ಕೋಟ: ಇಲ್ಲಿನ ಬನ್ನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ಆಡಳಿತ ಮಂಡಳಿಯ ಮಹತ್ವದ ಸಭೆ ಭಾನುವಾರ ನಡೆಯಿತು. ಸತತವಾಗಿ ಐದು ವರ್ಷಗಳಿಂದ ಆಡಳಿತದ ಚುಕ್ಕಾಣಿ ಹಿಡಿದ ಹಾಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಬಿ. ವಿಶ್ವನಾಥ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಆದಾಯ-ಖರ್ಚು ವೆಚ್ಚಗಳು ಸೇರಿದಂತೆ ಸಪರಿವಾರ ಶಿವರಾಯನ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೆ ಬಾಬ್ತು ಆದಾಯ-ಖರ್ಚು ವೆಚ್ಚಗಳನ್ನು ಪರಾಮರ್ಶಿಸಲಾಯಿತು.
ಮುಂದಿನ 2025-26ನೇ ಸಾಲಿಗೆ ನೂತನ ಆಡಳಿತ ಸಮಿತಿಗೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಂಕರ್ ಶೆಟ್ಟಿ, ಹೆಗ್ಡೆರಮನೆ, ಗೌರವಾಧ್ಯಕ್ಷರಾಗಿ ರಘುರಾಮ ಶೆಟ್ಟಿ ಕಂಬಳ ಗದ್ದೆಮನೆ ಬನ್ನಾಡಿ, ಉಪಾಧ್ಯಕ್ಷರಾಗಿ ಶಂಕರ್ ಶೆಟ್ಟಿ ಹಳೆಮನೆ, ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್ ಶೆಟ್ಟಿ ಕಂಬಳಗದ್ದೆಮನೆ, ಕೋಶಾಧಿಕಾರಿ ಐಟಿ. ಪ್ರಭಾಕರ್ ಶೆಟ್ಟಿ ಕಂಬಳಗದ್ದೆಮನೆ, ಸದಸ್ಯರುಗಳಾಗಿ ಬಿ. ವಿಶ್ವನಾಥ್ ಹೆಗ್ಡೆ , ಸುಧಾಕರ ಶೆಟ್ಟಿ, ಐಟಿ. ಕೆ. ಸುಭಾಶ್ಚಂದ್ರ ಶೆಟ್ಟಿ ಹೆಗ್ಡೆರಮನೆ, ಸಂತೋಷ ಶೆಟ್ಟಿ ಹಳೆಮನೆ ಆಯ್ಕೆಗೊಂಡರು.














Leave a Reply