
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ ಕಾರ್ಕಡ ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯರ ಪುತ್ರಿ ರೀಷಲ್ ವಿದ್ಯಾಭ್ಯಾಸಕ್ಕೆ ಕ್ಷೇತ್ರದ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ ಸ್ಕೂಲ್‌ಬ್ಯಾಗ್ ಮತ್ತು ಛತ್ರಿಯನ್ನು ವಿತರಿಸಲಾಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಗಿರಿಜ ಶೇಖರ್ ಪೂಜಾರಿ ಪರಿಕರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ವಲಯ ಅಧ್ಯಕ್ಷೆ ರಾಧಾ ಪೂಜಾರಿ, ಬ್ರಹ್ಮಾವರ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿಯಾಗಿ ಪುಷ್ಪಲತಾ, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮೀ, ಸ್ಥಳಿಯ ಸೇವಾ ಪ್ರತಿನಿಧಿ ಶಾರದ, ವಿದ್ಯಾರ್ಥಿ ಪೋಷಕರಾದ ಜ್ಯೋತಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಂಡೇಶ್ವರ ವಲಯದ ಕಾರ್ಕಡ ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯರ ಪುತ್ರಿ ರೀಷಲ್ ವಿದ್ಯಾಭ್ಯಾಸಕ್ಕೆ ಕ್ಷೇತ್ರದ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ ಸ್ಕೂಲ್‌ಬ್ಯಾಗ್ ಮತ್ತು ಛತ್ರಿಯನ್ನು ವಿತರಿಸಲಾಯಿತು.
Leave a Reply