
ವಿದ್ಯಾವಾಚಸ್ಪತಿ ಪದ್ಮಶ್ರೀ ಶ್ರೀ ಬನ್ನಂಜೆ ಗೋವಿಂದಾಚಾರ್ಯ ನೆನಪಿನ ಬನ್ನಂಜೆ 90 ಉಡುಪಿ ನಮನ ಕಾರ್ಯ ಕ್ರಮವು ಇದೇ ಬರುವ ಆಗಸ್ಟ್ ಮೂರರಂದು ಭಾನುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಹಳ –ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕರಾದ ರವಿರಾಜ್ ಎಚ್ .ಪಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ರಿಜಿಸ್ಟರ್ ಬೆಂಗಳೂರು ಇದರ ಬೆಳಕಿನ ಅಡಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ , ಹಾಗೂ ಎಂಜಿಎಂ ಕಾಲೇಜು ಉಡುಪಿ ಇವರ ಸಾಂಗತ್ಯದಲ್ಲಿ ನಡೆಯುವ ಒಂದು ದಿನದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ 8 ಗಂಟೆಗೆ ಬನ್ನಂಜೆ ಅವರ ಮೂಡುಬೆಟ್ಟಿನ ಮೂಲ ಮನೆಯ ಬ್ರಹ್ಮಸ್ಥಾನ ಮತ್ತು ನಾಗ ಸ್ಥಾನದ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ . 8:30 ಕ್ಕೆ ಬನ್ನಂಜೆಯವರು ಕಲಿತ ಆದಿಉಡುಪಿ ಶಾಲೆಯಿಂದ ಬನ್ನಂಜೆ ಯವರ ಭಾವಚಿತ್ರದೊಂದಿಗೆ ಮೆರವಣಿಗೆ ಎಂಜಿಎಂ ಕಾಲೇಜಿನವರಿಗೆ ನಡೆಯಲಿದ್ದು, ಮೆರವಣಿಗೆಗೆ ಚಾಲನೆಯನ್ನು ನಾಡೋಜ ಪ್ರೊ ಕೆ. ಪಿ. ರಾವ್ ಅವರು ನೀಡಲಿದ್ದಾರೆ.
ಬೆಳಗ್ಗೆ 9:20ಕ್ಕೆ ಬನ್ನಂಜೆಯವರ ಕೃತಿ ಆಧಾರಿತ ಯಕ್ಷಗಾನ ಪ್ರಸ್ತುತಿ ಕಾರ್ಯಕ್ರಮವಿರುತ್ತದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ವೇದವ್ಯಾಸಾಚಾರ್ಯ ಶ್ರೀಶಾನಂದರು ಉದ್ಘಾಟಿಸಲಿದ್ದು, ಛಾಯಾಚಿತ್ರ ಹಾಗೂ ಬನ್ನಂಜೆಯವರು ಬಳಸುತ್ತಿದ್ದ ವಸ್ತು ಪ್ರದರ್ಶನವನ್ನು ತರಂಗದ ವ್ಯವಸ್ಥಾಪಕ ಸಂಪಾದಕರಾದ ಶ್ರೀ ಸಂಧ್ಯಾ ಪೈಯವರು ಉದ್ಘಾಟಿಸುತ್ತಾರೆ. ಸಭಾಧ್ಯಕ್ಷತೆ ಯನ್ನು ನಾಡಿನ ಹಿರಿಯ ಸಾಹಿತಿ ವೈದೇಹಿ ಅವರು ವಹಿಸಿಕೊಳ್ಳಲಿದ್ದಾರೆ.
ಸಭಾ ಕಾರ್ಯ ಕ್ರಮದಲ್ಲಿ ಬನ್ನಂಜೆಯವರ ಕವಿತೆಗಳ ಹಾಡನ್ನು ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿಯವರು ನಡೆಸಿಕೊಡಲಿದ್ದಾರೆ. ನಂತರ ಬೆಳಗ್ಗೆ ಹಾಗೂ ಮಧ್ಯಾಹ್ನ ನಾಡಿನ ಹಿರಿಯ ವಿದ್ವಾಂಸರಿಂದ ಬನ್ನಂಜೆಯವರ ಕುರಿತಾದ 2 ಗೋಷ್ಠಿಗಳು ನಡೆಯಲಿದ್ದು, ಗೋಷ್ಟಿಯಲ್ಲಿ ಶ್ರೀ ಬ್ರಹ್ಮಣ್ಯಾಚಾರ್ಯ, ಶ್ರೀಕಾಂತ್ ಶೆಟ್ಟಿ ಕಾರ್ಕಳ, ಪಾದೇಕಲ್ಲು ವಿಷ್ಣುಭಟ್, ನಿತ್ಯಾನಂದ ಪಡ್ರೆ, ಎಂ.ಎಲ್. ಸಾಮಗ , ಗಣನಾಥ್ ಎಕ್ಕಾರ್ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಶ್ರೀ ವಿದ್ಯಾಭೂಷಣರ ಸಭಾಧ್ಯಕ್ಷತೆಯಲ್ಲಿ ಸಮಾರೋಪನುಡಿಯನ್ನು ಗಂಗಾವತಿ ಪ್ರಾಣೇಶ್ ಅವರು ನೆರವೇರಿಸಿ ಕೊಡಲಿದ್ದಾರೆ. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಲ್ಲೇಪುರಂ ಜಿ ವೆಂಕಟೇಶ್ ನಿರ್ವಹಿಸುತ್ತಾರೆ. ಸಭಾ ಕಾರ್ಯ ಕ್ರಮದ ನಂತರ ಸಂಜೆ 5:30ಕ್ಕೆ ಶ್ರೀ ವಿದ್ಯಾಭೂಷಣರಿಂದ ಆಚಾರ್ಯರ ಹಾಡುಗಳ ಹಾಡು, ನಾದ ಲಹರಿ ಕಾರ್ಯಕ್ರಮ ನಡೆಯಲಿದೆ.
Leave a Reply