
ಕರ್ನಾಟಕದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯ ಲಕ್ಷಣ ಮತ್ತೊಮ್ಮೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿರುವ ಸಂದರ್ಭದಲ್ಲಿ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ತಂದೊಡ್ಡಿದ್ದಾರೆ. ಕೇವಲ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಬೇಕೆನ್ನುವ ದೃಷ್ಟಿಯಿಂದ ದೇಶದ ಎಲ್ಲಾ ನಾಯಕರನ್ನು ಬಂಧಿಕೋಣೆಯಲ್ಲಿಟ್ಟು ಹಿಂಸೆ ಕೊಟ್ಟಿರುವಂತಹದ್ದು ಮಾಧ್ಯಮ ಮಿತ್ರರನ್ನು ಹತೋಟಿಯಲ್ಲಿಟ್ಟುಕೊಂಡು ಆಳ್ವಿಕೆ ಮಾಡಿರುವಂತಹದ್ದು ಜನ ಸಾಮಾನ್ಯರಿಗೆ ಬದುಕಲಿಕ್ಕೆ ಸಾಧ್ಯವಿಲ್ಲದಂತಹ ವಾತಾವರಣ ಆ ಸಂದರ್ಭದಲ್ಲಿ ಇಂದಿರಾ ಗಾಂಧಿ ಮಾಡಿರುವಂತಹದ್ದು ದೇಶವಾರು ತಿಳಿದಿರುವ ಸಂಗತಿ.
ಅದೇ ರೀತಿ ಈಗ ಸಾಮಾನ್ಯ ಬಡವ ಮನೆ ಕಟ್ಟುವ ದೃಷ್ಟಿಯಿಂದ ಪ್ರಾಧಿಕಾರದ ಕಚೇರಿಗೆ ಹೋದಾಗ ತನ್ನ ತುಂಡು ಭೂಮಿಯಲ್ಲಿ ಚಿಕ್ಕದಾದ ಮನೆ ಕಟ್ಟಿ ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವ ಆಸೆಯಿಂದ ಹೋದಾಗ ಅಲ್ಲಿ ಅವನ ಜಾಗದ ದಾಖಲಾತಿ 9/11 ಮಾಡುವ ಲಕ್ಷಣ ಕಾಣುತಿಲ್ಲ. ಜಾಗಕ್ಕೆ ಸಂಭಂದ ಪಟ್ಟ ಯಾವುದೇ ಪೇಪರ್ಗಳನ್ನು ಕೊಟ್ಟರು 2 ವರ್ಷ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಿಂದೆ ಭಾರತೀಯ ಜನತಾ ಪಾರ್ಟಿ ಇದ್ದಾಗ ಕೇವಲ 15 ರಿಂದ 20 ದಿವಸದಲ್ಲಿ ಪಂಚಾಯತ್ ನಲ್ಲಿ 9/11 ಕೊಡುವ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಈಗ ಭ್ರಷ್ಟಾಚಾರದ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ 9/11. ಏಕವಿನ್ಯಾಸ ನಕ್ಷೆ ಆಗುತ್ತಿಲ್ಲ. ಈ ಹಿಂದೆ 2000 ರೂಪಾಯಿ ಇದದ್ದು, ಈಗ 25000 ರೂಪಾಯಿ ಕೊಟ್ಟರು ಯಾವುದೇ ಜಾಗದ ದಾಖಲಾತಿ ಪೇಪರ್ ಗಳು ಆಗದಂತಹ ಸನ್ನಿವೇಶ ಎದುರಾಗಿದೆ. ಮನೆ ಕಟ್ಟಲು ಮರಳಿನ ಸಮಸ್ಯೆ, ಕಲ್ಲುಗಳ ಸಮಸ್ಯೆ ಅದೇ ರೀತಿ ಅನೇಕ ಸಮಸ್ಯೆ ಎದುರಿಸುವಂತಹದ್ದು ನಮ್ಮಲಿ ನಡೆಯುತ್ತಿದೆ. ಅದಕ್ಕೋಸ್ಕರ ಮುಂದಿನ ದಿನಗಳಲ್ಲಿ ತುರ್ತಾಗಿ ಸರಿ ಮಾಡದಿದ್ದರೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ವತಿಯಿಂದ ಪ್ರಾಧಿಕಾರಕ್ಕೆ ಮುತ್ತಿಗೆ ಹಾಕಿ ಬೀಗ ಜಡಿಯುವಂತಹದ್ದು ಮಾಡುತ್ತೇವೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷರಾದ ಕೆ ವಿಜಯ ಕೊಡವೂರು ತಿಳಿಸಿದರು.
Leave a Reply