
ಕೋಟ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ ಕಟ್ಟೆ ಇಲ್ಲಿ ಪ್ರಾಚಾರ್ಯರಾಗಿ ವಯೋನಿವೃತ್ತಿ ಗೊಳ್ಳುತ್ತಿರುವ ಗಂಗಾಧರಪ್ಪ ರವರನ್ನು ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆ.29ರಂದು ಸನ್ಮಾನಿಸಿ ಗೌರವಿಸಲಾಯಿತು.
ಕ್ಯಾಲ್ಕುಲೇಷನ್ ಮತ್ತು ಡ್ರಾಯಿಂಗ್ ವಿಷಯದಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಿಕೊಂಡು ಮಿಶಿನಿಸ್ಟ್, ಫಿಟ್ಟರ್,ಟರ್ನರ್, ಹೆಚ್ಚಿನ ತರಬೇತಿ ನೀಡಿ ಪದೋನ್ನತಿ ಹೊಂದಿ ಕಳೆದ ಎರಡುವರೆ ವರ್ಷದಿಂದ ಪ್ರಾಚಾರ್ಯರಾಗಿ, 37 ವರ್ಷಗಳ ಸುದೀರ್ಘ ಸರ್ಕಾರಿ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಬಿದ್ಕಲ್‌ಕಟ್ಟೆ, ಬೈಂದೂರು, ಭಟ್ಕಳ, ಹಾಗೂ ಕೆರ್ಗಲ್ ಐಟಿಐ ಗಳಲ್ಲಿ ಪ್ರಭಾರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರ ತರಬೇತಿ ಅಧಿಕಾರಿ ಗಣೇಶ್.ಹೆಚ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿದ್ಕಲ್‌ಕಟ್ಟೆ ಸರ್ಕಾರಿ ಐಟಿಐ ನಿವೃತ್ತ ತರಬೇತಿ ಅಧಿಕಾರಿ ಸತೀಶ್.ಎಸ್ ಸಂಸ್ಥೆಯ ಮನೋಜ್ ಕುಮಾರ್ ಸಿಬ್ಬಂದಿಗಳಾದoತ ಸುಚಿತ್ರ, ಪ್ರಫುಲ್ಲ , ಸುಮಂಗಲ ಹಾಗೂ ತರಬೇತಿದಾರರು ಉಪಸ್ಥಿತರಿದ್ದರು
ಆರ್. ಎ. ಸಿ.ಟಿ. ವಿಭಾಗದ ಕಿರಿಯ ತರಬೇತಿ ಅಧಿಕಾರಿ ಪ್ರಸನ್ನ ಆಚಾರ್ಯ ಸ್ವಾಗತಿಸಿದರು. ಎಲೆಕ್ಟಾçನಿಕ್ ಮೆಕಾನಿಕ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಮನೋಹರ್ ಶೆಟ್ಟಿ ವಂದಿಸಿದರು. ಫಿಟ್ಟರ್ ವಿಭಾಗದ ಕಿರಿಯತರಬೇತಿ ಅಧಿಕಾರಿ ಅಜಿತ್ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ ಕಟ್ಟೆ ಇಲ್ಲಿ ಪ್ರಾಚಾರ್ಯರಾಗಿ ವಯೋನಿವೃತ್ತಿ ಗೊಳ್ಳುತ್ತಿರುವ ಗಂಗಾಧರಪ್ಪ ರವರನ್ನು ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆ.29ರಂದು ಸನ್ಮಾನಿಸಿ ಗೌರವಿಸಲಾಯಿತು. ಬಿದ್ಕಲ್‌ಕಟ್ಟೆ ಸರ್ಕಾರಿ ಐಟಿಐ ನಿವೃತ್ತ ತರಬೇತಿ ಅಧಿಕಾರಿ ಸತೀಶ್.ಎಸ್ ಸಂಸ್ಥೆಯ ಮನೋಜ್ ಕುಮಾರ್ ಸಿಬ್ಬಂದಿಗಳಾದoತ ಸುಚಿತ್ರ, ಪ್ರಫುಲ್ಲ ಇದ್ದರು.
Leave a Reply