Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ : ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

ಕುಂದಾಪುರ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ,ವಿದ್ಯಾರಂಗ ಮಿತ್ರ ಮಂಡಳಿ (ರಿ). ಮಹಾಕಾಳಿ ಮಹಿಳಾ ಮಂಡಳಿ (ರಿ) ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಿಂಗ್ ಫಿಶರ್ ಮಹಿಳಾ ಘಟಕ ಇವರ ನೇತೃತ್ವದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವು ಮುಕುಂದ ಖಾರ್ವಿಯವರ ಪ್ರಾರ್ಥನೆಯೊಂದಿಗೆ, ಆರಂಭವಾಯಿತು. ಜನ ಆರೋಗ್ಯ ಸಮಿತಿ ಖಾರ್ವಿಕೇರಿ ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಖಾರ್ವಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆ ಮಣಿಪಾಲ ಇದರ ತಜ್ಞ ವೈದ್ಯರಾದ ಶ್ರೀಯುತ ಡಾ.ಅಶ್ವಿನ್ ಕುಮಾರ್ ಮೊಹೊಪಾತ್ರರವರು ಆರೋಗ್ಯ ತಪಸಣಾ ಶಿಬಿರದ ಪ್ರಯೋಜನ ಪಡೆಯಲು ಕರೆ ನೀಡಿದರು.ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿಗಳಾದ ಶ್ರೀಯುತ ಡಾ.ಪ್ರೇಮಾನಂದ ರವರು ಮಾತನಾಡುತ್ತಾ ಜನಾರೋಗ್ಯ ಸಮಿತಿ ಮತ್ತು ನಮ್ಮ ಕ್ಲಿನಿಕ್ ಖಾರ್ವಿ ಕೇರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರೊಂದಿಗೆ, ಸರ್ಕಾರ ಯೋಗ ಶಿಬಿರವನ್ನು ನಡೆಸುತ್ತಿದ್ದು ಅದರ ಪ್ರಯೋಜನ ಪಡೆಯಬಹುದು ಮತ್ತು ನಾವು ಆಹಾರವನ್ನು ಸೇವಿಸುವಾಗ ಜಾಗೂರುಕತೆ ವಹಿಸಬೇಕು. ಆಹಾರ ಪದ್ಧತಿ ಕೂಡ ಬಹಳ ಮುಖ್ಯ.ಆರೋಗ್ಯ ಸುಧಾರಣೆಗೆ ಯೋಗ ಮಾಡಿ ದೇಹವನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಅನಾರೋಗ್ಯದಿಂದ ದೂರ ಇರಬಹುದು ಎಂದು ಹೇಳಿದರು.

ಶಾಸ್ವಕೋಶ ತಜ್ಞರಾದ ಡಾ.ಅಶ್ವಿನ್ ಕುಮಾರ್ ಮೊಹೊಪಾತ್ರ ಮತ್ತು ಹೃದಯರೋಗ ತಜ್ಞೆ ಡಾ.ಶ್ರೀಮತಿ ನಾಗರತ್ನ ಶೆಣೈ ಯವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿಲಾಯಿತು. ಕೊಲೆಸ್ಟ್ರಾಲ್ ತಪಾಸಣೆಗೆ ಸಹಕರಿಸಿದ ಶ್ರೀ ರವೀಂದ್ರ ಖಾರ್ವಿ ಜಿಲ್ಲಾ ಆಸ್ಪತ್ರೆ ಉಡುಪಿ ಹಾಗೂ ನಾಗರಾಜ ಖಾರ್ವಿ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಆರೋಗ್ಯ ತಪಸಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಒಟ್ಟು 210 ಮಂದಿ ಚಿಕಿತ್ಸೆ ಪಡೆದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾಕಾಳಿ ದೇವಸ್ಥಾನ ಅಧ್ಯಕ್ಷರಾದ ಶ್ರೀ ಅಜಂತಾ ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷರಾದ ದಾಮೋದರ ಖಾರ್ವಿ, ಶ್ರೀ ಮಹಾಕಾಳಿ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ವಸಂತಿ ಮೋಹನ್ ಸಾರಂಗ್, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ರಂಜಿತ್ ಖಾರ್ವಿ, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಮಹಿಳಾ ಘಟಕ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಚಂದ್ರಶೇಖರ ಸಾರಂಗ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಿನಕರ ಖಾರ್ವಿ ನಿರೂಪಿಸಿ, ಅಶೋಕ ಖಾರ್ವಿ ವಂದಿಸಿದರು.

Leave a Reply

Your email address will not be published. Required fields are marked *