
ಕೋಟ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕೋಟತಟ್ಟು ಗ್ರಾಮ ಪಂಚಾಯತ್ ಕಾರಂತ ಥೀಮ್ ಪಾರ್ಕ್ ಗೆ ಜು. 31ರಂದು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಕಾರಂತ ಥೀಂ ಪಾಕ್9 ಅಭಿವೃದ್ಧಿ ಕುರಿತಂತೆ ಗ್ರಾಮಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಬಳಿ ಚರ್ಚಿಸಿದರಲ್ಲದೆ ಒಂದು ಗ್ರಾಮ ಪಂಚಾಯತ್ ಸಾಹಿತಿಯೊಬ್ಬರ ಹೆಸರಿನಲ್ಲಿ ಥೀಂ ಪಾರ್ಕ ರಚಿಸಿ ಅದನ್ನು ನಿರ್ವಹಿಸುವ ಕಾರ್ಯವೈಕರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಕಾರಂತ ಥೀಂ ಪಾಕ್9 ವಿಕ್ಷೀಸಿ ಕಲ್ಮಾಡಿ ಅಂಗನವಾಡಿ ಮಕ್ಕಳೊಂದಿಗೆ ಕೆಲ ಹೊತು ಕಳೆದರು.
ಈ ವೇಳೆ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಸೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಕಂದಾಯ ನಿರೀಕ್ಷಕರಾದ ಮಂಜುನಾಥ ಬಿಲ್ಲವ, ಗ್ರಾಮಾಡಳಿತಧಿಕಾರಿ ಚೆಲುವರಾಜು, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಅಧಿಕಾರಿ ಪೂರ್ಣಿಮಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕೋಟತಟ್ಟು ಗ್ರಾಮ ಪಂಚಾಯತ್ ಕಾರಂತ ಥೀಮ್ ಪಾರ್ಕ್ ಗೆ ಜು. 31ರಂದು ಭೇಟಿ ನೀಡಿದರು.ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಸೀತಾ ಇದ್ದರು.
Leave a Reply