Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮುದಾಯಕ್ಕೆ ನೀಡಲು ಆಗ್ರಹ

ಕೋಟ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮುದಾಯಕ್ಕೆ ನೀಡಬೇಕು. ಅದರಲ್ಲೂ ಕಾರ್ಯಕರ್ತರ ಜತೆ ನಿರಂತರ ಸಂಪರ್ಕವಿರುವ ಯುವ ನಾಯಕರಿಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್‌ಗೆ ಪ್ರಥಮ ಪ್ರಾಶಸ್ತ÷್ಯ ನೀಡಬೇಕು ಎಂದು ಮೊಗವೀರ ಯುವಸಂಘಟನೆ ಸಾಲಿಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಅಮೀನ್ ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕರಾವಳಿ ಭಾಗದಲ್ಲಿ ಉದ್ದಗಲಕ್ಕೂ ಮೊಗವೀರ ಸಮಾಜ ಇರುವುದರಿಂದ ನಮ್ಮ ಯುವ ನಾಯಕರನ್ನ ಪರಿಗಣಿಸಬೇಕು ಎಂದರು. ಗೋಪಾಲ್ ಜಿ. ಕೋಟ, ಸತೀಶ್ ಆಚಾರ್ಯ ಹರ್ತಟ್ಟು, ಕಿಶೋರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *