Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮತ್ತೊಮ್ಮೆ ಪವಾಡಗೈದ ಸಾಸ್ತಾನ ಪಾಂಡೇಶ್ವರ ಕಳಿಬೈಲು ಕೊರಗಜ್ಜ !
ಸಾಲಿಗ್ರಾಮ ವ್ಯಕ್ತಿಯೊರ್ವರು 15 ವರ್ಷದ ಹಿಂದೆ ಕಳೆದುಕೊಂಡ ಚಿನ್ನ ಮರಳಿ ಮನೆಗೆ

ಕೋಟ: ಸಾಸ್ತಾನ ಪಾಂಡೇಶ್ವರ ಕೆಳಬೆಟ್ಟು ಮೂಡಹಡವಿನ ಕಳಿಬೈಲು ಕೊರಗಜ್ಜ ಕ್ಷೇತ್ರ ಪವಾಡಗಳ ಮೂಲಕ ಪ್ರಸಿದ್ಧಿ ಪಡೆದಿದೆ.ಸುಮಾರು 15 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪರಿಸರದ ಕುಟುಂಬವೊoದರ ಯಜಮಾನನ ಕೈಯಲ್ಲಿದ್ದ 60 ಗ್ರಾಂ ತೂಕದ (ಸುಮಾರು 6 ಲಕ್ಷ ರೂ. ಮೌಲ್ಯದ ) ಬಂಗಾರ ಕಳೆದುಹೋಗಿದ್ದು ಯಜಮಾನ ಚಿಂತೆಯಲ್ಲಿ ಮುಳುಗಿದ್ದರು. ಎಲ್ಲಿ ಹುಡುಕಿದರೂ ಕಳೆದುಹೋದ ಬಂಗಾರ ಸಿಗದೇ ಇದ್ದಾಗ ಅದನ್ನೆ ಮರೆತು ಬಿಟ್ಟಿದ್ದರು.

ಆದರೆ ಕಳೆದ ಒಂದು ವರ್ಷದ ಹಿಂದೆ ಮನೆ ಕೆಲಸದಾಕೆಗೆ ಮನೆಯ ಯಜಮಾನನ ಕೈಯಲ್ಲಿದ್ದ ಬಂಗಾರ ಸುಮಾರು 15 ವರ್ಷದ ಹಿಂದೆ ಕಳೆದುಹೋದ ವಿಚಾರ ಕಿವಿಗೆ ಬಿತ್ತು.ಆ ಕ್ಷಣ ಕೆಲಸದಾಕೆಗೆ ನೆನಪಿಗೆ ಬಂದಿದ್ದು ಶ್ರೀ ಕ್ಷೇತ್ರ ಕಳಿಬೈಲು ಕೊರಗಜ್ಜ ದೈವ ಈಕೆ ಕಳಿಬೈಲು ಕೊರಗಜ್ಜನ ಆರಾಧಕಳಾಗಿದ್ದು ತಾನು ನಂಬಿದ ಕ್ಷೇತ್ರಕ್ಕೆ ಮಹಿಳೆ ಬಂದು ಅನನ್ಯ ಭಕ್ತಿಯಿಂದ ಕೊರಗಜ್ಜನನ್ನು ನೆನದು ಶ್ರೀಘ್ರದಲ್ಲಿ ದೊರಕಿದರೆ ಶ್ರೀ ಕ್ಷೇತ್ರಕ್ಕೆ ಬಂದು  ಪೂಜೆ ನೀಡುತ್ತೇನೆ ಎಂದು ಹರಕೆ ಹೊತ್ತಳು.

ಆದರೆ ಇದೀಗ ಈಕೆಯ ಬೇಡಿಕೆಗೆ ಪವಾಡ ರೂಪದಲ್ಲಿ ಕೊರಗಜ್ಜ ಒಂದು ವರ್ಷದೊಳಗೆ ಮನೆಯ ಯಜಮಾನನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಳೆದುಕೊಂಡ 60 ಗ್ರಾಂ ಚಿನ್ನದ  ಬ್ರೆöÊಸ್‌ಲೈಟ್ ಮನೆ ಕೆಲಸದಾಕೆಗೆ  ಸಿಕ್ಕಿದ್ದು ಹರ್ಷಿತಳಾಗಿ ಮನೆಯ ಯಜಮಾನನಿಗೆ ತಿಳಿಸಿ ಕೊರಗಜ್ಜನ ಮಹಿಮೆಯನ್ನು ಕೊಂಡಾಡಿದ್ದಾಳೆ ಅಲ್ಲದೆ ಮಹಿಳೆ ಮಣ್ಣಲ್ಲಿ ದೊರೆತ 60 ಗ್ರಾಂ ಬಂಗಾರದ ಬ್ರೆಸ್‌ಲೈಟ್‌ನ್ನು ಪ್ರಾಮಾಣಿಕವಾಗಿ ಮನೆಯ ಯಜಮಾನಿಗೆ ನೀಡಿ. ಆ ಕುಟುಂಬದವರನ್ನು ಕಳಿಬೈಲಿಗೆ ಕರೆತಂದು ಹರಕೆ ತೀರಿಸಿ ಕೊರಗಜ್ಜ ಮತ್ತು ಪರಿವಾರ ದೈವ ದೇವರುಗಳಿಗೆ ಪೂಜೆ ಸಲ್ಲಿಸಿದ್ದಾರೆ.

ಈ ಬಗ್ಗೆ ಕ್ಷೇತ್ರದ ಪ್ರಧಾನ ಅರ್ಚಕ ಅಭಿಜಿತ್ ಶ್ರೀ ಕ್ಷೇತ್ರದ ಕೊರಗಜ್ಜ ನಂಬಿದವರಿಗೆ ನ್ಯಾಯ ದೊರಕಿಸುತ್ತಾನೆ ಎಷ್ಟೋ ವರ್ಷದಿಂದ ಕಳೆದುಕೊಂಡ  ಬಂಗಾರದ ಬ್ರೆöÊಸ್ ಲೈಟ್ ದೊರಕಿಸಿದ್ದು ಶ್ರೀ ಕ್ಷೇತ್ರದ ಮಹಿಮೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದರು.

Leave a Reply

Your email address will not be published. Required fields are marked *