
ಕೋಟ: ಶ್ರೀ ಚಕ್ರೇಶ್ವರಿ ಅಮ್ಮನವರ ಹಾಗೂ ಪರಿವಾರ ದೈವಗಳ ದೇವಸ್ಥಾನ ಕೋಡಿಕನ್ಯಾನ ಇಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಗೀತಾ ಖಾರ್ವಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ವೇ.ಮೂ ಮಧುಸೂಧನ ಬಾಯಿರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿತು.
ಚಕ್ರೇಶ್ವರಿ ಅರ್ಚಕ ಕುಶಲ ಖಾರ್ವಿ ,ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ತಾಂಡೇಲ್ಕರ್, ಕಾರ್ಯದರ್ಶಿ ಸಂತೋಷ್ ಖಾರ್ವಿ ,ಮಾಜಿ ಆಡಳಿತ ಅಧ್ಯಕ್ಷ ರಾಮಚಂದ್ರ ಖಾರ್ವಿ, ಮಾಜಿ ಕಾರ್ಯದರ್ಶಿ ರಾಘವೇಂದ್ರ ಖಾರ್ವಿ, ಹಾಗೂ ಇನ್ನಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸುರೇಂದ್ರ ಖಾರ್ವಿಯವರ ನೇತ್ರತ್ವದ ಶ್ರೀ ಚಕ್ರೇಶ್ವರಿ ತಂಡ ಭಜನಾ ಕಾರ್ಯಕ್ರಮ ಹಾಗೂ ಮಾಲಿನಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಮಾಡಲಾಯಿತು.ಭಕ್ತಧಿಗಳಿಗೆ ಪನಿವಾರ ಸೇವೆ ಪ್ರಸಾದ ವಿತರಣೆ ನಡೆಯಿತು.
ಕೋಡಿ ಶ್ರೀ ಚಕ್ರೇಶ್ವರಿ ದೇಗುಲದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಗೀತಾ ಖಾರ್ವಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಚಕ್ರೇಶ್ವರಿ ಅರ್ಚಕ ಕುಶಲ ಖಾರ್ವಿ ,ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ತಾಂಡೇಲ್ಕರ್, ಕಾರ್ಯದರ್ಶಿ ಸಂತೋಷ್ ಖಾರ್ವಿ ಇದ್ದರು.
Leave a Reply