
ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಸ.ನಂ 141/ರ ಸರಕಾರಿ ಜಮೀನಿನಲ್ಲಿ ಶ್ರೀಮತಿ ಮಂಜುಳಾ ಶೆಟ್ಟಿ ಎಂಬವರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿದ್ದು ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಚ್ಚ ನ್ಯಾಯಾಲಯದಲ್ಲಿ W.P 1248/2025 ರಂತೆ ರಿಟ್ ಪಿಟಿಷನ್ ದಾಖಸಿದ್ದು ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ:28/04/2025 ರ ಮಧ್ಯಂತರ ಆದೇಶ ನೀಡಿದ್ದು, ಸದ್ರಿ ಮಧ್ಯಂತರ ಆದೇಶದಲ್ಲಿ ಮನೆ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸುವಂತೆ ಉಲ್ಲೇಖಿಸಿರುವುದಿಲ್ಲ. ಅಲ್ಲದೇ ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಸರಿಯಾಗಿ ಪಾಲಿಸಿರುವುದಿಲ್ಲ.
ಆದರೆ ಸದ್ರಿ ಮಂಜುಳಾ ಶೆಡ್ರಿಯವರು ತನ್ನ ಅಳಿಯ ಜೀವನ್ ಶೆಟ್ಟಿ (ಮಗಳ ಗಂಡ) ಮೂಲಕ ದಿನಾಂಕ: 05/08/2025 ರಿಂದ ಸದ್ದಿ ಮನೆ ನಿರ್ಮಾಣದ ಕಾಮಗಾರಿಯನ್ನು ಪುನಃ ಪ್ರಾರಂಭಿಸಿರುತ್ತಾರೆ. ಈ ಬಗ್ಗೆ ಸ್ಥಳಕ್ಕೆ ತೆರಳಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದ್ದರೂ ಸ್ಥಗಿತಗೊಳಿಸಿರುವುದಿಲ್ಲ.

ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ V.A ಮತ್ತು R. I ಯವರಿಗೆ ಕಾನೂನು ಪಾಠ ಹೇಳಿ ಉದ್ಧಟತನದಿಂದ ಮೆರೆದ ಜೀವನ್ ಶೆಟ್ಟಿ ಎಂಬವನಿಗೆ ನಿನ್ನ ಮೇಲೆ ಸರಕಾರಿ ಅಧಿಕಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಉಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಕ್ಕೆ ಕೇಸು ದಾಖಲಿಸುತ್ತೇವೆ ಎಂದು ಹೇಳಿದಾಗ ನನ್ನ ಮರ್ಯಾದೆ ಪ್ರಶ್ನೆ ನಾನು ಸುಯಿಸೈಡ್ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಅಂಗಲಾಚ್ಚಿದಲ್ಲದೆ, ಹೈಕೋರ್ಟ್ ನ್ಯಾಯಾವಾದಿಗಳು ಸ್ಥಳ ಕ್ಕೆ ಯಾರೇ ಸರಕಾರಿ ಅಧಿಕಾರಿಗಳು ಬಂದರೆ ಅವರ ಫೋಟೋ ತೆಗೆದು ಕಳುಹಿಸಿ ಅವರಿಗೆ ತಕ್ಕ ಶಾಸ್ತಿ ಮಾಡುತ್ತಾರೆ ಹೇಳಿದರೆ ಎಂದು V. A ಮತ್ತು R. I ರವರಿಗೆ ಜೀವನ್ ಶೆಟ್ಟಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.

ದೂರು ಬಂದ ಹಿನ್ನೆಲೆಯಲ್ಲಿ ಸದ್ರಿಯವರಿಗೆ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಈ ಹಿಂದೆಯೂ ನೋಟೀಸು ನೀಡಲಾಗಿದ್ದರೂ ಸ್ಥಗಿತಗೊಳಿಸದೇ ಆಗಾಗ್ಗೆ, ಮನೆ ನಿರ್ಮಾಣ ಕಾಮಗಾರಿ ಮುಂದುವರಿಸಿರುವುದರಿಂದ ಸದ್ರಿಯವರ ಮೇಲೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಭೂಕಂದಾಯ ಕಾಯ್ಕೆ 1964 ಕಲಂ 192A ರಡಿ ಅಪರಾಧ ಸಂಖ್ಯೆ 0014/2025, ದಿನಾಂಕ:03/03/2025 ರಂದು ಪ್ರಕರಣ ದಾಖಲಿಸಲಾಗಿದೆ. .ಸರಕಾರಿ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡುತ್ತಿರುವುದು ಸಾಬೀತಾಗಿ ತಹಸಿಲ್ದಾರರು ನೀಡಿದ 8 ನೋಟಿಸ್ ಅನ್ನು ಉಲ್ಲಂಘಿಸಿದ ಮಂಜುಳಾ ಶೆಟ್ಟಿ, ಅಳಿಯ ಜೀವನ್ ಶೆಟ್ಟಿ ಮತ್ತು ಕಂಟ್ರಾಕ್ಟರ್ ಅಶೋಕ್ ಶೆಟ್ಟಿ ಮೇಲೆಕಾನೂನು ಕ್ರಮ ಕೈಗೊಳ್ಳಲು ತಹಸಿಲ್ದಾರರು ಹೆದರುತ್ತಿರುವುದಾದರೂ ಏಕೆ? ಇಲ್ಲಿ ಪಾಳೇಗಾರರ ಆಡಳಿತ ನಡೆಯುತ್ತಿದೆಯೇ? ಇದು ಬಿಹಾರೇ, ಹಣವಂತರಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯ, ಹೋರಾಟಗಾರರಿಗೆ ಸುಳ್ಳು ಕೇಸ್ ಹಾಕಿ 106 ಹಾಕಿ ತೊಂದರೆ ಕೊಟ್ಟಿದ್ದು ಸರಿಯೇ? ಉಚ್ಚ ನ್ಯಾಯಾಲಯ ಮತ್ತು ತಹಸಿಲ್ದಾರ ಆದೇಶ ಉಲ್ಲಂಘನೆ ಮಾಡಿದವರಿಗೆ ಯಾವುದೇ ಸೆಕ್ಷನ್ ಹಾಕದೆ ಇರುವುದು ವಿಪರ್ಯಾಸವೇ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
Leave a Reply