
ಕೋಟ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಾಳ್ಕುದ್ರು ಇದರ 50ನೇ ವರ್ಷದ ಪ್ರಯುಕ್ತ ಸರ್ವೋದಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಚೌತಿ ಗಮ್ಮತ್ 2025 ಕ್ರೀಡಾಕೂಟ ಸ.ಹಿ.ಪ್ರಾ.ಶಾಲೆ. ಬಾಳ್ಕುದ್ರುವಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಚೌತಿ ಗಮ್ಮತ್ ಕ್ರೀಡಾಕೂಟವನ್ನು ದೀಪವನ್ನು ಪ್ರಜ್ವಲಿಸುವ ಮೂಲಕ ಶಾಲೆಯ ನೀವೃತ್ತ ಮುಖ್ಯೋಪಾಧ್ಯಾಯಿನೀ ಶಶಿಕಲಾ ಉದ್ಘಾಟಿಸಿ ಶುಭಹಾರೈಸಿದರು. ಇದೇ ವೇಳೆ ನಿವೃತ್ತ ಮುಖ್ಯೋಪಾಧ್ಯಾಯ ಶಶಿಕಲಾ ಹಾಗೂ ದೇವಕಿ ರಂಗ ಮಾಸ್ಟರ್ ಇವರುಗಳನ್ನು ಸನ್ಮಾನಿಸಲಾಯಿತು. ನಂತರ ಶಾಲೆಯ ಮೈದಾನದಲ್ಲಿ ವಿಕೇಟ್‌ಗೆ ಗುರಿ ಇಡುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಐರೋಡಿ ಗ್ರಾಮಪಂಚಾಯತ್‌ನ ಸದಸ್ಯರಾದ ಸುಬ್ರಹ್ಮಣ್ಯ ಆಚಾರ್ಯ, ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷರಾದ ವಿಜಯ್ ಪೂಜಾರಿ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ದೇವಾಡಿಗ , ಸರ್ವೋದಯ ಯುವಕ ಮಂಡಲದ ಅಧ್ಯಕ್ಷ ವಿಜೇತ ದೇವಾಡಿಗ ಹಾಗೂ ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ಪಿ ಸುವರ್ಣ ಹಾಗೂ ವಿವಿಧ ಸಂಘದ ಸದಸ್ಯರು ಉಪಸ್ಥಿತರಿದ್ದರು. ಚೌತಿ ಗಮ್ಮತ್ ಕಾರ್ಯಕ್ರಮವನ್ನು ಬಾಳ್ಕುದ್ರು ಶಾಲಾ ದೈಹಿಕ ಶಿಕ್ಷಕ ಶ್ರೀಕಾಂತ್ ಸಾಮಂತ್ ನಿರೂಪಿಸಿ ವಂದಿಸಿದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಾಳ್ಕುದ್ರು ಇದರ 50ನೇ ವರ್ಷದ ಪ್ರಯುಕ್ತ ಸರ್ವೋದಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಚೌತಿ ಗಮ್ಮತ್ 2025 ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಶಶಿಕಲಾ ಹಾಗೂ ದೇವಕಿ ರಂಗ ಮಾಸ್ಟರ್ ಇವರುಗಳನ್ನು ಸನ್ಮಾನಿಸಲಾಯಿತು. ಐರೋಡಿ ಗ್ರಾಮಪಂಚಾಯತ್‌ನ ಸದಸ್ಯರಾದ ಸುಬ್ರಹ್ಮಣ್ಯ ಆಚಾರ್ಯ, ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷರಾದ ವಿಜಯ್ ಪೂಜಾರಿ ಇದ್ದರು.
Leave a Reply