Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಮಾಜ ಸೇವೆಯೇ ನಮಗೆ ದೊಡ್ಡ ಶ್ರೀರಕ್ಷೆ, ಕೋಟೇಶ್ವರ ಮೊಗವೀರ ಯುವ ಸಂಘಟನೆ ಮಹಾಸಭೆಯಲ್ಲಿ ನಾಡೋಜ ಡಾ.ಜಿ.ಶಂಕರ್

ಸಮಾಜ ಎಂದು ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಸಮಾಜದ ಹಿಂದೆ ಬೆನ್ನಲುಬಾಗಿ ನಿಲ್ಲಬೇಕಾಗಿದೆ. ಕೋಟೇಶ್ವರ ಘಟಕವು ಎಲ್ಲಾ ಘಟಕಗಳಿಗೂ ಮಾದರಿಯಾಗಿ ತನ್ನ ಕೆಲಸವನ್ನು ಮಾಡುತ್ತಿದೆ. ಬಡವರ ಕಲ್ಯಾಣದ ಜೊತೆಗೆ ಶೈಕ್ಷಣಿಕ ನೆರವು ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ಚಾಚಿದಾಗ ಮಾತ್ರ ಸಮಾಜ ಸೇವೆಗೊಂದು ಬೆಲೆ ಇರುತ್ತದೆ. ನಾವು ಮಾಡುವ ಇತಂಹ ಸಮಾಜ ಸೇವೆಯೇ ನಮಗೆ ದೊಡ್ಡ ಶ್ರೀರಕ್ಷೆಯಾಗಲಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆ ಇವರ ಆಶ್ರಯದಲ್ಲಿ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 20ನೇ ವಾಷರ್ಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದ ಕಾರ್ಯಕ್ರಮದಲ್ಲಿ ಸಮಾಜದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. 

ಕೋಟೇಶ್ವರ ಘಟಕದ ಅಧ್ಯಕ್ಷ ನಾಗರಾಜ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಉಪಾಧ್ಯಕ್ಷ ಸದಾನಂದ ಬಳ್ಕೂರು, ಘಟಕದ ಉಸ್ತುವರಿ ಚಂದ್ರ ಮರಕಾಲ, ಮೊಗವೀರ ಯುವ ಸಂಘಟನೆ ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ರಾಘವೇಂದ್ರ ಕೊರವಡಿ, ಕೋಟೇಶ್ವರ ಘಟಕ ಸ್ಥಾಪಕಾಧ್ಯಕ್ಷ ಸತೀಶ್ ಎಂ ನಾಯ್ಕ್, ಕೋಟೇಶ್ವರ ಸೇವಾ ಟ್ರಸ್ಟ್ ಸದಸ್ಯ ಜಗದೀಶ್ ಮೊಗವೀರ ಮಾಕರ್ೋಡು, ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಸುರೇಶ್ ಮೊಗವೀರ ಶಾನಾಡಿ, ನೂತನ ಗೌರವಾಧ್ಯಕ್ಷ ಆನಂದ ಕುಂದರ್, ಕಾರ್ಯದಶರ್ಿ ರಾಘವೇಂದ್ರ ವಿ ಮೆಂಡನ್ ಹಳಅಳಿವೆ, ಮಹಿಳಾ ಸಂಘಟನೆ ಅಧ್ಯಕ್ಷೆ ಉಷಾ ಬಂಗೇರ, ಕಾರ್ಯದಶರ್ಿ ಸವಿತಾ ಆನಂದ ಕುಂದರ್ ಉಪಸ್ಥಿತರಿದ್ದರು.  

ಈ ಸಂದರ್ಭ ಕೋಟೇಶ್ವರ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಘವೇಂದ್ರ ಹರಪನಕೆರೆ ಮತ್ತು ಕಾರ್ಯದಶರ್ಿಯಾಗಿ ನಾಗರಾಜ ತೆಕ್ಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ರಾಜೇಶ್ ಕಾಂಚನ್ ಮತ್ತು ಮಹಿಳಾ ಸಂಘಟನೆಯ ಅಧ್ಯಕ್ಷೆ ಗಾಯಿತ್ರಿ ವಿಕ್ರಮ್, ಕಾರ್ಯದರ್ಶಿ ರಾಜೇಶ್ವರಿ ಮಾರ್ಕೊಡು ಇವರ ತಂಡಕ್ಕೆ ಅಧಿಕಾರ ಹಸ್ತಾಂತರಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಮತ್ತು ಸಂಘಟನೆಯ ನಿರ್ಗಮನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹಾಗೂ ಗೌರವಾಧ್ಯಕ್ಷರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗೈದ ರಾಘವೇಂದ್ರ ಕೊಮೆ, ರಾಜು ತೋಟದಬೆಟ್ಟು, ಆನಂದ ಕಾಂಚನ್ ಇವರನ್ನು ಮತ್ತು ಘಟಕದ ಗುರಿಕಾರರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಶಕ್ತರಿಗೆ ಸಹಾಯ ಧನವನ್ನು ವಿತರಿಸಲಾಯಿತು. ಘಟಕ ವ್ಯಾಪ್ತಿಯ ವಿಶೇಷ ಪ್ರತಿಭೆಗಳಿಂದ ಹಾಡು ನೃತ್ಯ ಹಾಸ್ಯ ಕಾರ್ಯಕ್ರಮ ಮೂಲಕ ಬಣ್ಣದಲ್ಲಿ ಬಗೆ ಬಣ್ಣ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲಾಶಕ್ತಿ ಕಲಾ ತಂಡದ ನಾಗರಾಜ ತೆಕ್ಕಟ್ಟೆ ಸಾರಥ್ಯದಲ್ಲಿ ನಗೆ ಕೊಪ್ಪರಿಗೆ ಹಾಸ್ಯ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಹೇಮಾವತಿ ತೆಕ್ಕಟ್ಟೆ ಬಳಗ ಪ್ರಾರ್ಥಿಸಿದರು. ರವೀಶ್ ಕೊರವಡಿ ಸ್ವಾಗತಿಸಿದರು. ಸುನೀಲ್ ಜಿ ನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಹಳಅಳಿವೆ ವರದಿ ಮಂಡಿಸಿದರು. ರಂಜಿತ್ ಚಾತ್ರಬೆಟ್ಟು ಆಯವ್ಯಯ ಮಂಡಿಸಿದರು.  ಶಿಕ್ಷಕ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ತೆಕ್ಕಟ್ಟೆ ವಂದಿಸಿದರು.

Leave a Reply

Your email address will not be published. Required fields are marked *