
ಅಗಾಧ ಭೂಮಿ ಜಲರಾಶಿ ಮರಗಿಡ ಬಳ್ಳಿಗಳು ಮತ್ತು ಲಕ್ಷಾಂತರ ಜೀವಿಗಳು ಪರಸ್ಪರ ಹಿತಕರವಾದ ಜೀವನ ಕಟ್ಟಿಕೊಳ್ಳುತ್ತವೆ. ಆದರೆ ಮನುಷ್ಯ ದುರಾಸೆ ದುಷ್ಟತನ ಮತ್ತು ತನ್ನ ವೃತ್ತಿ ಪ್ರವೃತ್ತಿಗಳಿಂದ ಇತರ ಮನುಷ್ಯರಿಗೂ ಮತ್ತು ಪ್ರಕೃತಿಗೂ ಮಾರಕವಾಗುವ ರೀತಿಯಲ್ಲಿ ಬದುಕುತ್ತಾನೆ. ಪ್ರಕೃತಿಯ ಮೇಲೆ ಮನುಷ್ಯನ ದಾಳಿ ನಿರಂತರವಾಗಿ ನಡೆದಿದೆ. ಇದು ಭವಿಷ್ಯದ ಜನಾಂಗಗಳ ಮೇಲೆ ಬಹಳ ಕೆಟ್ಟ ಪರಿಣಾಮಗಳನ್ನು ಮಾಡುತ್ತದೆ.
ಆದ್ದರಿಂದ ನಾವೆಲ್ಲರೂ ಪ್ರಕೃತಿಯ ಜೊತೆಗೆ ಹೊಂದಿಕೊಂಡು ಪ್ರಕೃತಿಗೆ ಸಹ್ಯವಾಗುವ ರೀತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕೆಂದು ಖ್ಯಾತ ಪತ್ರಕರ್ತ ಮತ್ತು ಸಾಮಾಜಿಕ ಚಿಂತಕ ಜಾನ್ ಡಿಸೋಜಾ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿ ನೆರಳು ಚಾರಿಟೇಬಲ್ ಟ್ರಸ್ಟ್ ಅರಸಮ್ಮಕಾನು ಶೇಡಿಮನೆ ಆಶ್ರಯದಲ್ಲಿ ನಡೆದ ಒಂದು ವಾರಗಳ ಸರಣಿ ತರಬೇತಿ ಕಾರ್ಯಕ್ರಮ ಪ್ರೇರಣಾ ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜೀವನದ ಉದ್ದೇಶ ಮತ್ತು ಅದನ್ನು ಸಾಧಿಸುವ ವಿಧಾನಗಳ ಬಗ್ಗೆ ಅರಿವು ಮೂಡಿಸಿದರು.
ನೆರಳು ಟ್ರಸ್ಟ್ ನ ಅಧ್ಯಕ್ಷ ಶ್ರೀ ರಾಧಾಕೃಷ್ಣ ಕ್ರಮಧಾರಿ ಶೈಕ್ಷಣಿಕ ಮತ್ತು ಜೀವನದ ಯಶಸ್ವಿಗೆ ತರಬೇತಿಯ ಅಗತ್ಯದ ಕುರಿತು ಹೇಳಿದರು. ಟ್ರಸ್ಟ್ ಸದಸ್ಯ ಶ್ರೀ ಸುರೇಶ್ ಶೆಟ್ಟಿ, ಶಂಕರನಾರಾಯಣ ಠಾಣಾಧಿಕಾರಿ ಜನಾರ್ಧನ , ಮತ್ತು ಕುಳ್ಳುಂಜೆ ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ವಸಂತ್ ಜಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಚಿನ್ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕ ಮಹಾಲಿಂಗಪ್ಪ ವಂದಿಸಿದರು.
Leave a Reply