆ ಉಳ್ಳವರು ಈಗಿನಿಂದಲೇ ಹೇಗೆ ತಯಾರಿಯನ್ನು ಮಾಡಬೇಕೆಂಬ ಕುರಿತು ಕಾರ್ಯಕರ್ತರ ಮನ ಮುಟ್ಟುವಂತೆ ತಿಳಿಸಿದರು.
ಕಾರ್ಯದರ್ಶಿ ರವೀಂದ್ರ ಕಾಮತ್ ಗುಂಡ್ಮಿ, ಪಟ್ಟಣ ಪಂಚಾಯತ್ ಸದಸ್ಯರಾದ ಗಣೇಶ್ ಬಡಾಹೊಳಿ ಕಾರ್ಕಡ,
ಮಾಜಿ ಪಟ್ಟಣ ಪಂಚಾಯತ್ ಸದಸ್ಯರೂ ಬ್ಲಾಕ್ ವಕ್ತಾರರೂ ಆದ ವಿನಯ್ ಕುಮಾರ್ ಕಬ್ಯಾಡಿಯವರು,
ಮಾಜಿ ಪಟ್ಟಣ ಪಂಚಾಯತ್ ಸದಸ್ಯರೂ ವಕೀಲರೂ ಆದ
ಶ್ರೀ ಮಹಮ್ಮದ್ ಸುಹಾನ್ ಸಾಸ್ತಾನ, ಮಾಜಿ ಪಟ್ಟಣ ಪಂಚಾಯತ್ ಸದಸ್ಯರಾದ ದಿನೇಶ್ ಬಂಗೇರ, ಹಲವು ಮಕ್ಕಳ ತಾಯಿ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿಯ ಸದಸ್ಯ ಗಣೇಶ್ ಕೆ ನೆಲ್ಲಿಬೆಟ್ಟು,
ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರಾದ
ಪಿ.ಚಂದ್ರ ಪೂಜಾರಿ ಪಾರಂಪಳ್ಳಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಮಾಜಿ ನಿರ್ದೇಶಕರೂ
ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರೂ ಆಗಿರುವ ಅಚ್ಚುತ ಪೂಜಾರಿ, ಪಕ್ಷದ ಪ್ರಮುಖ ಕಾಂಗ್ರೆಸ್ ಮುಖಂಡರಾದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸದಸ್ಯರಾದ ರಾಜೇಶ್ ನೆಲ್ಲಿಬೆಟ್ಟು, ರತ್ನಕರ್ ಪೂಜಾರಿ ಪಾರಂಪಳ್ಳಿ, ನಾಗೇಶ್ ಪೂಜಾರಿ ಪಾರಂಪಳ್ಳಿ, ಕೃಷ್ಣ ಪಿ. ಎಂ, ರಮೇಶ್ ಮೆಂಡನ್ ಬಡಹೋಳಿ, ಗಣೇಶ್ ಮೆಂಡನ್ ಬೆಟ್ಟಲಕ್ಕಿ, ರಮೇಶ್ ಮೂಡ್ ಹೋಳಿ, ಬಸವ ಮರಕಾಲ, ಶಶಿಧರ ಮೂಡ್ಹೋಳಿ, ಸುರೇಶ್ ನೆಲ್ಲಿಬೆಟ್ಟು, ಯಾಶಿನ್ ಪಡುಕೆರೆ, ಉಮೇಶ್ ಪಡುಬೈಲ್, ಶಂಕರ್ ಪೂಜಾರಿ ಪಾರಂಪಳ್ಳಿ, ರಾಘವೇಂದ್ರ ನೈರಿ ಕಾರ್ತಟ್ಟು, ಅಶೋಕ್ ಬಡಹೋಳಿ, ಸಂದೇಶ ಮೂಡ್ಹೋಳಿ, ರವಿ ಕಾರ್ಕಡ ಹಾಗೂ ಮಹಿಳಾ
ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Reply