Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಪಡುಕರೆ ವಿದ್ಯಾಸಂಸ್ಥೆಗೆ ಡಿಜಿಟಲ್ ಶಕ್ತಿಕರಣ ಕೊಡುಗೆ ಹಸ್ತಾಂತರ

ಕೋಟ: ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತೆ ಉತ್ತೇಜಿಸುವ ಉದ್ಧೇಶದಿಂದ ನೆಕ್ಸ್ಪಿ ಇಂಡಿಯಾ (ಪ್ರೆöÊ) ಲಿಮಿಟೆಡ್ ಬೆಂಗಳೂರು ಇವರಿಂದ ಸರಕಾರಿ ಪ್ರೌಢಶಾಲೆ ಮಣೂರು ಪಡುಕರೆ ಸಂಸ್ಥೆಗೆ ಅತ್ಯಾಧುನಿಕ ಡೆಲ್ ಕಂಪೆನಿಯ ಹತ್ತು ಕಂಪ್ಯೂಟರ್ ಸೆಟ್‌ಗಳನ್ನು ಓಘಿP ಯು ಸಿ .ಎಸ್.ಆರ್ ಕಾರ್ಯಕ್ರಮದ ಭಾಗವಾಗಿ ನೀಡಿದೆ.

ಶಿಕ್ಷಣ ಪ್ರಗತಿ ಭವಿಷ್ಯದ ಸುಸ್ಥಿರಕ್ಕೆ ತಂತ್ರಜ್ಞಾನ ಶಿಕ್ಷಣ ಅಗತ್ಯದ ಹಿನ್ನಲೆಯಲ್ಲಿ ಗ್ರಾಮಾಂತರ ಶಾಲೆಗೆ ಕೊಡುಗೆ ನೀಡಿರುವ ನೆಕ್ಸ್ಪಿ  ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರ ನಿರ್ದೇಶಕರಾದ ಹಿತೇಶ್ ಗರ್ಗ್ ಹಾಗೂ ವೇಣುಗೋಪಾಲ್ ಪುವ್ವಾಡ, ಸೌಂದರ್ ರಾಜ್ ಸಿ, ರಾಹುಲ್ ಬೇಡಿ, ಕಂಕನಾ ಕರಕನ್, ರಾಜೀವ್ ಕುಮಾರ್ ಶ್ರೀವಾಸ್ತವ, ಸರಿತಾ ತ್ಯಾಗಿ, ಜೆರ್ಲಿನ್ ಹೆನ್ರಿ ಮತ್ತು ಸಂದೇಶ್ ಪೂಜಾರಿ ಸಿರಿಯಾರದ ಮನೆ ಇವರಿಗೆ ಕೃತಜ್ಞತೆಯನ್ನು ಸಲ್ಲಿಸಿಕೊಳ್ಳಲಾಯಿತು.

ಕೊಡುಗೆ ಹಸ್ತಾಂತರದ, ಸಮಾರಂಭದಲ್ಲಿ ಕೋಟ ಪಂಚಾಯತ್ ಸದಸ್ಯ ಜಯರಾಮ್ ಶೆಟ್ಟಿ, ಸ್ಥಳೀಯರಾದ ಕೃಷ್ಣ ಪೂಜಾರಿ ಹಾಗು ಸತೀಶ್ ಪೂಜಾರಿ ಸಿರಿಯಾರದ ಮನೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ  ಅಧ್ಯಕ್ಷ ನಾಗರಾಜ್ , ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ವಿ. ಗಾಂವ್ಕರ್,ಹಿರಿಯ ಶಿಕ್ಷಕರಾದ ರಾಮದಾಸ್ ನಾಯಕ್ ,ಸಹಶಿಕ್ಷಕರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.

ನೆಕ್ಸ್ಪಿ ಇಂಡಿಯಾ (ಪ್ರೆöÊ) ಲಿಮಿಟೆಡ್ ಬೆಂಗಳೂರು ಇವರಿಂದ ಸರಕಾರಿ ಪ್ರೌಢಶಾಲೆ ಮಣೂರು ಪಡುಕರೆ ಶಾಲೆಗೆ ಅತ್ಯಾಧುನಿಕ ಡೆಲ್ ಕಂಪೆನಿಯ ಹತ್ತು ಕಂಪ್ಯೂಟರ್ ಸೆಟ್‌ಗಳನ್ನು ಹಸ್ತಾಂತರಿಸಿದರು. ಕೋಟ ಪಂಚಾಯತ್ ಸದಸ್ಯ ಜಯರಾಮ್ ಶೆಟ್ಟಿ, ಸ್ಥಳೀಯರಾದ ಕೃಷ್ಣ ಪೂಜಾರಿ ಹಾಗು ಸತೀಶ್ ಪೂಜಾರಿ ಸಿರಿಯಾರದ ಮನೆ, ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ವಿ. ಗಾಂವ್ಕರ್ ಇದ್ದರು.

Leave a Reply

Your email address will not be published. Required fields are marked *