
ಕೋಟ: ಪ್ರತಿ ಮನೆಯಲ್ಲೂ ಧಾರ್ಮಿಕ ಚಿಂತನೆ ಪಸರಿಸಿಕೊಳ್ಳಬೇಕು ಆ ಮೂಲಕ ಸುಸಂಸ್ಕೃತರಾಗಲು ಸಾಧ್ಯವಿದೆ ಎಂದು ಧಾರ್ಮಿಕ ಚಿಂತಕ ಪುರೋಹಿತರಾದ ಪಾಂಡೆಶ್ವರ ತೀರ್ಥಬೈಲ್ ಶ್ರೀನಿಧಿ ಹೊಳ್ಳ ಅಭಿಪ್ರಾಯಪಟ್ಟರು.
ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವದ ಪ್ರಯುಕ್ತ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಆಷಾಡದಲ್ಲೊಂದು ದೈವಿಕ ಚಿಂತನೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿ ಆಷಾಡ ಮತ್ತು ಶ್ರಾವಣ ಮಾಸದ ಹಬ್ಬಗಳ ವೈಶಿಷ್ಟ್ಯ, ದೇವಸ್ಥಾನದಲ್ಲಿ ಭಕ್ತರು ಅರಿತು, ನಡೆದುಕೊಳ್ಳಬೇಕಾದ ಶಾಸ್ತೊಕ ವಿಚಾರಗಳನ್ನು ವೈಜ್ಞಾನಿಕ ನೆಲೆಯಾಧಾರಿತ ಉಪನ್ಯಾಸವನ್ನು ನೀಡಿದರು.
ಸ್ನೇಹಕೂಟದ ಸಂಚಾಲಕಿ ಭಾರತಿ ಮಯ್ಯ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷರಾದ ಸತೀಶ ಹೆಚ್ ಕುಂದರ್ ಇಂತಹ ಕಾರ್ಯಕ್ರಮಗಳನ್ನು ದೇವಸ್ಥಾನದಲ್ಲಿ ಆಯೋಜಿಸುವುದು ಸಮಾಜಕ್ಕೆ ಉಪಯುಕ್ತ ಹಾಗೂ ಮಾದರಿ ಎಂದರು. ಸ್ನೇಹಕೂಟದ ಸದಸ್ಯೆ ಸ್ವರ್ಣ ಲತಾ ಮಧ್ಯಸ್ಥ ಅತಿಥಿಗಳ ಪರಿಚಯಿಸಿ ಸ್ವಾಗತಿಸಿದರು. ಸದಸ್ಯೆ ಭಾಗ್ಯೇಶ್ವರಿಮಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಹೇಮಾ ಅಡಿಗ ಧನ್ಯವಾದ ಸಮರ್ಪಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊoಡಿತು.
ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವದ ಪ್ರಯುಕ್ತ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಆಷಾಡದಲ್ಲೊಂದು ದೈವಿಕ ಚಿಂತನೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಪಾಂಡೆಶ್ವರ ತೀರ್ಥಬೈಲ್ ಶ್ರೀನಿಧಿ ಹೊಳ್ಳ ಮಾತನಾಡಿದರು. ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷರಾದ ಸತೀಶ ಹೆಚ್ ಕುಂದರ್, ಸ್ನೇಹಕೂಟದ ಸಂಚಾಲಕಿ ಭಾರತಿ ಮಯ್ಯ ಇದ್ದರು.













Leave a Reply