
ಕೋಟ: ಇಲ್ಲಿನ ಕೋಟದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದೀಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು ಈ ಹಿನ್ನಲ್ಲೆಯಲ್ಲಿ ಆ.27ರಿಂದ ಸೆ.4ರ ತನಕ ನಡೆಯಲಿರು ಸುವರ್ಣ ಸಂಭ್ರಮಕ್ಕೆ ಹೊರೆಕಾಣಿಕೆಯನ್ನು ಕೋಟದ ವಿವಿಧ ಭಾಗಗಳಿಂದ ಆಗಮಿಸಿತು.
ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ಚರ ದೇಗುಲದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಸಿರಿಸಿಕೊಂಡು ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲವನ್ನು ಸಮಾಪನಗೊಳಿಸಿತು.
ಚಂಡೆ ವಾದ್ಯಘೋಷಗಳೊಂದಿಗೆ ನರವೆರಿದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಮಹಿಳೆಯರು ತಾವು ತಂದ ಹೊರಕಾಣಿಕೆಯನ್ನು ತಲೆಯಲ್ಲಿಟ್ಟುಕೊಂಡು ಗಣೇಶೋತ್ಸವ ನಡೆಯುವ ಸ್ಥಳಕ್ಕೆ ಆಗಮಿಸಿದರು.
ಹೊರೆಕಾಣಿಕೆಯನ್ನು ಶ್ರೀಹಿರೇ ಮಹಾಲಿಂಗೇಶ್ವರ ದೇಗುಲ ಅಧ್ಯಕ್ಷರಾದ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗಣೇಶೊತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಮಾನಾಥ ಜೋಗಿ, ಕಾರ್ಯದರ್ಶಿ ಚಂದ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್, ಉಪಾಧ್ಯಕ್ಷರಾದ ಚಂದ್ರ ಪೂಜಾರಿ, ಒಳಮಾಡು ಸೋಮ ಮರಕಾಲ, ಜಿ.ಎಸ್ ಆನಂದ್ ದೇವಾಡಿಗ, ಪ್ರಮುಖರಾದ ಜಗನಾಥ ಕಾಂಚನ್, ಸುರೇಶ್ ಗಾಣಿಗ ಶೇವಧಿ, ದೇವದಾಸ ಕಾಂಚನ್, ಕೋಟ ಅಮೃತೇಶ್ವರೀ ದೇಗುಲ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಶ್ರೀಹಿರೇ ಮಹಾಲಿಂಗೇಶ್ವರ ದೇಗುಲ ಟ್ರಸ್ಟಿಗಳಾದ ಶ್ರೀನಿವಾಸ ಅಡಿಗ, ಭಾಸ್ಕರ ಶೆಟ್ಟಿ, ಉಮೇಶ್ ಪೂಜಾರಿ ಕದ್ರಿಕಟ್ಟು, ಶ್ರೀಲಕ್ಷ್ಮೀ ಪ್ರಭು,ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಮತ್ತಿತರರು ಇದ್ದರು.
ಕೋಟದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಹೊರೆಕಾಣಿಕೆ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ಚರ ದೇಗುಲದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಸಿರಿಸಿಕೊಂಡು ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲವನ್ನು ಸಮಾಪನಗೊಳಿಸಿತು
Leave a Reply