
ಮಜೀದಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದೊರ್ಮೆ,ಪೆರ್ನೆ ಈ ಶಾಲೆಯು ಒಂದು ಸಮಯದಲ್ಲಿ 300ಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದಿ, ಈ ಪರಿಸರದ ಎಲ್ಲಾ ಮಕ್ಕಳಿಗೂ ಸುಮಾರು 80 ವರ್ಷದಿಂದ ವಿದ್ಯಾರ್ಜನೆಗೆಯ್ಯುತ್ತಾ ಬಂದು ಈ ಶೈಕ್ಷಣಿಕ ವರ್ಷದಲ್ಲಿ ಕೇವಲ 14 ಮಕ್ಕಳನ್ನು ಹೊಂದಿತ್ತು
ಈ ಪರಿಸರದಲ್ಲಿ ಒಂದೇ ಶಾಲೆ ಎನ್ನುವ ಪರಿಕಲ್ಪನೆ ಬದಲಾಗಿ ಗ್ರಾಮದೊಳಗೆ 4 ಸರಕಾರಿ ಶಾಲೆಯು ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲಾ ಶಾಲೆಗಳ ರೀತಿಯಲ್ಲಿ ದಾಖಲಾತಿ ಕಡಿಮೆಯಾಗಿದ್ದು ಒಂದು ಕಡೆಯಾದರೆ,ಆಂಗ್ಲ ಭಾಷೆಯ ಶಾಲೆಗಳ ಬಸ್ ಗಳು ಗ್ರಾಮದೊಳಗೆ ಮಕ್ಕಳನ್ನು ಕೊಂಡೊಯ್ಯಲು ಬರುತ್ತಿದ್ದು ಪೋಷಕರ ಆಂಗ್ಲ ಮಾಧ್ಯಮದ ಪ್ರೇಮವು ಅನುದಾನಿತ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂಜರಿಯುವ ಹಂತಕ್ಕೆ ಬಂದು ತಲುಪಿರುವುದು ಶಾಲಾ ದಾಖಲಾತಿಯಲ್ಲಿ ಕೊರತೆಯನ್ನು ಉಂಟು ಮಾಡಿದೆ.
ಪ್ರಸ್ತುತ ಇದ್ದಂತಹ ಆಡಳಿತ ಸಮಿತಿಯು ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳು ಇಲ್ಲದೆ ಹಾಲಿ ಸಮಿತಿಗೆ ಮುಂದಕ್ಕೆ ಕೊಂಡು ಹೋಗಲು ಕಷ್ಟಕರ ವಾಗುತ್ತದೆ ಎನ್ನುವ ನಿಲುವನ್ನು ಇಟ್ಟುಕೊಂಡು ,ಈ ದಿನ ಬದ್ರಿಯಾ ಜುಮಾ ಮಸ್ಜಿದ್ ಪೆರ್ನೆ ಇದರ ಆಡಳಿತ ಸಮಿತಿಗೆ ಶಾಲೆ ಹಾಗೂ ಶಾಲೆಗೆ ಸಂಭಂದಿಸಿದ ಎಲ್ಲಾ ದಾಖಲೆಯನ್ನು ಹಸ್ತಾಂತರ ಮಾಡಲಾಯಿತು.
ಈ ಸಮಯದಲ್ಲಿ ಶಾಲಾ ಸಂಚಾಲಕರಾಗಿದ್ದ ಶ್ರೀಯುತ ಸುಲೈಮಾನ್ ಪುರಿಯ, ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾಗಿದ್ದ ಮಿತ್ರದಾಸ್ ರೈ, ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಉಮ್ಮರ್ ಫಾರೂಕ್, ಕಾರ್ಯದರ್ಶಿ ಮೊಯ್ದಿನ್ ಕುಟ್ಟಿ, ಕೋಶಾಧಿಕಾರಿ ಅಬ್ದುಲ್ ಲತೀಫ್, ಸದಸ್ಯರಾದ ಆದಂ ದೊರ್ಮೆ, ಇಬ್ರಾಹಿಂ ಪಲ್ಲತ್ತಾರು, ಹೈದರ್ ಬಾನೋಟು, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ನಿವೃತ್ತ ಶಿಕ್ಷಕ ಶ್ರೀಯುತ ಜಯರಾಮ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು
Leave a Reply