Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂತರಾಷ್ಟ್ರೀಯ  ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೋಟದ ದಿನೇಶ್ ಗಾಣಿಗರಿಗೆ ಒಂದು ಚಿನ್ನದ ಪದಕ

ಕೋಟ: ಇದೇ ಜು. 26 ರಿಂದ 27 ತನಕ ನೇಪಾಳ ರಂಗಶೀಲ ಸ್ಟೇಡಿಯಂನಲ್ಲಿ ನಡೆದಿರುವ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಕ್ರೀಡಾ ಪಟು ಕೋಟದ ದಿನೇಶ ಗಾಣಿಗ ಒಂದು ಚಿನ್ನದ ಪದಕ ಗಳಿಸಿದ್ದಾರೆ. ವೇಗ ನಡಿಗೆ, ಗುಂಡೆಸೆತ, ಲಾoಗ್ ಜಂಪ್‌ನಲ್ಲಿ ಭಾಗವಹಿಸಿ, 5 ಕಿಲೋಮೀಟರ್ ವೇಗ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ.

ಈ ಹಿಂದೆ ಥೈಲ್ಯಾಂಡ್ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನದ ಪದಕ, ಹರ್ಡಲ್ಸನಲ್ಲಿ ದ್ವಿತೀಯ ಒಂದು ಬೆಳ್ಳಿ ಪದಕ ಮತ್ತು ವೇಗ ನಡಿಗೆಯಲ್ಲಿ ತೃತೀಯ ಕಂಚು ಪದಕ ಹಾಗೂ 2021 ಸಿಂಗಾಪುರ, 2022 ಮಲೇಷಿಯಾ ಹಾಗೂ2023ರಲ್ಲಿ ಶ್ರೀಲಂಕಾ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ  ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಾಗಿದ್ದಾರೆ.

Leave a Reply

Your email address will not be published. Required fields are marked *