
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಸಂಯುಕ್ತ ಆಶ್ರಯದಲ್ಲಿ ” ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ” ಯನ್ನು ದಿನಾಂಕ 30/07/2025 ರಂದು ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು ಇಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಶ್ರೀಯುತ ಮಂಜುನಾಥ್ ಪಿ. ನಾಯಕ್ ಇವರು ವಹಿಸಿದ್ದರು.ತಿಮ್ಮೇ ಶ್ ಬಿ. ಎನ್ ಬೈಂದೂರು ಪೊಲೀಸ್ ಉಪ ನಿರೀಕ್ಷಕರು ಇವರು “ಮಾನವ ಕಳ್ಳ ಸಾಗಾಣಿಕೆ ಹಾಗೂ ಮಾದಕ ದ್ರವ್ಯ,ಮದ್ಯ ವ್ಯಸನದ ದುಷ್ಪರಿಣಾಮ”ದ ಕುರಿತು ಮಾಹಿತಿ ನೀಡಿದರು. ಮಹೇಶ ದೇವಾಡಿಗ ರಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರು ಬಾಲ್ಯ ವಿವಾಹ, ಪೋಕ್ಸೋ,ಮಕ್ಕಳ ಸಹಾಯವಾಣಿ, ಮಕ್ಕಳ ಹಕ್ಕುಗಳು ಇದರ ಬಗ್ಗೆ ಮಾಹಿತಿ ನೀಡಿದರು.

ವಿಜೇಂದ್ರ ಕೆ,ಕಾರ್ಮಿಕ ನಿರೀಕ್ಷಕರು ಕುಂದಾಪುರ ಹಾಗೂ ಬೈಂದೂರು ವ್ರತ್ತ ಇವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಇದರ ಬಗ್ಗೆ ಮಾಹಿತಿಯನ್ನು ನೀಡಿದರು. ಕುಂದಾಪುರ ವ್ರತ್ತದ ಅರೋಗ್ಯಾಧಿಕಾರಿ ಭಾಗ್ಯಲಕ್ಷ್ಮಿ ಇವರು ಆರೋಗ್ಯ ದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನವೀನ್ ಪಿ ಪೊಲೀಸ್ ಉಪ ನಿರೀಕ್ಷಕರು ಹಾಗೂ ರವೀಂದ್ರ ಪಿ ಸಹ ಶಿಕ್ಷಕರು ಬೈಂದೂರು ಇವರು ಉಪಸ್ಥಿತರಿದ್ದರು.
Leave a Reply