
ವಿಯೆಟ್ನಾಂ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ “ಸೂಪರ್ ಟ್ಯಾಲೆಂಟ್” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮಂಗಳೂರಿನ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್ ಗೆ ತುಂಬು ಹೃದಯದ ಅಭಿನಂದನೆಗಳು.
ಮಂಗಳೂರಿನ ಕುಲಶೇಖರದಲ್ಲಿ ನೆಲೆಸಿರುವ ಶ್ರೀ ರಕ್ಷಿತ್ ಹಾಗೂ ಶ್ರೀಮತಿ ಅಶ್ವಿನಿ ದಂಪತಿಗಳ ಸುಪುತ್ರನಾಗಿರುವ ಈ ಬಾಲ ಪ್ರತಿಭೆ ಬಿಜೈನ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದು ಕಿರಿಯ ವಯಸ್ಸಿನಲ್ಲಿಯೇ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಭಾರತಕ್ಕೆ ಕೀರ್ತಿ ತರುವ ಮೂಲಕ ಅನೇಕ ಮಕ್ಕಳಿಗೆ ಪ್ರೇರಣೆಯಾಗಿದ್ದಾನೆ.
ಅವರ ಈ ಸಾಧನೆ, ಮಂಗಳೂರು ನಗರಕ್ಕೆ ಮಾತ್ರವಲ್ಲ, ಕರ್ನಾಟಕ ಸೇರಿದಂತೆ ಇಡೀ ಭಾರತಕ್ಕೆ ಹೆಮ್ಮೆಯಾಗಿದ್ದು, ಭವಿಷ್ಯದಲ್ಲಿ ಇಂತಹ ಪ್ರತಿಭೆಗಳು ಇನ್ನಷ್ಟು ಬೆಳಕಿಗೆ ಬರಲಿ ಎಂದು ಆಶಿಸುತ್ತೇನೆ.
Leave a Reply