
ಉಡುಪಿ ಪುತ್ತೂರು ಬ್ರಾಹ್ಮಣ ಮಹಾಸಭಾದ 21ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರಿ ದೇವಳದ ಸಭಾಗ್ರೃಹದಲ್ಲಿ ಜರುಗಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಪ್ರಕಾಶ್ ಭಟ್ .ಎನ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಮುಂದಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ಯುವಪೀಳಿಗೆ ಆಸಕ್ತಿಯಿಂದ ಮುಂದೆ ಬಂದು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಮುಖ್ಯ ಅತಿಥಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯಾದ ವೀಣಾ ವಿವೇಕಾನಂದ ಬಲ್ಲಾಳ್ ಇವರು ಧನಸಹಾಯ ವಿತರಿಸಿ ಮಾತನಾಡುತ್ತಾ ಬ್ರಾಹ್ಮಣ ಸ ಸಮಾಜದ ಮಕ್ಕಳು ಕೆ. ಎ.ಎಸ್, ಯುಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ದೇಶ ಸೇವೆ ಮಾಡುವ ಮೂಲಕ ಜೀವನದಲ್ಲಿ ಉನ್ನತಿ ಸಾಧಿಸಬೇಕು ಎಂದರು. ಕರ್ನಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವಾದಿರಾಜ ಭಟ್, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಾದ ವೇದಮೂರ್ತಿ ಪುತ್ತೂರು ಉದಯತಂತ್ರಿ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದುಷಿ ಹೇಮಲತಾ ಅನಂತರಾಮ್ ರಾವ್ ಇವರನ್ನು ಸನ್ಮಾನಿಸಲಾಯಿತು. ಐವತ್ತು ವರ್ಷಗಳ ಸಾರ್ಥಕ ದಾಂಪತ್ಯ ಜೀವನ ಪೂರೈಸಿದ ವಲಯದ ಸದಸ್ಯ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ ವೈ. ಸುಬ್ರಮಣ್ಯ ಭಟ್, ಯಶೋಧ ಮತ್ತು ಶ್ರೀ ವಾಸುದೇವ ಭಟ್ ಮಾಯಾಗುಂಡಿ, ಶಂಕರಿ ಭಟ್ ಮತ್ತು ಶ್ರೀ ಸುಬ್ರಮಣ್ಯ ಭಟ್, ಗೀತಾ ತಂತ್ರಿ ಮತ್ತು ಶ್ರೀರಾಮಚಂದ್ರ ತಂತ್ರಿ, ಸುಲೋಚನಾ ತಂತ್ರಿ ಮತ್ತು ಶ್ರೀ ವ್ಯಾಸಕೃಷ್ಣ ತಂತ್ರಿ ಇವರನ್ನು ಗೌರವಿಸಲಾಯಿತು. ಆಪತ್ಬಾಂಧವ ಸಮಿತಿ ವತಿಯಿಂದ ಅಶಕ್ತರಿಗೆ ವೈದ್ಯಕೀಯ ಸಹಾಯಧನ ವಿತರಿಸಲಾಯಿತು.
ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಳೆದ ಸಾಲಿನ ಎಸ್.ಎಸ್.ಎಲ್. ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2025-26ನೇ ಸಾಲಿನ ನೂತನ ಅಧ್ಯಕ್ಷರಾದ ಚಂದ್ರಶೇಖರ ಅಡಿಗ, ಕಾರ್ಯದರ್ಶಿ ನಿರಂಜನ್ ಭಟ್, ಕೋಶಾಧಿಕಾರಿ ರಾಮಚಂದ್ರ ರಾವ್ ಕೆ.ಜಿ., ಆಪದ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಜೋಶಿ ಹಾಗೂ ಇತರ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಮಹಾಸಭಾದ ಅಧ್ಯಕ್ಷರಾದ ಶುಭಾ ಬಾಳ್ತಿಲ್ಲಾಯ ಸ್ವಾಗತಿಸಿದರು. ಕಾರ್ಯದರ್ಶಿ ಮಂಜುಳಾ ವಿ. ಪ್ರಸಾದ್ ವರದಿ ವಾಚಿಸಿದರು. ನೇಹ, ಅದಿತಿ ಐತಾಳ್ ಪ್ರಾರ್ಥಿಸಿದರು. ಕೋಶಾಧಿಕಾರಿ ಕೃಷ್ಣಪ್ರಸಾದ್ ಕಾರಂತ್, ಆಪತ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಉಡುಪ, ಉಪಾಧ್ಯಕ್ಷೆ ಸುನೀತಾ ಚೈತನ್ಯ ಉಪಸ್ಥಿತರಿದ್ದರು. ಅನುಪಮಾ, ಅನ್ನಪೂರ್ಣ ಉಪ್ಪೂರ, ಸುರೇಖಾ ಗುರುರಾಜ್,ಸುರೇಶ್ ಕಾರಂತ್, ದುರ್ಗಾಪ್ರಸಾದ್, ರಾಮದಾಸ ಉಡುಪ, ವಿಜಯ್ ಕುಮಾರ್ ಸಹಕರಿಸಿದರು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಲಯದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Leave a Reply